ಯಾದಗಿರಿಯಲ್ಲಿ ಅಕ್ರಮ ಮರಳು ಮಾಫಿಯಾ; ಅಧಿಕಾರಿಗಳ ದಾಳಿ 10 ಲಕ್ಷ ರೂ ಮೌಲ್ಯದ ಮರಳು ಜಪ್ತಿ...! 

ಜಿಲ್ಲೆಯ ಸುರಪುರ ತಾಲೂಕಿನ ಅಡ್ಡೊಡಗಿ ಹಾಗೂ ಚೌಡೇಶ್ವರಹಾಳ ಗ್ರಾಮದ ಅಕ್ರಮ ಮರಳು ಸಂಗ್ರಹಣೆ ಅಡ್ಡೆ ಪ್ರದೇಶದ ಜಮೀನಿನಲ್ಲಿ ಅಧಿಕಾರಿಗಳು ದಾಳಿ ಮಾಡಲು ಹೊರಟಾಗ ಅಕ್ರಮ ದಂಧೆಕೊರರು ಟ್ರಾಕ್ಟರ್ ಸಹಿತ ಪರಾರಿಯಾಗಿದ್ದಾರೆ.

ಅಕ್ರಮ ಮರಳು ಮಾಫಿಯಾ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು.

ಅಕ್ರಮ ಮರಳು ಮಾಫಿಯಾ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು.

  • Share this:
ಯಾದಗಿರಿ: ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ಮಾಫಿಯಾ ನಡೆಯುತ್ತಿದೆ. ಯಾದಗಿರಿ ನಗರದ ಹತ್ತಿಕುಣಿಗೆ ತೆರಳುವ ರಸ್ತೆ ಮಾರ್ಗದ ಹಳ್ಳ,ನಗರದ ಹೊರಭಾಗದ ಹಳ್ಳ,ಸುರಪುರ ತಾಲೂಕಿನ ಅಡ್ಡೊಡಗಿ, ಚೌಡೇಶ್ವರಹಾಳ ಸೇರಿದಂತೆ ಅನೇಕ ಕಡೆ ರಾಜರೋಷವಾಗಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ. ಅಕ್ರಮವಾಗಿ ಮರಳು ಹಾಡಹಗಲೇ ಯಾದಗಿರಿ ನಗರದಿಂದ ಪ್ರಮುಖ ಪ್ರದೇಶಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ. ಆದರೆ, ಟಿಪ್ಪರ್ ಗಳಲ್ಲಿ ಮರಳು ಸಾಗಾಣಿಕೆ ಮಾಡಲಾಗುತ್ತಿದ್ದರು ಯಾವುದೇ ಮುಂಜಾಗ್ರತೆ ಕ್ರಮವಹಿಸಿಲ್ಲ‌. ಮರಳು ತುಂಬಿದ ಟಿಪ್ಪರ್ ತೆರಳುತ್ತಿದ್ದರೆ ಬೈಕ್ ಹಾಗೂ ವಾಹನ ಸವಾರರು ಜೀವಕೈಯಲ್ಲಿ ಹೀಡಿದುಕೊಂಡು ಸಂಚಾರ ಮಾಡಬೇಕಾಗಿದೆ. ಮರಳು ತುಂಬಿದ ಟಿಪ್ಪರ್ ನಿಂದ ಮರಳು ಗಾಳಿಗೆ ಉದುರಿ ವಾಹನ ಸವಾರರ ಕಣ್ಣಿನ ಮೇಲೆ ಬಿಳುತ್ತಿದೆ ಇದರಿಂದ ಬೈಕ್ ಸವಾರರು ಬೈಕ್ ತೆಗೆದುಕೊಂಡು ಹೋಗಬೇಕಾದರೆ ಭಯಪಡುವಂತಾಗಿದೆ.

ಟಿಪ್ಪರ್ ತೆರಳುವ ರಸ್ತೆ ಮಾರ್ಗವಾಗಿ ಅಧಿಕಾರಿಗಳು ಸಂಚಾರ ಮಾಡುತ್ತಾರೆ ಆದರೆ, ಕಟ್ಟುನಿಟ್ಟಿನ ಕ್ರಮಕೈಗೊಳ್ಳದಕ್ಕೆ  ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಮರಳು ತುಂಬಿದ ಟಿಪ್ಪರ್ ಗಳು ನಗರದಲ್ಲಿ ವೇಗವಾಗಿ ಸಂಚಾರ ಮಾಡುತ್ತವೆ ಇದು ರಸ್ತೆ ಅಪಘಾತಕ್ಕೆ ಕೂಡ ಕಾರಣವಾಗುತ್ತಿದೆ ಎಂದು ಬೈಕ್ ಸವಾರರು ನೋವು ತೊಡಗಿಕೊಂಡಿದ್ದಾರೆ.

ಟ್ರಾಕ್ಟರ್ ಸಹಿತ ಪರಾರಿ...!

ಜಿಲ್ಲೆಯ ಸುರಪುರ ತಾಲೂಕಿನ ಅಡ್ಡೊಡಗಿ ಹಾಗೂ ಚೌಡೇಶ್ವರಹಾಳ ಗ್ರಾಮದ ಅಕ್ರಮ ಮರಳು ಸಂಗ್ರಹಣೆ ಅಡ್ಡೆ ಪ್ರದೇಶದ ಜಮೀನಿನಲ್ಲಿ ಅಧಿಕಾರಿಗಳು ದಾಳಿ ಮಾಡಲು ಹೊರಟಾಗ ಅಕ್ರಮ ದಂಧೆಕೊರರು ಟ್ರಾಕ್ಟರ್ ಸಹಿತ ಪರಾರಿಯಾಗಿದ್ದಾರೆ.

ಇಂದು ಬೆಳ್ಳಂ ಬೆಳಿಗ್ಗೆ ಸುರಪುರ ತಹಶಿಲ್ದಾರ ಸುಬ್ಬಣ್ಣ,ಕಕ್ಕೇರಾ ಉಪತಹಿಲ್ದಾರ ದೇವಪ್ಪ,ಕಂದಾಯ ನಿರೀಕ್ಷಕ ಗುರುಬಸವ, ಪಿಎಸ್ ಐ ಚಂದ್ರಶೇಖರ ಅವರ ತಂಡವು ಇಂದು ಬೆಳಿಗ್ಗೆ ಅಡ್ಡೊಡಗಿ ಗ್ರಾಮದ ಸರ್ವೆ ನಂ 74 ಮತ್ತು 75 ರ ಹಾಗೂ ಚೌಡೇಶ್ವರಹಾಳ  ಗ್ರಾಮದ ಸರ್ವೆ ನಂ 8 ರ ಜಮೀನು ಪ್ರದೇಶದಲ್ಲಿ ಅಕ್ರಮ ದಂಧೆಕೊರರು ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿ ರಾತ್ರೋ  ರಾತ್ರಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದರು. ಈ ಬಗ್ಗೆ ಸುರಪುರ ತಹಶಿಲ್ದಾರ ಸುಬ್ಬಣ್ಣ ದಾಳಿ ಮಾಡಿ  ಮರಳು ಜಪ್ತಿ ಮಾಡಿದ್ದಾರೆ. ಸುಮಾರು 1500 ಟಿಪ್ಪರ್ ಗಳಷ್ಟು ಅಂದಾಜು 10 ಲಕ್ಷ ರೂ ಬೆಲೆ ಬಾಳುವ ಮರಳು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿದ್ದತೆ; ನನಸಾಗುತ್ತಾ ಬಹುವರ್ಷದ ಕನಸು?

ಈ ಬಗ್ಗೆ ಸುರಪುರ ತಹಶಿಲ್ದಾರ ಸುಬ್ಬಣ್ಣ ನ್ಯೂಸ್ 18 ಕನ್ನಡಕ್ಕೆ ಮಾತನಾಡಿ, ಕಳೆದ 15 ದಿನಗಳಿಂದ ಕೃಷ್ಣಾ ನದಿಯಿಂದ ಅಡ್ಡೊಡಗಿ, ಚೌಡೇಶ್ವರಹಾಳ ನಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತಿತ್ತು ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಲಾಗಿತ್ತು ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿ ಮರಳು ಜಪ್ತಿ ಮಾಡಲಾಗಿದೆ ಎಂದರು.

ಯಾರೆ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿದ್ದರು ತಪ್ಪಿತಸ್ಥರ ಕ್ರಮಕೈಗೊಳ್ಳಲಾಗುತ್ತದೆ ಎಂದು ತಹಶಿಲ್ದಾರ ಎಚ್ಚರಿಕೆ ನೀಡಿದ್ದಾರೆ.
Published by:MAshok Kumar
First published: