Black Fungus: ಬೆಳಗಾವಿ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಪ್ರಕರಣ ಹೆಚ್ಚಳ; ಬಿಮ್ಸ್ ನಲ್ಲಿ ವೈದ್ಯರು, ಸೌಲಭ್ಯ ಕೊರತೆ

ಜಿಲ್ಲೆಯಲ್ಲಿ ಮಾರಕ ಬ್ಲಾಕ್ ಫಂಗಸ್ ಗೆ  15 ಜನರ ಬಲಿಯಾಗಿದ್ದಾರೆ. ಒಟ್ಟು 198 ಪ್ರಕರಣ ದಾಖಲಾಗಿದ್ದು, 84 ಜನ ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 64 ರೋಗಿಗಳಿಗೆ ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಆದರೆ, ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದೇ ರೋಗಿಗಳ ಆತಂಕಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ(ಜೂನ್ 10); ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೇ ಜಿಲ್ಲೆಯಲ್ಲಿ ಮಾರಕ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.  ಬ್ಲಾಕ್ ಫಂಗಸ್ ಶಸ್ತ್ರ ಚಿಕಿತ್ಸೆಗೆ ಬಿಮ್ಸ್ ಆಸ್ಪತ್ರೆಯಲ್ಲಿ ತಜ್ಞ ವೈದರ ಕೊರತೆ ಇದೆ. ಜತೆಗೆ ಬಿಮ್ಸ್ ನಲ್ಲಿ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರೋ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಸೌಲಭ್ಯದ ಕೊರತೆ ಇದೆ. ಇದು ರೋಗಿಗಳ ಸಂಬಂಧಿಕರ ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಗೋವಿಂದ ಕಾಜಗೋಳ ಹಾಗೂ ಬಿಮ್ಸ್ ವಿಶೇಷ ಆಡಳಿತ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ ಸಹ ಗಮನ ಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಪಾಸಿಟಿವಿಟಿ ರೇಟ್ 8.91ರಷ್ಟು ಕಳೆದ ದಿನದಲ್ಲಿ ದಾಖಲಾಗಿದೆ. ಇನ್ನೂ ಮರಣ ಪ್ರಮಾಣ ಶೇ 1.6ರಷ್ಟು ದಾಲಾಗಿದೆ. ಜಿಲ್ಲೆಯ ಸವದತ್ತಿ, ರಾಮದುರ್ಗ ಹಾಗೂ ಗೋಕಾಕ್ ನಲ್ಲಿ ಅತ್ಯಂತ ಕಡಿಮೆ ಕೇಸ್ ಗಳು ನಿತ್ಯ ದಾಖಲಾಗುತ್ತಿವೆ. ಆದರೇ ಜಿಲ್ಲೆಗೆ ಸೋಂಕಿನ ಅಪಾಯ ಇರೋದು ಪಕ್ಕದ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯೊಂದು ಒಂದು ವಾರ ಲಾಕ್ ಡೌನ್ ಮುಂದುವರೆಸಬೇಕು ಎಂದು ಸಿಎಂಗೆ ಡಿಸಿಎಂ ಗೋವಿಂದ ಕಾರಜೋಳ ಮನವಿಯನ್ನು ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಮಾರಕ ಬ್ಲಾಕ್ ಫಂಗಸ್ ಗೆ  15 ಜನರ ಬಲಿಯಾಗಿದ್ದಾರೆ. ಒಟ್ಟು 198 ಪ್ರಕರಣ ದಾಖಲಾಗಿದ್ದು, 84 ಜನ ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 64 ರೋಗಿಗಳಿಗೆ ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಆದರೆ, ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದೇ ರೋಗಿಗಳ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಇಬ್ಬರೇ ಶಸ್ತ್ರ ಚಿಕಿತ್ಸೆ ಮಾಡೋ ತಜ್ಞ ವೈದ್ಯರು ಇದ್ದು, ಶಸ್ತ್ರ ಚಿಕಿತ್ಸೆಗೆ ಬೇಕಿರೋ ಉಪಕರಣ ಒಂದೇ ಲಭ್ಯ ವಿದೆ.  ಒಂದು ಶಸ್ತ್ರ ಚಿಕಿತ್ಸೆಗೆ ಬೇಕಿದೆ 3ರಿಂದ 4 ಗಂಟೆ ಸಮಯ ಬೇಕಿದೆ. ಈ ವರೆಗೆ 25 ರೋಗಿಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಇದನ್ನೂ ಓದಿ: Sushant Singh Rajput: ನಟ ಸುಶಾಂತ್ ಸಿಂಗ್ ಸಾವಿನ ಕುರಿತ ಚಿತ್ರಕ್ಕೆ ತಡೆ ನೀಡಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್​

ಬಿಮ್ಸ್ ನಲ್ಲಿ ಬ್ಲಾಕ್ ಫಂಗಸ್ ಶಸ್ತ್ರ ಚಿಕಿತ್ಸೆಗೆ ವೈದ್ಯರ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಹೊರಗಟೆಯಿಂದ ಶಸ್ತ್ರಚಿಕಿತ್ಸೆ ಮಾಡೋ ವೈದ್ಯರನ್ನು ನೇಮಿಸಲು ಸೂಚನೆ ನೀಡಿದ್ದೇನೆ.  ವಿಜಿಟಿಂಗ್ ಸರ್ಜನ್ ನೇಮಕ ಮಾಡಿ ಪ್ರತಿ ಚಿಕಿತ್ಸೆ ಹಣವ ಕೊಡುವಂತೆ ಹೇಳಿದ್ದೇನೆ.  ಸೌಲಭ್ಯ ಒದಗಿಸಲು ಈಗಾಗಲೇ ಟೆಂಡರ್ ಮೂಲಕ ಅಗತ್ಯ ವಸ್ತು ಖರಿದೀಸಲು ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: Rahul Gandhi| ಲಸಿಕೆಗೆ ಆನ್​ಲೈನ್ ನೋಂದಣಿ ಸರಿಯಲ್ಲ, ಇಂಟರ್​ನೆಟ್ ಇಲ್ಲದವರಿಗೆ ಬದುಕುವ ಹಕ್ಕಿಲ್ಲವೇ?: ರಾಹುಲ್ ಗಾಂಧಿ ಪ್ರಶ್ನೆ

ಬಿಮ್ಸ್ ವಿಶೇಷ ಆಡಳಿತ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಈ ಬಗ್ಗೆ ಮಾತನಾಡಿ, ಬಿಮ್ಸ್ ನಲ್ಲಿ ಇಬ್ಬರೇ ತಜ್ಞ ವೈದ್ಯರು ಇದ್ದಾರೆ. ಸದ್ಯ ಇ ಎಸ್ ಐ ಆಸ್ಪತ್ರೆಯಿಂದ ಓರ್ವ ವೈದ್ಯರನ್ನು ಡೆಪ್ಯುಟ್ ಮಾಡಲಾಗಿದೆ. ಗದಗ ಹಾಗೂ ಹುಬ್ಬಳ್ಳಿಯಿಂದ ಮೂರು ಜನ ಪಿ ಜಿ ಸ್ಟುಡೆಂಟ್ಸ್ ಸಹ ತೆಗೆದುಕೊಳ್ಳಲಾಗಿದೆ. ತಜ್ಞಣಕ್ಕೆ 35 ಜನರಿಗೆ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ. ದಿನಕ್ಕೆ 9 ಶಸ್ತ್ರ ಚಿಕಿತ್ಸೆ ಮಾಡಬೇಕು. ಅಗತ್ಯ ಇರೋ ಉಪಕರಣ ಟೆಂಡರ್ ಮೂಲಕ ಖರದೀಸುವ ಪ್ರಕ್ರಿಯೆ ಆರಂಭವಾಗಿದೆ ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: