ಗದಗದಲ್ಲಿ ನಡೆಯುತ್ತಿದೆ ಸಕ್ರಮದ ಹೆಸರಿನಲ್ಲಿ ಅಕ್ರಮ ಮರಳು ದಂಧೆ; ಬರಿದಾಗುತ್ತಿದೆ ತುಂಗಭದ್ರಾ ಒಡಲು!

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಲವಾರು ಭಾರಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಂತೆ ಮನವಿ ಮಾಡಿದ್ದಾರೆ. ಆದರೆ, ಸ್ಥಳೀಯರ ಮನವಿಗೆ ಯಾವೊಬ್ಬ ಅಧಿಕಾರಿಯೂ ಕಿವಿಗೊಟ್ಟಿಲ್ಲ.

Youtube Video
  • Share this:
ಗದಗ:  ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ ಪಾಟೀಲ್ ತವರು ಜಿಲ್ಲೆ ಗದಗನಲ್ಲಿ ಎಗ್ಗಿಲ್ಲದೆ ಸಕ್ರಮದ ಹೆಸರಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಹೌದು ಜೀವದ ಹಂಗು ತೋರೆದು, ಉಕ್ಕಿ‌ ಹರಿಯುವ ನದಿಯಲ್ಲಿ ತೆಪ್ಪಗಳ ಮೂಲಕ ಮರಳು ಬಗೆಯಲಾಗುತ್ತಿದೆ. ಇಷ್ಟೊಂದು, ಅಕ್ರಮ ನಡೆದ್ರು ಯಾರು ಕೇರ್ ಮಾಡುತ್ತಿಲ್ಲ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮರಳು ದಂಧೆಗೆ ಕಡಿವಾಣ ಹಾಕಬೇಕಿದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಕಾನೂನು ಬಾಹಿರವಾಗಿ ಮರಳು ದಂಧೆ ನಡೆಯುತ್ತಿದೆ. ಹರಿಯುವ ನದಿಯಲ್ಲಿ ತೆಪ್ಪಗಳ‌ ಮೂಲಕ ಮರಳು ಸಂಗ್ರಸುತ್ತಿದ್ದಾರೆ ಬಡ ಕಾರ್ಮಿಕರು. 20 ಕ್ಕೂ ಹೆಚ್ಚು ತೆಪ್ಪಗಳ ಮೂಲಕ 50 ಕ್ಕೂ ಹೆಚ್ಚು ಕಾರ್ಮಿಕರು‌ ಹಗಲು ರಾತ್ರಿ ಎನ್ನದೆ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ. ಯಾರಿಗಾದರೂ ಹೆಚ್ಚು ಕಡಿಮೆ ಯಾದ್ರೇ ಯಾರು ಹೊಣೆ.

ಹೌದು ಇಂದತಹದೊಂದು ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಲಿ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ. ಅಂದಹಾಗೇ ಇಲ್ಲಿ ಮರಳು ಸ್ಟಾಕ್ ಮಾಡಿರೋ‌ ಮಾಲೀಕ ಅಶೋಕ ಎನ್ನುವಾತ. ನದಿಯಲ್ಲಿ ನೀರು ಖಾಲಿಯಾದ ಮೇಲೆ‌‌ ಮರಳನ್ನು ತೆಗೆಯಬೇಕು. ಆದ್ರೆ ಈತ ಮಾತ್ರ ಹರಿಯುವ ನದಿಯಲ್ಲಿ 20 ಕ್ಕೂ ಹೆಚ್ಚು ತೆಪ್ಪಗಳ ಮೂಲಕ 50 ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಿಸಿಕೊಂಡು ರಾತ್ರಿ ಹಗಲು ಎನ್ನದೆ ನದಿಯಿಂದ ಮರಳು ತೆಗೆಯುತ್ತಿದ್ದಾನೆ.

ಹರಿಯುವ ನದಿಯಿಂದ ತೆಪ್ಪಗಳ ಮೂಲಕ ಮರಳು ತೆಗೆದುಕೊಂಡು ಬಂದು, ತಡದಲ್ಲಿ ನಿಂತ್ತಿರುವ ಟ್ರ್ಯಾಕ್ಟರ್ ಮೂಲಕ ಮರಳನ್ನು ಸಾಗಿಸುತ್ತಿದ್ದಾರೆ. ಇಷ್ಟೊಂದು ಅಕ್ರಮ ನಡೆದ್ರು ಅಧಿಕಾರಿಗಳು ಮೌನ ವಹಿಸಿದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ತುಂಗಭದ್ರಾ ನದಿಯಲ್ಲಿ ಬಡ ಕಾರ್ಮಿಕರು ಜೀವದ ಹಂಗು ತೊರೆದು ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ಉರಿಯುವ ನದಿಯಲ್ಲಿ ತುಪ್ಪ ಮುಳಗಿ ಏನಾದರೂ ಅವಘಡ ನಡೆದರೆ ಏನು ಗತಿ? ಎನ್ನುವ ಪ್ರಶ್ನೇ ಸಹ ಕಾಡುತ್ತೇ. ಇನ್ನೂ ಹರಿಯುವ ನದಿಯಲ್ಲಿ ಮರಳು ಗಣಿಗಾರಿಕೆ ‌ಮಾಡಬಾರದು ಎನ್ನುವ ನಿಮಯ‌ ಇದೆ. ಆದರೆ, ಎಲ್ಲವನ್ನೂ ಗಾಳಿಗೆ ತೂರಿ, ಮರಳು ಗಣಿಗಾರಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: WhatsApp: ಸಾರ್ವಜನಿಕ ಹುಡುಕಾಟದಲ್ಲಿ ಅನೇಕ ಸಂಖ್ಯೆಗಳನ್ನು ಸೋರಿಕೆ ಮಾಡುತ್ತಿರುವ ವಾಟ್ಸಾಪ್: ಗ್ರಾಹಕರು ಎಚ್ಚರಿಕೆ!

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಲವಾರು ಭಾರಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಂತೆ ಮನವಿ ಮಾಡಿದ್ದಾರೆ. ಆದರೆ, ಸ್ಥಳೀಯರ ಮನವಿಗೆ ಯಾವೊಬ್ಬ ಅಧಿಕಾರಿಯೂ ಕಿವಿಗೊಟ್ಟಿಲ್ಲ. ಹೀಗಾಗಿ ಕೂಡಲೇ ಈ ಅಪಾಯಕಾರಿ ಮರಳು ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಇದೀಗ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಸಚಿವ ಸಿ‌‌ ಸಿ ಪಾಟೀಲ್ ಅವರು ತವರು ಜಿಲ್ಲೆಯಲ್ಲಿ ಇಷ್ಟೊಂದು ಅಪಾಯಕಾರಿ ಮರಳು ದಂಧೆ ನಡೆಯುತ್ತಿದೆ. ಇನ್ನೂ ಬೇರೆ ಜಿಲ್ಲೆಯ ಪರಿಸ್ಥಿತಿ ಹೇಗಾಗಬಾರದು ನೀವೇ ಉಹಿಸಿಕೊಳ್ಳಿ. ಇನಾದರೂ ಸಚಿವ ಸಿ ಸಿ‌ ಪಾಟೀಲ್ ಸಾಹೇಬರು ಈ ಅಪಾಯಕಾರಿ ಮರಳು ದಂಧೆಗೆ ಬ್ರೆಕ್ ಹಾಕ್ತಾರಾ ಎನ್ನುವದನ್ನು ಕಾದು ನೋಡಬೇಕಾಗಿದೆ.
Published by:MAshok Kumar
First published: