ಶಿವಮೊಗ್ಗ: ಅನ್ನ ಮಾಡುವ ವಿಚಾರವಾಗಿ ಅತ್ತೆ, ಸೊಸೆ ಮಧ್ಯೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಸೊಸೆ ಬಿಸಿ ಬಿಸಿ ಅನ್ನದ ತಿಳಿಯನ್ನು ಅತ್ತೆ (Mother in Law) ತಲೆ ಮೇಲೆ ಸುರಿದಿದ್ದಾಳೆ. ಸುಟ್ಟ ಗಾಯಗಳಿಂದಾಗಿ ಅತ್ತೆ ಆಸ್ಪತ್ರೆ ಸೇರಿದ್ದು, ಸೊಸೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ . ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾಗರ ತಾಲೂಕು ಮುಳ ಕೇರಿ ಗ್ರಾಮದಲ್ಲಿ ನಿನ್ನೆ ಮಂಗಳವಾರ ಘಟನೆ ಸಂಭವಿಸಿದ್ದು, ಪಾರ್ವತಮ್ಮ (58) ಅವರು ಸುಟ್ಟ ಗಾಯಗ ಳಿಂದಾಗಿ ಸಾಗರ ತಾಲೂ ಕು ಆಸ್ಪತ್ರೆಗೆ ದಾಖ ಲಾಗಿದ್ದು ಚಿಕಿತ್ಸೆ ಪಡೆಯು ತ್ತಿದ್ದಾರೆ..ಅನ್ನ ಮಾಡುವ ವಿಚಾರದಲ್ಲಿ ಕಿರಿಕ್ (Kitchen Fight) ಆಗಿದ್ದೇ ಇದಕ್ಕೆಲ್ಲಾ ಕಾರಣವಾಗಿದೆ ಎನ್ನಲಾಗಿದೆ. ಪಾರ್ವತಮ್ಮ ಅವರ ಸೊಸೆ ನೇತ್ರಾ ಅನ್ನಕ್ಕೆ ಇಟ್ಟಿದ್ದರು. ಇದನ್ನು ಗಮನಿ ಸಿದ ಪಾರ್ವ ತಮ್ಮ ಅವರು ತಾವು ಅನ್ನ ಮಾಡಿದ್ದು, ಮತ್ತೊಮ್ಮೆ ಯಾಕೆ ಇಟ್ಟಿ ದ್ದೀಯ ಎಂದು ಪ್ರಶ್ನಿಸಿ ದ್ದಾರೆ. ಈ ವೇಳೆ ಪಾರ್ವತಮ್ಮ ಮತ್ತು ನೇತ್ರಾ ಮಧ್ಯೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಸಿಟ್ಟಾದ ನೇತ್ರಾ, ಒಲೆ ಮೇಲೆ ಇರಿಸಿದ್ದ ಅನ್ನದ ಪಾತ್ರೆ ಯನ್ನು ತಂದು ಅದರಲ್ಲಿದ್ದ ಬಿಸಿ ಅನ್ನದ ತಿಳಿಯನ್ನು ಪಾರ್ವತಮ್ಮ ಮೇಲೆ ಸುರಿದಿದ್ದಾರೆ ಎಂದು ಆರೋಪಿ ಸಲಾಗಿದೆ.
ಅನ್ನದ ಪಾತ್ರೆಯಲ್ಲೇ ಗುದ್ದಿದಳು: ಬಿಸಿ ತಿಳಿಯನ್ನು ತಲೆ ಮೇಲಿಂದ ಸುರಿಯುತ್ತಿದ್ದಂತೆ ಪಾರ್ವ ತಮ್ಮ ಅವರು ಜೋರಾಗಿ ಕೂಗಿ ಕೊಂಡು ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ನೇತ್ರಾ ಅನ್ನ ಪಾತ್ರೆ ಯಿಂದಲೇ ಅತ್ತೆ ಪಾರ್ವ ತಮ್ಮಗೆ ತಲೆ ಮತ್ತು ಬೆನ್ನಿಗೆ ಗುದ್ದಿ ದ್ದಾಳೆ ಎಂದು ದೂರಿನ ಲ್ಲಿ ತಿಳಿಸಲಾ ಗಿದೆ. ಈ ವೇಳೆ ಪಾರ್ವ ತಮ್ಮ ಅವರ ಮಕ್ಕಳು ಮತ್ತು ಸ್ಥಳೀ ಯರು ಬಂದು ರಕ್ಷಿಸಿದ್ದಾರೆ.ಕೂಡಲೆ ಪಾರ್ವತಮ್ಮ ಅವರನ್ನು ಸಾಗರ ದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡ ಲಾಗಿದೆ. ಪಾರ್ವತಮ್ಮ ಅವರ ಮುಖ, ಕಣ್ಣುಗಳು, ಕೈಗಳು ಸೇರಿದಂತೆ ವಿವಿಧೆಡೆ ಸುಟ್ಟ ಗಾಯವಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾ ಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆ ವಿರು ದ್ಧ ಕ್ರಮ ಕೈಗೊಳ್ಳುವಂತೆ ಪಾರ್ವತಮ್ಮ ದೂರಿನಲ್ಲಿ ತಿಳಿಸಿ ದ್ದಾರೆ.
ಇದನ್ನೂ ಓದಿ: Double Murder: ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ್ದ ವೃದ್ದ ದಂಪತಿ ಕೊಲೆ ಪ್ರಕರಣ: ಬಾಡಿಗೆದಾರ ಸೇರಿದಂತೆ ನಾಲ್ವರು ಅರೆಸ್ಟ್
ಅತ್ತೆ ಸೊಸೆ ನಡುವಿನ ಜಗಳ ಹೊಸತೇನಲ್ಲ. ಎಲ್ಲಾ ಕಡೆಯೂ ಸರ್ವೇ ಸಾಮಾನ್ಯ ಎನ್ನುವಂತೆ ಮನೆ ಮನೆಯಲ್ಲಿ ನಡೆಯುತ್ತಲೇ ಇರುತ್ತದೆ. ಆದ್ರೆ ಈ ಪ್ರಕರಣದಲ್ಲಿ ಪರಿಸ್ಥಿತಿ ಕೈಮೀರಿದ್ದು ಸೊಸೆ ಅತ್ತೆಯ ಮೇಲೆ ಕುದಿ ಕುದಿ ಅನ್ನದ ತಿಳಿ ಸುರಿದು ನಂತರ ಅದೇ ಬಿಸಿಯಾದ ಪಾತ್ರೆಯಿಂದ ಹಲ್ಲೆ ನಡೆಸಿದ್ದಾಳೆ. ಒಂದು ವೇಳೆ ಯಾರೂ ಸರಿಯಾದ ಸಮಯಕ್ಕೆ ಬರದಿದ್ದರೆ ಅತ್ತೆಯ ಜೀವಕ್ಕೇ ಕಂಟಕವಾಗುವ ಎಲ್ಲಾ ಸಾಧ್ಯತೆ ಅಲ್ಲಿತ್ತು. ಈಗಲೂ ಅತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗುವುದು ಎಷ್ಟು ಸಮಯವಾಗಬಹುದು ಎನ್ನುವುದನ್ನು ವೈದ್ಯರೂ ಸ್ಪಷ್ಟವಾಗಿ ತಿಳಿಸಿಲ್ಲ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
(ವರದಿ: ಅಜಯ್ ಕುಮಾರ್, ಶಿವಮೊಗ್ಗ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ