Love Triangle: ಇವಳು ಬೇಕಾ ಅಥವಾ ಅವಳಾ? ಟಾಸ್ ಮೂಲಕ ಹುಡುಗಿ ಸೆಲಕ್ಷನ್ ಮಾಡಿದ ರೋಮಿಯೋ, ಸಖತ್ತಾಗಿದೆ ಇವ್ರ ಪ್ರೇಮ್​ಕಹಾನಿ!

Love Affair: ಯುವತಿಯರು ನೀನು ನನ್ನನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ್ದಾದ್ದಾರೆ. ಇದು ಪ್ರಿಯಕರನಿಗೆ ನುಂಗಲಾರದ ತುತ್ತಾಗಿದೆ. ಏನು ಮಾಡಲು ಹೋಗಿ ಏನು ಮಾಡಿದೆ ಎನ್ನುವ ನೀನು ಎನ್ನುವ ರೀತಿ ಸಂದಿಗ್ದ ಪರಿಸ್ಥಿತಿಗೆ ಯುವಕ ಇಬ್ಬರು ಯುವತಿಯರ ನಡುವೆ ಸಿಲುಕಿ ದಿಕ್ಕು ತೋಚದ ಹಾಗೇ ಪೇಚಿಗೆ ಸಿಲುಕಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಹಾಸನ: ಅಂದಿನಿಂದ ಇಂದಿನವರೆಗೂ ಲವ್ ಸ್ಟೋರಿ (Love Story) ಸಿನಿಮಾಗಳು ಸಾಕಷ್ಟು ಬಂದಿವೆ. ಅವುಗಳಲ್ಲಿ ಕೆಲವು ನಿರ್ದೇಶಕರ ಕಲ್ಪನೆ, ಹಲವು ನೈಜ ಕಥೆಗಳನ್ನು ಆಧರಿಸಿದ್ದವಾಗಿವೆ. ಆದರೆ ಈ ಲವ್ ಸ್ಟೋರಿ ಎಲ್ಲಾ ಪ್ರೇಮ ಕಥೆಗಳನ್ನು ಮೀರಿಸುವಂತಿದೆ. ಯಾವುದೇ ಹೆಣ್ಣು-ಗಂಡಿನ ನಡುವೆ ಪ್ರಾಕೃತಿಕ ಆಕರ್ಷಣೆಯಿಂದ ಮೂಡುವ ಅದಮ್ಯ ಭಾವನೆಯೇ ಪ್ರೇಮ. ಇದು ಎರಡು ಮನಸ್ಸುಗಳನ್ನು ಬೆಸೆಯುವ ಬಾವ ಬಂಧ. ಒಂದು ಅಮೂರ್ತ ಪರಿಕಲ್ಪನೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮ ಸ್ವರೂಪವೇ ಬದಲಾಗಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ಸಿನಿಮಾವನ್ನೂ ಮೀರಿಸುವ, ವಿಚಿತ್ರ ಪ್ರೇಮ ಪುರಾಣ ನಡೆದಿದೆ. ಜಿ.ಪಂ. ಮಾಜಿ ಸದಸ್ಯನೋರ್ವನ ಪುತ್ರ ಏಕಕಾಲದಲ್ಲಿ ಇಬ್ಬರು ಹುಡುಗಿಯರನ್ನು ಲವ್ (Love Triangle) ಮಾಡಿದ್ದಾನೆ. ಆದರೆ ಈ ವಿಷಯ ಈತನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಯುವತಿಯರಿಗೆ ಸಂಶಯ ಬಾರದಂತೆ ಗೌಪ್ಯತೆ ಕಾಪಾಡಿಕೊಂಡಿದ್ದಾನೆ. ಆದರೆ ಇಬ್ಬರ ನುಡವಿನ ಲವರ್ ಬಾಯ್ ಆಟ ಬಟಾ ಬಯಲಾಗಿದೆ.

ಇದು ತಿಳಿಯುತ್ತಿದ್ದಂತೆ ಮೂವರ ಪೋಷಕರು ತ್ರಿಕೋನ ಪ್ರೇಮ ಕಥೆಗೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಲವರ್ ಬಾಯ್ ಯುವಕ ಹಾಗೂ ಪ್ರೇಮ ಪಾಶದಲ್ಲಿ ಬಿದ್ದಿದ್ದ ಇಬ್ಬರು ಯುವತಿಯರನ್ನು ಒಂದೆಡೆ ಸೇರಿಸಿ ರಾಜಿ ಪಂಚಾಯ್ತಿ ಮೂಲಕ ಸುಖಾಂತ್ಯಗೊಳಿಸಲು ಮುಂದಾಗಿದ್ದಾರೆ. ಆದರೆ ಈ ವಿಚಾರದಲ್ಲಿ ಸೋಲದ ಯುವತಿಯರು ನೀನು ನನ್ನನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ್ದಾದ್ದಾರೆ. ಇದು ಪ್ರಿಯಕರನಿಗೆ ನುಂಗಲಾರದ ತುತ್ತಾಗಿದೆ. ಏನು ಮಾಡಲು ಹೋಗಿ ಏನು ಮಾಡಿದೆ ಎನ್ನುವ ನೀನು ಎನ್ನುವ ರೀತಿ ಸಂದಿಗ್ದ ಪರಿಸ್ಥಿತಿಗೆ ಯುವಕ ಇಬ್ಬರು ಯುವತಿಯರ ನಡುವೆ ಸಿಲುಕಿ ದಿಕ್ಕು ತೋಚದ ಹಾಗೇ ಪೇಚಿಗೆ ಸಿಲುಕಿದ್ದಾನೆ.

ಇದನ್ನು ಮನಗಂಡ ಮೂವರ ಕಡೆಯವರ ಕುಟುಂಬಸ್ಥರು ಹಾಗೂ ಗ್ರಾಮದ ಹಿರಿಯರು ಒಟ್ಟಿಗೆ ಸೇರಿ ತ್ರಿಕೋನ ಪ್ರೇಮಕತೆಗೊಂದು ಸುಖಾಂತ್ಯ  ನೀಡಲು ಮುಂದಾಗಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಅದೆಷ್ಟೇ ಪ್ರಯತ್ನಪಟ್ಟರು, ಯುವತಿಯರು ಮಾತ್ರ ನನ್ನನ್ನೇ ವಿವಾಹವಾಗಬೇಕು ಎಂದು ಇನ್ನೊಬ್ಬಳು ಹಠಕ್ಕೆ ಹಿಡಿದಿದ್ದಾರೆ. ಇದು ತ್ರಿಕೋನ ಪ್ರೇಮ ಪ್ರಕರಣವನ್ನು ಸುಖಾಂತ್ಯ ಮಾಡಲು ಬಂದವರಿಗೆ ಕಗ್ಗಂಟಾಗಿ ಪರಿಣಮಿಸಿತು. ಈ ಬೆಳವಣಿಗೆಯಿಂದ ಮನನೊಂದ ಒಬ್ಬಳು ಯುವತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು  ಅದೃಷ್ಟವಶಾತ್ ಬದುಕುಳಿದ್ದಾಳೆ.

ಇದನ್ನೂ ಓದಿ: Love Affair: ಹೆಂಡತಿಯನ್ನು ಮನೆಯಲ್ಲೇ ಬಿಟ್ಟು ಅವಳ ಬೆಸ್ಟ್ ಫ್ರೆಂಡ್​ ಜೊತೆ ಹನಿಮೂನ್ ಹೋದ ಗಂಡ !

ಇಷ್ಟೆಲ್ಲಾ ನಡೆದ ಬಳಿಕ, ಮತ್ತೊಮ್ಮೆ ರಾಜಿ ಪಂಚಾಯ್ತಿ ನಡೆಸಿ ಟ್ರೈಯ್ಯಾಂಗಲರ್ ಲವ್ ಸ್ಟೋರಿಗೆ ಮುಕ್ತಿ ನೀಡಲು ನಿರ್ಧರಿಸಿದ ಹಿರಿಯರು, ನಿಮ್ಮ ಒಳಿತಿಗಾಗಿ ಇದು ಎಲ್ಲರ ಕಡೆಯ ಪ್ರಯತ್ನ ಹಾಗೂ ನಿಮಗೂ ಕೊನೆಯ ಅವಕಾಶ. ನಿಮ್ಮ ಮೂವರ ಅಂತಿಮ ನಿರ್ಧಾರ ಏನು ಹೇಳಿ ಎಂದಿದ್ದಾರೆ. ಇದಕ್ಕೆ ಇಬ್ಬರು ಯುವತಿಯರು ಒಂದು ಗಂಟೆಯಾದರೂ ಪ್ರೀತಿಸಿದವನೇ ನನ್ನ ಗಂಡನಾಗಬೇಕು ಎಂದು ಪಂಚಾಯ್ತಿ ಮುಂದೆ ಬೇಡಿಕೆ ಇಟ್ಟಿದ್ದಾರೆ. ಈ ಬೆಳವಣಿಗೆ ಕಂಡ ಊರಿನವರು ಇದು ಬಗೆಹರಿಸಲಾಗದ ಸಮಸ್ಯೆ ಸಾಕಪ್ಪಾ ಸಾಕು, ಇವರ ಪ್ರೀತಿಯ ಹುಚ್ಚಾಟ ಬಗೆಹರಿಸಲು ಸಾಧ್ಯವಾಗದೆ ಅಕ್ಷರಶಃ ಹೈರಾಣಾಗಿ ಹೋಗಿದ್ದಾರೆ.

ಇಷ್ಟೆಲ್ಲ ನಡೆಯುತ್ತಿದ್ದರು ಕದ್ದುಮುಚ್ಚಿ ಇಬ್ಬರನ್ನೂ ಸುಂದರ, ಅಮಾಯಕ ಯುವತಿಯರನ್ನು ಪ್ರೀತಿ ಮಾಡಿದ ಲವರ್ ಬಾಯ್ ಮಾತ್ರ ಮೌನವಾಗಿಯೇ ಇದ್ದ. ಕೊನೆಗೂ ಶುಕ್ರವಾರ ಎಲ್ಲರೂ ಸೇರಿ ಒಂದು ತೀರ್ಮಾನಕ್ಕೆ ಬಂದರು. ನೀವು ನಿಮ್ಮ ಎಚ್ಚರಿಕೆಯಲ್ಲಿ ಇರಬೇಕಿತ್ತು. ನೀವೆಲ್ಲಾ ಆಡಿದಂತೆ ನಾವೂ ತೀರ್ಮಾನ ಮಾಡಲು ಆಗಲ್ಲ,  ಹುಡುಗ ಯಾರನ್ನು ಮದುವೆಯಾಗಬೇಕು ಎಂದು ಟಾಸ್ (ಹೆಡ್ ಅಂಡ್ ಟೈಲ್) ಹಾಕುತ್ತೇವೆ. ನಿಮ್ಮಿಬ್ಬರಲ್ಲಿ ಯಾರು ಗೆಲ್ಲುವಿರೋ ಅವರನ್ನು ಯುವಕನ ಜೊತೆ ಮದುವೆ ಮಾಡುತ್ತೇವೆ ಎಂದಿದ್ದಾರೆ. ಅದರೆ ಇದಕ್ಕೂ ಮುನ್ನ ಮೂವರೂ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಬರೆದು ಸಹಿ ಮಾಡಿ.

ಇದನ್ನೂ ಓದಿ: Love Story: ಟ್ರೈನ್​​ನಲ್ಲೇ ಕಿಸ್ ಮಾಡಿದ್ರು ರೌಡಿ ಬೇಬಿ; ಸಾಯಿ ಪಲ್ಲವಿ ‘ಲವ್ ಸ್ಟೋರಿ‘ ಹೇಗಿದೆ ಗೊತ್ತಾ?

ಯಾರೇ ಮದುವೆಯಾದರೂ ಒಪ್ಪಿಗೆ ಇರಬೇಕು. ಆ ನಂತರದಲ್ಲಿ ತರಕಾರು ತೆಗೆದು ಪೊಲೀಸ್ ಠಾಣೆ ಮೊದಲಾದ ಕಡೆಗಳಲ್ಲಿ ದೂರು ದುಮ್ಮಾನ ಹೇಳಲು ಹೋಗಬಾರದು ಎಂಬ ಷರತ್ತು ವಿಧಿಸಿದರು. ಪ್ರೀತಿಯ ಅದೃಷ್ಟ ಪರೀಕ್ಷೆಗಿಳಿದ ಯುವತಿಯರು ಕಡೆಗೂ ಓಕೆ ಎಂದರು. ಆದರೆ ಇನ್ನೇನು ಟಾಸ್ ಹಾಕಬೇಕು ಎನ್ನುವಷ್ಟರಲ್ಲಿ,  ಮೂಕನಾಗಿದ್ದ ಪ್ರಿಯಕರ ಓಡಿ ಹೋಗಿ ನೀನೇ ಬೇಕೆಂದು ವಿಷ ಕುಡಿದಿದ್ದ ಯುವತಿಯನ್ನು ತಬ್ಬಿಕೊಂಡಿದ್ದು, ಇವಳನ್ನೇ ಮದುವೆಯಾಗುತ್ತೇನೆ ಎಂದು ತಬ್ಭಿಕೊಂಡಿದ್ದಾನೆ. ಈ ಬೆಳವಣಿಗೆ ಕಂಡ ಮತ್ತೊಬ್ಬ ಯುವತಿ ಪ್ರೀತಿಸಿದ್ದವನಿಗೆ ಕಪಾಳಮೋಕ್ಷ ಮಾಡಿ ಅಲ್ಲಿಂದ ಹೊರಟಿದ್ದು ನಿನಗೂ ಒಳ್ಳೆಯದಾಗಲಿ, ಆದರೆ ಅವನನ್ನು ಸುಮ್ಮನೆ ಬಿಡುವುದಿಲ್ಲ ಎಂದು ವಿಶ್ ಮಾಡಿ ಎಚ್ಚರಿಕೆ ನೀಡಿ ಹೊರಟಿದ್ದಾಳೆ.

ಹಲವು ದಿನಗಳಿಂದ ಕಗ್ಗಂಟಾಗಿದ್ದ ಪ್ರೇಮ ಪುರಾಣ ಇಷ್ಟು ಸುಲಭವಾಗಿ ಬಗೆಹರಿದಿದ್ದನ್ನು ಕಂಡ ಪಂಚಾಯ್ತಿದಾರರು, ಒಂದು ಕ್ಷಣ ಆಶ್ಚರ್ಯ ಚಕಿತರಾದರು. ಆದರೂ ತ್ರಿಕೋನ ಪ್ರೇಮಕತೆ ಸುಖಾಂತ್ಯ ಕಂಡಿತಲ್ಲ, ಮುಂದಿನದು ಅವರಿಗೆ ಬಿಟ್ಟಿದ್ದು ಎಂದು ಅಲ್ಲಿಂದ ನಡೆದಿದ್ದಾರೆ.
Published by:Soumya KN
First published: