ಪಾಲಿಕೆ ಚುನಾವಣೆ, ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಂದ ಮಹತ್ವದ ಸಭೆ: ಕೈಗೆ ಚಿನ್ಹೆಯದ್ದೇ ಗೊಂದಲ

ಕೇಸರಿ ನಾಯಕರ ದಂಡೆ ಪಾಲಿಕೆ ಚುನಾವಣೆ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ನಗರದ ಧರ್ಮನಾಥ ಭವನದಲ್ಲಿ ಸ್ವಯಂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ ನೇತೃತ್ವದಲ್ಲಿ ಚುನಾವಣಾ ವಿಶೇಷ ಸಭೆ ನಡೆಯಿತು.

ಬೆಳಗಾವಿ ಮಹಾನಗರ ಪಾಲಿಕೆ.

ಬೆಳಗಾವಿ ಮಹಾನಗರ ಪಾಲಿಕೆ.

  • Share this:
ಬೆಳಗಾವಿ: ಕೊರೋನಾ ಮೂರನೆ ಅಲೆಯ ನಡುವೆಯು ರಾಜ್ಯದ ಮೂರು ಮಹಾನಗರಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಇನ್ನು 25 ವರ್ಷಗಳ ಬಳಿಕ ಬೆಳಗಾವಿ ಮಹಾನಗರ ಪಾಲಿಕೆಗೆ ಪಕ್ಷದ ಚಿನ್ಹೆಯ ಮೇಲೆ ಚುನಾವಣೆ ನಡೆಸಲು ಮುಂದಾಗಿರುವ ರಾಜಕೀಯ ಪಕ್ಷಗಳು ಭರದ ಸಿದ್ಧತೆಗಳನ್ನ ನಡೆಸುತ್ತಿದೆ. ಕನ್ನಡ ಮರಾಠಿ ಭಾಷಿಕರ ನಡುವೆ ನಡೆಯುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪ್ರತಿಷ್ಠೆ ಅಂತಲೆ ಹೇಳಬಹುದು. ಇದೆ ಮೊದಲ ಬಾರಿಗೆ ಪಕ್ಷದ ಚಿನ್ಹೆ ಮೇಲೆ ಬಿಜೆಪಿ ಚುನಾವಣೆ ಎದುರಿಸಲು  ಸಜ್ಜಾಗಿದ್ರೆ.  ಇತ್ತ ಕಾಂಗ್ರೆಸ್ ಚಿನ್ಹೆ ಮೇಲೆ ಸ್ಪರ್ಧೆ ಮಾಡಬೇಕಾ ಬೇಡವಾ ಅನ್ನುವ ಗೊಂದಲಕ್ಕೆ ಸಿಲುಕಿದೆ ಸಧ್ಯ ಕಾಂಗ್ರೆಸ್ ಚಂಡು ವರಿಷ್ಠರ ಅಂಗಳಕ್ಕೆ ಶಿಫ್ಟ್ ಆಗಿದೆ.

ಹೌದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕಾವು ರಂಗೇರಿದೆ. ಕುಂದಾನಗರಿ ಬೆಳಗಾವಿಯಲ್ಲಿ ಇಂದು ಕೈ ಕೇಸರಿ ನಾಯಕರ ದಂಡೆ ಸರಣಿ ಸಭೆಗಳನ್ನ ನಡೆಸಿತು. ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣಾ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸಂಸದರಾದ ನಾಸೀರಹುಸೇನ್, ಹನುಮಂತಯ್ಯ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಮಾಜಿ ಶಾಸಕ ಫಿರೋಜ್ ಸೇಠ್, ಮುಖಂಡರು, ಪದಾಧಿಕಾರಿಗಳು, ಆಕಾಂಕ್ಷೆಗಳು ಭಾಗವಹಿಸಿದ್ರು. ಕಾಂಗ್ರೆಸ್ ಪಾಲಿಕೆ ಚುನಾವಣೆ ಪಕ್ಷದ ಚಿನ್ಹೆ ಮೇಲೆ ಎದುರಿಸಬೇಕಾ ಭಾಷಾವಾರು ಎದುರಿಸಬೇಕಾ ಎಂಬುದರ ಬಗ್ಗೆ ಪರ ವಿರೋಧ ಸುಧೀರ್ಘ ಚರ್ಚೆ ನಡೆಯಿತು.

ಎಂ.ಬಿ.ಪಾಟೀಲ್ ಎಲ್ಲಾ ನಾಯಕರ ಒಟ್ಟು ಅಭಿಪ್ರಾಯ ಸ್ವೀಕರಿಸಿದ್ದಾರೆ. 120 ಜನ ಆಕಾಂಕ್ಷಿಗಳ ಅರ್ಜಿ ಈಗಾಗಲೇ ಬಂದಿದೆ. ಆದ್ರೆ ಸಭೆಯಲ್ಲಿನ ಒಟ್ಟು ಅಭಿಪ್ರಾಯವನ್ನ ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಗಮನಕ್ಕೆ ತರಲಾಗುವುದು. ಆ ಬಳಿಕ ಕಾಂಗ್ರೆಸ್ ಪಕ್ಷದ ಚಿನ್ಹೆ ಮೇಲೆ ಸ್ಪರ್ಧೆ ಬೇಕಾ ಬೇಡವಾ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ರು.

ಇನ್ನೂ ಇತ್ತ ಕೇಸರಿ ನಾಯಕರ ದಂಡೆ ಪಾಲಿಕೆ ಚುನಾವಣೆ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ನಗರದ ಧರ್ಮನಾಥ ಭವನದಲ್ಲಿ ಸ್ವಯಂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ ನೇತೃತ್ವದಲ್ಲಿ ಚುನಾವಣಾ ವಿಶೇಷ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವ ಉಮೇಶ್ ಕತ್ತಿ, ಮಾಜಿ ಸಚಿವ ಶ್ರೀಮಂತ ಪಾಟೀಲ್,ಸಂಸದ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ್, ಆನಂದ ಮಾಮನಿ, ಅನಿಲ್ ಬೆನಕೆ ಸೇರಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಬಾರಿ ಪಕ್ಷದ ಚಿನ್ಹೆ ಮೇಲೆ ಅಭ್ಯರ್ಥಿಗಳು ಕಣಕ್ಕಿಸಲಾಗುವುದು.

ಇದನ್ನೂ ಓದಿ: ಅಫ್ಘಾನ್ ಬಿಕ್ಕಟ್ಟು| ಕೇಂದ್ರ ಸರ್ಕಾರ ನೆರೆ ದೇಶಗಳಿಗೆ ಸಂಬಂಧಿಸಿದ ವಿದೇಶಾಂಗ ನೀತಿಯನ್ನು ಪರಿಶೀಲಿಸಬೇಕು; ಶರದ್ ಪವಾರ್

ಬೆಳಗಾವಿ ಪಾಲಿಕೆ ಚುನಾವಣೆ ಯಲ್ಲಿ ಬಿಜೆಪಿ ಬಾವುಟ ಹಾರಿಸಲು ಎಲ್ಲರೂ ಶ್ರಮಿಸಬೇಕು. ಜಿಲ್ಲೆಯ ಎಲ್ಲಾ ಹಾಲಿ ಮಾಜಿ ಶಾಸಕರು, ಸಚಿವರು ಪಾಲಿಕೆ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ನಳೀನಕುಮಾರ ಕಟೀಲ ಸೂಚನೆ ನೀಡಿದ್ರು‌. ಇನ್ನೂ ಚುನಾವಣಾ ಪ್ರಚಾರಕ್ಕೆ ಯಡಿಯೂರಪ್ಪ ನವರು ಬರ್ತಾರೆ ಎಂದು ಗೋವಿಂದ ಕಾರಜೋಳ ಹೇಳಿದರು.

ಇದನ್ನೂ ಓದಿ: ಮಹಾತ್ಮಾ ಗಾಂಧಿಯವರ ಅಹಿಂಸಾ ತತ್ವದಿಂದ ಸ್ವಾತಂತ್ರ್ಯ ಬಂತು ಎಂಬುದು ಅರ್ಧ ಸತ್ಯ; ಸಿ.ಟಿ. ರವಿ ಹೇಳಿಕೆ

ಒಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಯನ್ನ ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ಅತ್ತ ಕಾಂಗ್ರೆಸ್ ಇನ್ನೂ ಭಾಷಾವಾರು ನಾ ಪಕ್ಷದ ಚಿನ್ಹೆ ನಾ ಎನ್ನುವ ಗೊಂದಲದಲ್ಲಿದೆ. ದಿನೇ ದಿನೇ ಪಾಲಿಕೆ ಚುನಾವಣೆ ಕಾವು ಇನ್ನಷ್ಟು ರಂಗೇರಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: