ಯಾದಗಿರಿಯಲ್ಲಿ Internal Marks ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ; ವಿದ್ಯಾರ್ಥಿನಿಯರನ್ನು ಎಳೆದಾಡಿದ ಕಾಮುಕ ಶಿಕ್ಷಕ!

ವಿದ್ಯಾರ್ಥಿನಿಯರ ಪ್ರತಿಭಟನೆಯಿಂದ ಖುದ್ದು ಜಿಲ್ಲಾಧಿಕಾರಿ ಡಾ.ಆರ್.ರಾಗಾಪ್ರಿಯಾ ಅವರು ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು.ಈ ವೇಳೆ ‌ಕೂಡ ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ನೀಡುವ ಬಗ್ಗೆ ಜಿಲ್ಲಾಧಿಕಾರಿ ಬಳಿ ನೋವು ತೊಡಿಕೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಯಾದಗಿರಿ: ಆ ವಸತಿ ಶಾಲೆ ವಿದ್ಯಾರ್ಥಿನಿಯರು (Hostel Students) ಕಾಮುಕ ಶಿಕ್ಷಕನ ಕಾಟಕ್ಕೆ ಬೇಸತ್ತಿದ್ದಾರೆ.ವಿದ್ಯಾರ್ಥಿನಿಯರು ಭಯದಲ್ಲೇ ವ್ಯಾಸಂಗ ಮಾಡುವಂತಾಗಿದೆ. ಮಕ್ಕಳಿಗೆ ಪಾಠ ಮಾಡಿ ಜ್ಞಾನ ನೀಡಬೇಕಾದ ಶಿಕ್ಷಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ (Sexual Harassment) ಯತ್ನಿಸಿದ್ದಾನೆ. ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದ (Mundargi, Yadgir) ಹೊರಭಾಗದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಖ್ಯ ಗುರುಗಳಾದ (Headmaster) ಹಯ್ಯಾಳಪ್ಪ ಜಾಗೀರದಾರ ವಿರುದ್ಧ ಮಹಿಳಾ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜ್ಞಾನ ವಿಷಯದ ಶಿಕ್ಷಕನಾದ ಹಯ್ಯಾಳಪ್ಪ ಜಾಗೀರದಾರ ಮಕ್ಕಳಿಗೆ ಶಿಕ್ಷಣ ಒದಗಿಸುವ ಕಾರ್ಯ ಮಾಡದೆ,  ಹೆಚ್ಚು ಅಂತರಿಕ ಅಂಕಗಳು  ನೀಡಲಾಗುತ್ತದೆಂದು ವಿದ್ಯಾರ್ಥಿನಿಯರಿಗೆ ಅಮಿಷವೊಡ್ಡಿ ವಿದ್ಯಾರ್ಥಿನಿಯರ ಕೈ ಹಿಡಿದು ಎಳೆದಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಬಗ್ಗೆ ಮಹಿಳಾ ಪೊಲೀಸ ಠಾಣೆಯಲ್ಲಿ ಪೊಸ್ಕೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಹಯ್ಯಾಳಪ್ಪ ಜಾಗೀರದಾರನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. 

ಜಿಲ್ಲಾಧಿಕಾರಿ ಎದುರು ಕಣ್ಣೀರಿಟ್ಟಿದ್ದ ವಿದ್ಯಾರ್ಥಿನಿಯರು 

ಇದೆ ನವೆಂಬರ್ 1 ರಾಜ್ಯೋತ್ಸವ ದಿನವೇ ವಿದ್ಯಾರ್ಥಿನಿಯರು ವಸತಿ ಶಾಲೆಯಲ್ಲಿ ಎಚ್.ಎಂ ಹಯ್ಯಾಳಪ್ಪ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ವಿವಿಧ ಬೇಡಿಕೆಗೆ ಒತ್ತಾಯಿಸಿ ವಸತಿ ಶಾಲೆಯಿಂದ  ಜಿಲ್ಲಾಧಿಕಾರಿ ಕಚೇರಿವರಗೆ 10 ಕಿಮಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರ ಪ್ರತಿಭಟನೆಯಿಂದ ಖುದ್ದು ಜಿಲ್ಲಾಧಿಕಾರಿ ಡಾ.ಆರ್.ರಾಗಾಪ್ರಿಯಾ ಅವರು ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು.ಈ ವೇಳೆ ‌ಕೂಡ ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ನೀಡುವ ಬಗ್ಗೆ ಜಿಲ್ಲಾಧಿಕಾರಿ ಬಳಿ ನೋವು ತೊಡಿಕೊಂಡಿದ್ದಾರೆ.

ಕಾಮುಕ ಶಿಕ್ಷಕನ ವಿರುದ್ಧ ಕೇಸ್​ ದಾಖಲು 

ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ 10 ದಿನಗಳ ನಂತರ ಶಿಕ್ಷಕ ಹಯ್ಯಾಳಪ್ಪ ವಿರುದ್ಧ ಪೊಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಿಕ್ಷಕ ಹಯ್ಯಾಳಪ್ಪ ರಜೆ ಪಡೆದಿದ್ದರು. ಪ್ರಾಂಶುಪಾಲ ವಿರುದ್ಧ ವಿದ್ಯಾರ್ಥಿನಿಯರು ನೀಡಿರುವ ಲೈಂಗಿಕ ಕಿರುಕುಳದ ದೂರಿನ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲು ಜಿಲ್ಲಾ ಸಮಾಜ‌ ಕಲ್ಯಾಣ ಇಲಾಖೆ ಉಪನಿರ್ದೇಶಕ ಅವರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗೆ ಕೂಡ ಪತ್ರ ಬರೆಯಲಾಗಿತ್ತು.ಸೂಕ್ತ ಕ್ರಮಕ್ಕೆ ಸೂಚನೆ 

ಪತ್ರ ಬರೆದ ನಂತರ ನಿನ್ನೆ ಹಯ್ಯಾಳಪ್ಪ ವಿರುದ್ಧ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೆ ರೀತಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೂಡ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ವೆಸಗಿರುವದು ಬೆಳಕಿಗೆ ಬಂದಿದ್ದು ಈ ಕುರಿತಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಖುದ್ದಾಗಿ ಭೇಟಿ ನೀಡಿ ವರದಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. ವಸತಿ ಶಾಲೆಯ ಶಿಕ್ಷಕ ಹಯ್ಯಾಳಪ್ಪ ನ ನಡೆಯಿಂದ ವಿದ್ಯಾರ್ಥಿಗಳು ಆತಂಕದಲ್ಲಿ ಅಭ್ಯಾಸ ಮಾಡುವಂತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನೀಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.

ಇದನ್ನೂ ಓದಿ: Bengaluru: ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ಹಲ್ಲೆಗೈದಿದ್ದ ವೈದ್ಯ ಅರೆಸ್ಟ್

ಇತ್ತೀಚೆಗೆ ಅಮೆರಿಕಾದಲ್ಲಿ ಅಪಹರಣಕ್ಕೊಳಗಾದ 16ರ ಯುವತಿ ಟಿಕ್‌ಟಾಕ್‌ನಲ್ಲಿ ನೋಡಿ ಕಲಿತಂತಹ ಕೆಲವು ಕೈ ಸನ್ನೆ ಬಳಸಿಕೊಂಡು ಸಹಾಯಕ್ಕಾಗಿ ಸನ್ನೆ ಮಾಡಿದಳು. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಸಹಾಯವಾಗಲು ಅಮೌಖಿಕ ಸೂಚನೆ ಎಂದು ಅರ್ಥೈಸಲಾದ ಕೈ ಸನ್ನೆಗಳನ್ನು ಹದಿಹರೆಯದವರು ಅಪಾಯದಲ್ಲಿದ್ದಾಗ ಅಲ್ಲಿಂದ ಹಾದು ಹೋಗುವ ವಾಹನ ಚಾಲಕರಿಗೆ ಅಪಾಯ ಸಂಕೇತಿಸಲು ಬಳಸಿದರು. ಈ ಸನ್ನೆಯನ್ನು ಗುರುತಿಸಿದ ವಾಹನ ಚಾಲಕ ಕೆಂಟುಕಿ ಅಧಿಕಾರಿಗಳಿಗೆ ಕರೆ ಮಾಡಿ, ಅಪ್ರಾಪ್ತ ವಯಸ್ಸಿನ ಪ್ರಯಾಣಿಕಳೊಬ್ಬಳು ಕೈ ಸನ್ನೆ ಮಾಡುತ್ತಿರುವುದನ್ನು ತಾನು ನೋಡಿದ್ದೇನೆ ಎಂದು ಪೊಲೀಸರ ಬಳಿ ಹೇಳಿದ್ದ.
Published by:Kavya V
First published: