ಪೊಲೀಸರು, ವೈದ್ಯರಲ್ಲಿ ಸೋಂಕು ಹೆಚ್ಚಳ ; ಕಲಬುರ್ಗಿಯಲ್ಲಿ ಕೊರೋನಾ ವಾರಿಯರ್ಸ್ ತತ್ತರ

ಕಲಬುರ್ಗಿ ಜಿಲ್ಲೆಯಲ್ಲಿ ವೈದ್ಯರಲ್ಲಿಯೂ ಕೊರೋನಾ ಆತಂಕ ಹೆಚ್ಚಾಗಿದೆ. ವೈದ್ಯ ದಂಪತಿ ಸೇರಿದಂತೆ ಐವರು ವೈದ್ಯರಿಗೆ ಸೋಂಕು ದೃಢಪಟ್ಟಿದೆ

news18-kannada
Updated:July 3, 2020, 2:40 PM IST
ಪೊಲೀಸರು, ವೈದ್ಯರಲ್ಲಿ ಸೋಂಕು ಹೆಚ್ಚಳ ; ಕಲಬುರ್ಗಿಯಲ್ಲಿ ಕೊರೋನಾ ವಾರಿಯರ್ಸ್ ತತ್ತರ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಜುಲೈ. 03): ಕಲಬುರ್ಗಿ ನಗರದಲ್ಲಿ ಪೊಲೀಸರಿಗೆ ಕೊರೋನಾ ಸೋಂಕು ಬಿಟ್ಟುಬಿಡದೇ ಕಾಡುತ್ತಿದೆ. ಮತ್ತೆ ಮೂವರು ಪೊಲೀಸರಿಗೆ ಸೋಂಕು ವಕ್ಕರಿಸಿದೆ. ಜೊತೆಗೆ ಇಬ್ಬರು ಹೋಮ್ ಗಾರ್ಡ್ ಗಳಿಗೂ ಕೊರೋನಾ ದೃಢಪಟ್ಟಿದೆ. ನಗರದ ಸ್ಟೇಷನ್ ಬಜಾರ್, ಬ್ರಹ್ಮಪುರ ಠಾಣೆಯ ಪೊಲೀಸ್ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. 

ಕಲಬುರ್ಗಿಯ ವಿವಿಧ ಠಾಣೆಗಳಲ್ಲಿ ರಾಂಡಮ್ ಆಗಿ ನಡೆಸಿದ ಪರೀಕ್ಷೆ ವೇಳೆ ಪತ್ತೆಯಾದ ಸೋಂಕು. ಇದರಿಂದಾಗಿ ಎರಡು ಠಾಣೆಯ ಇನ್ನಿತರ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕಿನ ಭೀತಿ ಶುರುವಾಗಿದೆ. ಈ ಹಿಂದೆ ಎಂಟು ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿತ್ತು. ಇಬ್ಬರು ಕೆ.ಎಸ್.ಆರ್.ಪಿ. ಕಾನ್ಸ್​​ಟೇಬಲ್​​ಗೂ ಸೋಂಕು ದೃಢಪಟ್ಟಿತ್ತು.

ಮತ್ತೊಂದೆಡೆ ಕಲಬುರ್ಗಿ ಜಿಲ್ಲೆಯಲ್ಲಿ ವೈದ್ಯರಲ್ಲಿಯೂ ಕೊರೋನಾ ಆತಂಕ ಹೆಚ್ಚಾಗಿದೆ. ವೈದ್ಯ ದಂಪತಿ ಸೇರಿದಂತೆ ಐವರು ವೈದ್ಯರಿಗೆ ಸೋಂಕು ದೃಢಪಟ್ಟಿದೆ. ನಿನ್ನೆಯ ವರದಿಯಲ್ಲಿ ವೈದ್ಯ ದಂಪತಿಗಳಿಗೆ ಕೊರೋನಾ ಸೋಂಕು ದೃಢಗೊಂಡಿದೆ. ವೈದ್ಯರಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಆಸ್ಪತ್ರೆಯ ಓಪಿಡಿ ಬಂದ್ ಮಾಡಲಾಗಿದೆ. ಕೆಲ ವೈದ್ಯರಿಂದ ಫೋನ್ ಮೂಲಕವೇ ಅಸ್ತಮಾ-ಬಿಪಿ ಕಾಯಿಲೆಯಿಂದ ಬಳಲುವ ಜನರಿಗೆ ಚಿಕಿತ್ಸೆ ನಡೆದಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯಲ್ಲಿ ಕೋವಿಡ್ ಗೆ ಮತ್ತೋರ್ವ ಬಲಿಯಾಗಿದ್ದಾನೆ. 36 ವರ್ಷದ ಪುರುಷ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 19ಕ್ಕೇರಿದೆ. ಬೀದರ್ ಜಿಲ್ಲೆ ಹುಮ್ನಾಬಾದ್ ಪಟ್ಟಣದ ವ್ಯಕ್ತಿ ಸಾವಿಗೀಡಾಗಿದ್ದಾನೆ.

ಇದನ್ನೂ ಓದಿ :  ಅರ್ಚಕರಿಗೂ ತಟ್ಟಿದ ಲಾಕ್ ಡೌನ್ ಬಿಸಿ ; ಗೌರವ ಧನಕ್ಕಾಗಿ‌ ಅಲೆದಾಟ

ಬೆಂಗಳೂರಿನಿಂದ ವಾಪಸ್ಸಾಗಿದ್ದ ವ್ಯಕ್ತಿ. ದಿಢೀರಾಗಿ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದ ವ್ಯಕ್ತಿಯನ್ನು ಜೂನ್  29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 30 ರಂದು ನಿಧನ ಹೊಂದಿದ್ದು, ಕೊರೋನಾ ಸೋಂಕಿರುವುದು ಇಂದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,488 ಗೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಡಿಸ್ಚಾರ್ಜ್ ಆದವರ ಸಂಖ್ಯೆ 1,126 ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 343 ಆ್ಯಕ್ಟಿವ್ ಕೇಸ್ ಗಳಿವೆ.
First published: July 3, 2020, 2:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading