news18-kannada Updated:September 7, 2020, 5:41 PM IST
ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಸ್ಥಳ.
ಕಾರವಾರ (ಸೆಪ್ಟೆಂಬರ್ 07); ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಂಡಳಿ ಗ್ರಾಮೀಣ ಭಾಗದ ಅಕ್ಕಪಕ್ಕದ ಏರಿಯಾದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಆರೋಪ ಕೇಳಿ ಬಂದಿದ್ದು ಈ ಬಾಗದ ಜನ ಈಗ ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಮುಂಡಳಿ ಗ್ರಾಮದ ಸುತ್ತಮುತ್ತ ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿವೆ ಕಡಲತೀರದಲ್ಲಿ ನೈಸರ್ಗೀಕವಾಗಿ ಮರಳ ದಿಬ್ಬ ಸೃಷ್ಟಿ ಆಗಿದೆ. ಆದರೆ, ಅಕ್ರಮ ಮರಳು ದಂಧೆಕೋರರು ಈ ಮರಳ ದಿಬ್ಬವನ್ನ ಅಗೆದು ಬಗೆದು ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದಾರೆ. ಈ ಅಕ್ರಮ ದಂದೆ ರಾತ್ರಿ ಸಮಯದಲ್ಲೆ ನಡೆಯುತ್ತಿದೆ. ಈ ನೈಸರ್ಗಿಕ ಮರಳ ದಿಬ್ಬವನ್ನ ಇಲ್ಲಿನ ಅಕ್ರಮ ದಂದೆಕೋರರು ಅಗೆದು ಬಗೆದು ತೆಗೆದ್ರಿಂದ ಕಡಲ ತೀರದ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಕಡಲಕೊರೆತ ತಡೆಯಲು ಈ ನೈಸರ್ಗಿಕ ಮರಳು ದಿಬ್ಬ ಸೃಷ್ಟಿ ಆಗುತ್ತದೆ. ಆದರೆ, ದಂಧೆಕೋರರು ಇದರ ದುರುಪಯೋಗಮಾಡಿಕೊಂಡು ಇಲ್ಲಿನ ಐವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಸಮಸ್ಯೆ ತಂದೊಡ್ಡಿದ್ದಾರೆ.
ಈ ಬಾಗದ ಜನ ಮೀನುಗಾರಿಕೆಯನ್ನ ನಂಬಿ ಜೀವನ ದೂಡುತ್ತಿದ್ದಾರೆ. ಇಲ್ಲಿ ಇವರ ದೋಣಿ ಯನ್ನ ಇಡಲು ಸಹ ಆಗುತ್ತಿಲ್ಲ ಎನ್ನೋದು ಇಲ್ಲಿನ ಜನರ ಆರೋಪ. ಈಗಾಗಲೆ ಸಾಕಷ್ಟು ಮರಳು ದಿಬ್ಬವನ್ನ ಅಗೆದು ತೆಗೆದಿರುವುದರಿಂದ ಸಮುದ್ರದ ನೀರು ನೇರವಾಗಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದ್ದು ಇಲ್ಲಿನ ಜನ ಭಯದಲ್ಲೆ ಜೀವನ ದೂಡುತ್ತಿದ್ದು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.
ಏನಿದು ಅಕ್ರಮ? ಯ್ಯಾವಾಗ ನಡೆಯುತ್ತಿದೆ?
ರಾತ್ರಿ ಸಮಯದಲ್ಲಿ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಈ ಬಗ್ಗೆ ಇಲ್ಲಿನ ಜನ ವಿರೋಧಿಸಿದರೆ ಅಕ್ರಮ ದಂಧೆಕೋರರು ಇಲ್ಲಿನ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕೃತಿ ಸೃಷ್ಟಿಸಿದ ನೈಸರ್ಗಿಕ ಮರಳು ದಿಬ್ಬದಿಂದ ಕಡಲಕೊರೆತ ಉಂಟಾಗದೆ ಇಲ್ಲಿನ ಜನ ನೆಮ್ಮದಿಯ ಜೀವನ ಸಾಗಿಸುತ್ತಾರೆ. ಆದರೆ, ಈ ದಿಬ್ಬವನ್ನೆ ಅಗೆದು ತೆಗೆದ್ರಿಂದ ಸಮುದ್ರದ ನೀರು ನೇರವಾಗಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತದೆ ಇದ್ರಿಂದ ಜನ ಮತ್ತಷ್ಟು ಕಂಗಾಲಾಗಿ ಅಕ್ರಮ ಮರಳು ತೆಗೆಯುವದನ್ನ ತಡೆಯಲು ಸಾಕಷ್ಟು ಬಾರಿ ಸ್ಥಳೀಯ ಆಡಳಿತಕ್ಕೆ ತಿಳಿಸಿದ್ರು ಯ್ಯಾವುದೆ ಪ್ರಯೋಜನ ಆಗಿಲ್ಲ.
ಇದನ್ನೂ ಓದಿ : ಜಿಎಸ್ಟಿಯಂತಹ ದೋಷಪೂರಿತ ತೆರಿಗೆ ವಿಧಾನದ ಅನುಷ್ಠಾನವೇ ದೇಶದ ಆರ್ಥಿಕ ಕುಸಿತಕ್ಕೆ ಕಾರಣ; ರಾಹುಲ್ ಗಾಂಧಿ ಕಿಡಿ
ಇದ್ರಿಂದ ಬೇಸತ್ತ ಜನ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.. ಇನ್ನು ಸಮುದ್ರದ ಮರಳನ್ನ ಸಾಮಾನ್ಯವಾಗಿ ಗ್ರೈನೈಟ್ ಮೋಲ್ಡಿಂಗ್ ಹೀಗೆ ಹತ್ತು ಹಲವು ಕೆಲಸಕ್ಕೆ ಬಳಸಲಾಗೊತ್ತೆ ಇದ್ರಿಂದ ಪುಕ್ಸಟ್ಟೆ ಲಕ್ಷಾಂತರ ರೂ ಜೇಬಿಗೆ ಇಳಿಸಿಕೊಳ್ಳುವ ದಂದೆಕೋರರು ಬಡಜನರ ಹೊಟ್ಟೆ ಮೇಲೆ ಕಾಲಿಡುತ್ತಿದ್ದಾರೆ.
ಹೀಗೆ ಮರಳನ್ನು ಅಗೆದು ತೆಗೆದ್ರಿಂದ ಇಲ್ಲಿ ಮೀನುಗಾರಿಕೆ ಮಾಡಲು ಸಾಕಷ್ಟು ಸಮಸ್ಯೆ ಆಗುತ್ತಿದೆ. ದೋಣಿ ಬಲೆ ಹೀಗೆ ವಿವಿಧ ಮೀನುಗಾರಿಕಾ ಪರಿಕರಗಳನ್ನ ಇಟ್ಟುಕೊಳ್ಳಲು ಸಮಸ್ಯೆ ಆಗಿದೆ, ದಿನೆ ದಿನೆ ಮರಳು ದಿಬ್ಬ ಅಗೆದು ತೆಗೆದ್ರಿಂದ ಸಮುದ್ರದ ನೀರು ಮೇಲೆ ಬರುತ್ತಿದ್ದು ಇಲ್ಲಿನ ಜಾಗ ಆಕ್ರಮಿಸಿಕೊಂಡಿದೆ ಇ ಸಮಸ್ಯೆಯಿಂದ ಹೇಗಾದ್ರು ಮಾಡಿ ಮುಕ್ತಿಕೊಡಿಸಿ ಎಂದು ಜಿಲ್ಲಾಡಳಿತಕ್ಕೆ ಜನ ಆಗ್ರಹಿಸಿದ್ದಾರೆ.
Published by:
MAshok Kumar
First published:
September 7, 2020, 5:41 PM IST