• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಅಕ್ರಮ ಮರಳುಗಾರಿಕೆ ಭಾಗ 2 – ಹರಿಹರ ಗ್ರಾಮಾಂತರ ಠಾಣೆಯ ಎದುರೇ ಅಕ್ರಮ ಮರಳು ಸಾಗಾಟ

ಅಕ್ರಮ ಮರಳುಗಾರಿಕೆ ಭಾಗ 2 – ಹರಿಹರ ಗ್ರಾಮಾಂತರ ಠಾಣೆಯ ಎದುರೇ ಅಕ್ರಮ ಮರಳು ಸಾಗಾಟ

ಅಕ್ರಮ ಮರಳುಗಾರಿಕೆ

ಅಕ್ರಮ ಮರಳುಗಾರಿಕೆ

ತುಂಗಭದ್ರೆ ಗರ್ಭದಲ್ಲಿ ಅಕ್ರಮ ಮರಳು ಕೊರೆತ ಭಾಗ 2 - ಮುಖ್ಯಮಂತ್ರಿ ಪದಕ ಪಡೆದ ದಕ್ಷ ಅಧಿಕಾರಿಗಳ ಕಾರ್ಯ ವ್ಯಾಪ್ತಿಯ ನದಿಯಲ್ಲಿ ಅಕ್ರಮ ಮರಳು ದಂಧೆ… ಕಣ್ಣಿದ್ದೂ ಕುರುಡರಂತಾಗಿದ್ದಾರೆ ತಾಲ್ಲೂಕು ಮರಳು ಟಾಸ್ಕ್ ಫೊರ್ಸ್ ಸಮಿತಿ ಸದಸ್ಯರು.

  • Share this:

ದಾವಣಗೆರೆ: ಮಳೆಗಾಲ ನಂತರ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ತುಂಗಭದ್ರೆ ಗರ್ಭದಲ್ಲಿ ಅಕ್ರಮವಾಗಿ ಮರಳು ಕೊರೆತ ಪ್ರಾರಂಭವಾಗಿದೆ. ಕಳೆದ ಎರಡು ವಾರದ ಹಿಂದೆ ಹರಿಹರ ತಾಲೂಕಿನ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿತ್ತು, ಇದರ ಬಗ್ಗೆ ಈ ಹಿಂದೆ ಭಾಗ ಒಂದರಲ್ಲಿ ನ್ಯೂಸ್ 18 ಕನ್ನಡ ಎಲ್ಲೆಲ್ಲಿ ಯಾರ್ಯಾರು ಅಕ್ರಮ ಮರಳುಗಾರಿಕೆ ಮಾಡ್ತಾರೆ ಎಂಬ ವರದಿ ಮಾಡಿತ್ತು, ವರದಿಯಿಂದ ಎಚ್ಚೆತ್ತ ಜಿಲ್ಲಾ ಗಣಿ ಮತ್ತು ಭೂ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆ ಮೇಲೆ ದಾಳಿ ಮಾಡಿ ಕೇಸ್ ದಾಖಲಿಸಿದ್ದರು. ಆದ್ರೆ ದಾವಣಗೆರೆ ಜಿಲ್ಲೆಯಲ್ಲಿ ಪುನಃ ನಿಧಾನವಾಗಿ ಅಕ್ರಮ ಮರಳುಗಾರಿಕೆ ಪ್ರಾರಂಭವಾಗಿದೆ. ಮರಳು ದಂಧೆಕೋರರು ಇದೀಗ ಮಧ್ಯ ರಾತ್ರಿಯಿಂದ ನಸುಕಿನ ಜಾವದ ವೇಳೆ ಮರಳು ಸಾಗಾಟ ಮಾಡುತ್ತಿದ್ದಾರೆ.


ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸುವ ಅಧಿಕಾರಿಗಳೇ ಮರಳು ದಂಧೆಕೋರರ ಜೊತೆ ಶಾಮೀಲಾಗಿರುವ ಬಗ್ಗೆ ಗ್ರಾಮಸ್ಥರು ಮಾತಾಡಿಕೊಳ್ಳುತ್ತಿದ್ದಾರೆ. ಸಚಿವರು, ಹಿರಿಯ ಪೋಲಿಸ್ ಆಧಿಕಾರಿಗಳ ಹೆಸರಿನಲ್ಲೇ ಪೊಲೀಸರು ಅಕ್ರಮ ಮರಳುಗಾರಿಕೆಯ ಕುಳಗಳಿಂದ ಮಾಮೂಲು ಪಡೆಯುತ್ತಾರೆ ಎಂಬ ವಿಷಯವನ್ನ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಇಬ್ಬರು ಹಿರಿಯ ಪೊಲಿಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ದೊರೆತಿದೆ. ಆ ಇಬ್ಬರೂ ಕೂಡ ದಕ್ಷ ಪೋಲಿಸ್ ಆಧಿಕಾರಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೂ ಇವರ ವ್ಯಾಪ್ತಿಯಲ್ಲಿ ಬರುವ ಕೆಳ
ಹಂತದ ಅಧಿಕಾರಿಗಳು ಅಕ್ರಮ ಮರಳು ಮಾಫಿಯಾದಲ್ಲಿ ಶಾಮೀಲಾಗಿರುವ ಬಗ್ಗೆ ಇವರಿಗೆ ಗೊತ್ತಿಲ್ಲದಿರಬಹುದು.


ಇದನ್ನೂ ಓದಿ: ಭಾರತದ ಆರ್ಥಿಕತೆ ನಿರೀಕ್ಷಿತ ಚೇತರಿಕೆ ಇಲ್ಲ; ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 7.5 ಕುಸಿತ


ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರ ತಾಲ್ಲೂಕಿನಲ್ಲಿ ದೊರೆಯುವ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ಅಕ್ರಮವಾಗಿ ಪ್ರತಿ ದಿನ ರಾತ್ರಿ ವೇಳೆ ಅಕ್ರಮವಾಗಿ ಮರಳುಸಾಗಾಟವಾಗುತ್ತಿದೆ. ಹರಿಹರ, ಮಲೆಬೆನ್ನೂರು, ಹೊನ್ನಾಳಿ ಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಕೆಲ ಭಾಗದಲ್ಲಿ ರಾತ್ರಿಯಲ್ಲಿ ಜೆಸಿಬಿಯನ್ನ ನದಿಗಳಲ್ಲಿ ಇಳಿಸಿ ಮರಳು ತೆಗೆದರೆ ಇನ್ನು ಕೆಲ ಭಾಗದಲ್ಲಿ ಕಬ್ಬಿಣದ ತೆಪ್ಪಗಳಲ್ಲಿ ಮರಳನ್ನು ತೆಗೆಯುತ್ತಾರೆ, ಸಧ್ಯ ಮರಳು ಸಾಗಾಟಕ್ಕೆ ಟ್ರಾಕ್ಟರ್ ಹಾಗೂ ಮಜ್ಡಾ ಲಾರಿಗಳನ್ನ ಬಳಸಲಾಗುತ್ತಿದೆ. ಹರಿಹರದ ಗುತ್ತೂರು, ನಾರಾಯಣ ಆಶ್ರಮದ ಹಿಂಭಾಗ, ಸಾರಥಿ, ಎಲ್ಲಮ್ಮ ದೇವಸ್ಥಾನ ರಸ್ಥೆ, ಹರ್ಲಾಪುರ, ಕೈಲಾಸ ನಗರ, ಮೆಟ್ಟಿಲುಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಹರಿಹರ ತಾಲ್ಲೂಕಿನ ಮಲೆಬೆನ್ನೂರಿನ ಗೋವಿನಹಾಳ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರತಿನಿತ್ಯ 13 ರಿಂದ 15 ಟ್ರಾಕ್ಟರ್ ಹಾಗೂ ಮಜ್ಡಾ ಲಾರಿಗಳಲ್ಲಿ ಮರಳು ಸಾಗಾಟವಾಗುತ್ತೆ. ಇಲ್ಲಿ ಜೆಸಿಬಿಯಿಂದ ಹಾಗೂ ತೆಪ್ಪಗಳಿಂದ ನದಿಯಲ್ಲಿ ಮರಳನ್ನ ತೆಗೆಯಲಾಗುತ್ತೆ. ಇನ್ನು, ಹೊನ್ನಾಳಿ ಭಾಗದ ಕೊಣನತಲೆ, ಸೇರಿದಂತೆ ಹಲವು ಪ್ರದೇಶದಲ್ಲಿ ಕೂಡ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆ ನಡೆಯುವ ಪ್ರದೇಶದಲ್ಲಿ ಎಲ್ಲಾ ತರಹದ ವಾಹನಗಳಿಗೆ ಒಂದು ಟ್ರಿಪ್ ಗೆ ಇಂತಿಷ್ಟು ಅಂತಾ ಮಾಮೂಲು ಫಿಕ್ಸ್ ಮಾಡಿಕೊಂಡಿದ್ದಾರಂತೆ ಕೆಲ ಮರಳು ಟಾಸ್ಕ್ ಫೋರ್ಸ್ ಅಧಿಕಾರಿಗಳು. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸರ್ಕಾರ ಹಲವು ಆದೇಶಗಳನ್ನ ನೀಡಿದೆ. ಆದರೆ ಇದಕ್ಕೆ ಸಂಬಂಧಿಸಿದ ಗಣಿ ಮತ್ತು ಭೂ ಇಲಾಖೆ ಅಧಿಕಾರಿಗಳಿಗೆ ಇದ್ಯಾವುದು ಗೊತ್ತಿಲದಂತೆ ವರ್ತಿಸುತ್ತಿದ್ದಾರೆ, ಕಾಟಾಚಾರಕ್ಕೆ ಅಲ್ಲೊಂದು ಇಲ್ಲೊಂದು ಕಡೆ ಚಿಕ್ಕದಾಗಿ ಮರಳನ್ನು ಸೀಜ್ ಮಾಡಿದ್ದು ಬಿಟ್ಟರೆ ನಿರಂತರವಾಗಿ ಅಕ್ರಮಕ್ಕೆ ಕಡಿವಾಣ ಹಾಕಲು ವಿಫಲವಾಗಿದ್ದಾರೆ ಎಂಬುದಂತು ಸತ್ಯ.


Vehicle transporting illegal sand
ಮರಳು ಸಾಗಿಸುತ್ತಿರುವ ಟ್ರಕ್


ಇದನ್ನೂ ಓದಿ: Accident: ಚಾಲಕನ ನಿಯಂತ್ರಣ ತಪ್ಪಿ ಟೀ ಅಂಗಡಿಗೆ ನುಗ್ಗಿದ ಲಾರಿ; 5 ಅಮಾಯಕ ಜೀವಗಳು ಬಲಿ


ಹರಿಹರ ತಾಲ್ಲೂಕಿನಲ್ಲಿ ಅಧಿಕೃತವಾಗಿ 4 ಮರಳು ಗಣಿ ಗುತ್ತಿಗೆಯನ್ನ ನಿಡಲಾಗಿದೆ. ಇನ್ನೇನು ಮಳೆಗಾಲ ಮುಗಿಯಲು ಬಂತು. ಅಧಿಕೃತ ಮರಳುಗಾರಿಕೆ ನಡೆಯಲು ಪ್ರಾರಂಭವಾದರೆ ಅಕ್ರಮ ಮರಳುಗಾರಿಕೆ ನಿಲ್ಲಲಿದೆ. ಅದಕ್ಕಾಗಿಯೇ ರಾತ್ರಿ ವೇಳೆ ಹಿರಿಯ ಅಧಿಕಾರಿಗಳ ಪ್ರಚೋದನೆಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ. ಈ ಅಕ್ರಮ ಮರಳು ಸಾಗಾಣಿಕೆಗೆ ಪರೋಕ್ಷವಾಗಿ ದಾವಣಗೆರೆ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಹಾಗೂ ಪೋಲಿಸ್ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸ್ಥಳೀಯ ಜನರು ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ, ಕೊರೊನಾ ಕಲಾದಲ್ಲಿ ಹಲವರಿಗೆ ಉದ್ಯೋಗದ ಭೀತಿ ಎದುರಾಗಿತ್ತು, ಇದೀಗ ಇದನ್ನ ಬಂಡವಾಳ ಮಾಡಿಕೊಂಡ ಕೆಲ ದಂಧೆಕೊರರು ತುಂಗಭದ್ರಾ ನದಿಯ ಅಕ್ಕಪಕ್ಕದ ಗ್ರಾಮದ ಯುವಕರಿಗೆ ಹಣದಆಮೀಷವೊಡ್ಡಿ ರಾತ್ರಿ ವೇಳೆ ನದಿಯಿಂದ ಮರಳನ್ನ ತೆಗೆಯಲು ಬಳಸಿಕೊಳ್ಳುತ್ತಿದ್ದಾರೆ. ಆ ಯುವಕರಿಗೆ ಹಣ ಸಿಕ್ಕರೆ ಸಾಕು ಎಂಬಂತೆ ಮುಂದೆ ಆಗುವ ಆಪಾಯದ ಹರಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ.


Illegal sand mining in Davangere
ಅಕ್ರಮ ಮರಳು ಗಣಿಗಾರಿಕೆ


ಕಳೆದ ಸಲ ರಾತ್ರಿ 8 ಗಂಟೆಯಾದರೆ ಸಾಕು ಅಕ್ರಮ ಮರಳುಗಾರಿಕೆ ಪ್ರಾರಂಭವಾಗುತ್ತಿತ್ತು, ಇದೀಗ ಮಧ್ಯ ರಾತ್ರಿ 12 ರ ನಂತರ ಮಜ್ಡಾ ಲಾರಿಗಳು ಹಾಗೂ ಟ್ರಾಕ್ಟರ್​ಗಳು ಹರಿಹರ ಗ್ರಾಮಾಂತರ ಠಾಣೆಯ ಮುಂಭಾಗ ರಾಜಾರೋಷವಾಗಿ ಸಾಗುತ್ತಿದ್ದರು ಯಾವೊಬ್ಬ ಅಧಿಕಾರಿಗಳು ಅಕ್ರಮ ಮರಳುಗಾರಿಕೆಯನ್ನ ತಡೆಯುವ ಪ್ರಯತ್ನ ಮಾಡದೇ ಇರುವುದು ವಿಷಾದನೀಯ. ಅಕ್ರಮ ಮರಳುಗಾರಿಕೆ ಬಗ್ಗೆ ಸುದ್ದಿ ಮಾಡದಂತೆ ಮಾಧ್ಯಮದವರಿಗೂ, ಸಂಘ ಸಂಸ್ಥೆಗಳಿಗೆ ಆಮಿಷ ಒಡ್ಡುತ್ತಾರಂತೆ.


ವಿಶೇಷ ವರದಿ: ಹೆಚ್ ಎಂ ಪಿ ಕುಮಾರ್

Published by:Vijayasarthy SN
First published: