ಅಸಮರ್ಪಕ ಆ್ಯಂಬುಲೆನ್ಸ್ ಸೇವೆ; ಬೀದರ್ ಜಿಲ್ಲೆಯಲ್ಲಿ ತಪ್ಪದ ಜನಸಾಮಾನ್ಯರ ಗೋಳು!

ಪ್ರತಿ 30 ಕಿ.ಮೀ. ಅಂತರದಲ್ಲಿ ಒಂದು ಆಂಬ್ಯುಲೆನ್ಸ್‌ ಇರಬೇಕು ಎಂಬ ನಿಯಮವಿದೆ. ಆದರೇ ಇಲ್ಲಿ ಆ ನಿಯಮಗಳು ಪಾಲನೆಯಾಗುತ್ತಿಲ್ಲ, ಹೀಗಾಗಿ ಅಪಘಾತ ಹಾಗೂ ಇನ್ನೂಳಿದ ಸಮಯದಲ್ಲಿ ರೋಗಿಗಳಿಗೆ ತುರ್ತಾಗಿ ಆ್ಯಂಬುಲೆನ್ಸ್‌ಗಳು ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ ಎಂಬ ಗೋಳು ಕೂಡ ಕೇಳಿ ಬರುತ್ತಿದೆ.

ಬೀದರ್ ಜಿಲ್ಲೆಯಲ್ಲಿ ಕೆಟ್ಟು ನಿಂತಿರುವ ಆ್ಯಂಬುಲೆನ್ಸ್​ಗಳು.

ಬೀದರ್ ಜಿಲ್ಲೆಯಲ್ಲಿ ಕೆಟ್ಟು ನಿಂತಿರುವ ಆ್ಯಂಬುಲೆನ್ಸ್​ಗಳು.

  • Share this:
ಬೀದರ್; ಜನರಿಗೆ ತುರ್ತು ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಸರಕಾರ 108 ಆ್ಯಂಬುಲೆನ್ಸ್ ಸೇವೆ ನೀಡುತ್ತಿದೆ. ಆ್ಯಂಬುಲೆನ್ಸ್ ಸೇವೆಯಿಂದ ರಾಜ್ಯದ ಲಕ್ಷಾಂತರ ಜನರು ತುರ್ತು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಬೀದರ್ ಜಿಲ್ಲೆಯಲ್ಲಿ ಮಾತ್ರ 108 ಆ್ಯಂಬುಲೆನ್ಸ್ ಗಳ ಸೇವೆ ಮಾತ್ರ ವಿರಳವಾಗಿದೆ. ಆ್ಯಂಬುಲೆನ್ಸ್ ನಲ್ಲಿ ಇರಬೇಕಾದ ವೆಂಟಿಲೇಟರ್, ಆಕ್ಸಿಜೆನ್, ನರ್ಸಗಳಿಲ್ಲದೇ ಆ್ಯಂಬುಲೆನ್ಸ್​ಗಳು ರಸ್ತೆಯಲ್ಲಿ ಓಡಾಡಬೇಕಾದ ಸ್ಥಿತಿಯಿದ್ದು, ಇದಕ್ಕೆ ಸಂಬಂಧಿಸಿದ ಇಲಾಖೆ ಮಾತ್ರ ಕಂಡು ಕಾಣದಂತೆ ಕುಳಿತಿದೆ.

ಜಿಲ್ಲೆಯಲ್ಲಿ 41 ಆ್ಯಂಬುಲೆನ್ಸ್ ಗಳಿದ್ದು ಅದರಲ್ಲಿ 11 ಕೆಟ್ಟು ನಿಂತಿವೆ. ಉಳಿದ 30 ಆ್ಯಂಬುಲೆನ್ಸ್ ಗಳು ರಸ್ತೆಯಲ್ಲಿ ಓಡಾಡುತ್ತಿವೆ. ಬೀದರ್ ನಲ್ಲಿ ಅವಘಡಗಳು ಸಂಭವಿಸಿದ ಸಮಯದಲ್ಲಿ ಸಮೀಪದ ಆಸ್ಪತ್ರೆಗೆ ತುರ್ತು ಕರೆ ತಂದು ಚಿಕಿತ್ಸೆ ನೀಡಲು ನೆರವಾಗಿದ್ದ 108 ವಾಹನಗಳೇ ಇದೀಗ ಚಿಕಿತ್ಸೆಗಾಗಿ ಕಾಯುತ್ತಿವೆ.

2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಡಿಗಿಳಿದ 108 ಆರೋಗ್ಯ ಕವಚ ವಾಹನಗಳು ಬಡ ಹಾಗೂ ಗ್ರಾಮೀಣ ರೋಗಿಗಳ ಪಾಲಿಗೆ ವರದಾನವಾಗಿದ್ದವು. ಏನೇ ಅವಘಡ ಸಂಭವಿಸಿದರೂ ಕ್ಷಣಾರ್ಧದಲ್ಲಿಯೇ ಅವಘಡ ಸಂಭವಿಸಿದ ಸ್ಥಳಕ್ಕೆ ಹೋಗಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಈ ವಾಹನಗಳ ಸೇವೆಗೆ ಸಾರ್ವಜನಿಕರ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು. ಅಂತಹ ಉತ್ತಮ ಸೇವೆ ನೀಡುತ್ತಿದ್ದ 108 ವಾಹನಗಳು ಇದೀಗ ರಸ್ತೆಗಿಳಿದು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಬದಲು ತಮ್ಮ ಚಿಕಿತ್ಸೆಗಾಗಿ ಗ್ಯಾರೇಜ್ ಸೇರುತ್ತಿವೆ. ಟೈಯರ್​ಗಳಿಲ್ಲದೇ ಮೂಲೆಯಲ್ಲಿ ನಿಲ್ಲುತ್ತಿವೆ. ಆದರೂ ಆರೋಗ್ಯ ಇಲಾಖೆ ಹಾಗೂ 108 ಸೇವೆ ಒದಗಿಸುತ್ತಿರುವ ಏಜೆನ್ಸಿಯವರು ಇದರ ಬಗ್ಗೆ ಕಾಳಜಿ ವಹಿಸದ ಪರಿಣಾಮ ಆರಂಭಗೊಂಡ 10 ವರ್ಷಗಳಲ್ಲಿಯೇ ಈ ವಾಹನದ ಸೇವೆ ರೋಗಿಗಳಿಂದ ದೂರವಾಗುತ್ತಿದ್ದು, ಬೀದರ್ ಜಿಲ್ಲೆಯಲ್ಲಿ ರೋಗಿಗಳು ಖಾಸಗಿ ಆ್ಯಂಬುಲ್ಯೆನ್ಸ್ ಗಳ ಮೋರೆ ಹೋಗಬೇಕಾದ ಸ್ಥಿತಿ ಎದುರಾಗಿದೆ.

ಇದನ್ನು ಓದಿ: ಹೊಸಗುಡ್ಡದಹಳ್ಳಿಯ ಕಾರ್ಖಾನೆ ಸ್ಥಳಕ್ಕೆ ಸಚಿವ ಡಾ.ಕೆ.ಸುಧಾಕರ್ ಭೇಟಿ; ತನಿಖಾ ವರದಿ ಬಂದ ಬಳಿಕ ಕ್ರಮ

ಇನ್ನು ರಸ್ತೆಯಲ್ಲಿ ಓಡಾಡುವ 108 ವಾಹನಗಳಿಗೆ ರೋಗಿಗಳನ್ನು ಕರೆದುಕೊಂಡು ಬರುವ ಸಮಯದಲ್ಲಿ ದಾರಿ ಮಧ್ಯದಲ್ಲಿಯೇ ಕೆಟ್ಟು ನಿಂತ ಉದಾಹರಣೆಗಳಿವೆ. ಕೆಲ ವಾಹನಗಳಲ್ಲಿ ಆಮ್ಲಜನಕದ ಸೌಲಭ್ಯವೂ ಇಲ್ಲ. ಎಸಿ ಕಾರ್ಯನಿರ್ವಹಿಸುತ್ತಿಲ್ಲ. ಸಮರ್ಪಕ ದುರಸ್ತಿಯಿಲ್ಲದೇ ಈ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ವಿಚಾರವೆಂದರೇ ಪ್ರತಿ 30 ಕಿ.ಮೀ. ಅಂತರದಲ್ಲಿ ಒಂದು ಆಂಬ್ಯುಲೆನ್ಸ್‌ ಇರಬೇಕು ಎಂಬ ನಿಯಮವಿದೆ. ಆದರೇ ಇಲ್ಲಿ ಆ ನಿಯಮಗಳು ಪಾಲನೆಯಾಗುತ್ತಿಲ್ಲ, ಹೀಗಾಗಿ ಅಪಘಾತ ಹಾಗೂ ಇನ್ನೂಳಿದ ಸಮಯದಲ್ಲಿ ರೋಗಿಗಳಿಗೆ ತುರ್ತಾಗಿ ಆ್ಯಂಬುಲೆನ್ಸ್‌ಗಳು ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ ಎಂಬ ಗೋಳು ಕೂಡ ಕೇಳಿ ಬರುತ್ತಿದೆ.
Published by:HR Ramesh
First published: