ಕೊರೋನಾ ನಡುವೆಯೂ ಆನೇಕಲ್​ನಲ್ಲಿ ಅಕ್ರಮ ಇಟ್ಟಿಗೆ ಘಟಕಗಳ ಭರಾಟೆ

ಹೊರ ರಾಜ್ಯದ ಅಕ್ರಮ ಇಟ್ಟಿಗೆ ದಂಧೆಕೋರರು ಕೊರೊನಾ ಹಾವಳಿ ನಡುವೆಯೂ ರಾಜ್ಯದ ಗಡಿ ಹಳ್ಳಿಗಳ ರೈತರ ಹೊಲಗಳಲ್ಲಿ ಅನಧಿಕೃತವಾಗಿ ಇಟ್ಟಿಗೆ ಘಟಕಗಳನ್ನು ಸ್ಥಾಪಿಸಿದ್ದು, ಇಲ್ಲಿ ತಯಾರಾದ ಇಟ್ಟಿಗೆಗಳನ್ನು ದುಬಾರಿ ಬೆಲೆಗೆ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ.

news18-kannada
Updated:October 13, 2020, 9:16 AM IST
ಕೊರೋನಾ ನಡುವೆಯೂ ಆನೇಕಲ್​ನಲ್ಲಿ ಅಕ್ರಮ ಇಟ್ಟಿಗೆ ಘಟಕಗಳ ಭರಾಟೆ
ಅನಧಿಕೃತ ಮಣ್ಣಿನ ಇಟ್ಟಿಗೆ ಘಟಕ
  • Share this:
ಆನೇಕಲ್ (ಅ. 13): ತಮಿಳುನಾಡಿನ ಗಡಿಗೆ ಹೊಂದಿಕೊಂಡಂತಿರುವ ಆನೇಕಲ್ ತಾಲೂಕಿನ ಭೂ ಪ್ರದೇಶ ಫಲವತ್ತಾಗಿದೆ. ಕೃಷಿಗೆ ಯೋಗ್ಯವಾದ ಅಪರೂಪದ ಕೆಂಪು ಮಿಶ್ರಿತ ಮಣ್ಣು ಹೇರಳವಾಗಿ ದೊರೆಯುತ್ತದೆ. ಜೊತೆಗೆ ಇಟ್ಟಿಗೆ ಉತ್ಪಾದನೆಗೂ ಹೇಳಿ ಮಾಡಿಸಿದ ಮಣ್ಣು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ದಂಧೆಕೋರರು ಕೊರೊನಾ ನಡುವೆಯು ಕೃಷಿ ಜಮೀನುಗಳಲ್ಲಿ ಅಕ್ರಮವಾಗಿ ಇಟ್ಟಿಗೆ ತಯಾರಿಸಿ ಲೂಟಿ ಹೊಡೆಯುತ್ತಿದ್ದಾರೆ. ಆದರೆ, ಸ್ಥಳೀಯ ಅಧಿಕಾರಿಗಳು ಮಾತ್ರ ಯಾಕೋ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. 

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗಡಿ ಗ್ರಾಮ ಪಂಚಾಯ್ತಿ ಬಳ್ಳೂರು ವ್ಯಾಪ್ತಿಯ ಜಮೀನುಗಳಲ್ಲಿ ಯಥೇಚ್ಚವಾಗಿ ದೊರೆಯುವ ಕೆಂಪು ಮಿಶ್ರಿತ ಜೇಡಿ ಮಣ್ಣು ಇಟ್ಟಿಗೆ ತಯಾರಿಕೆಗೆ ಹೇಳಿ ಮಾಡಿಸಿದಂತಹ ಮಣ್ಣು. ಈ ಮಣ್ಣಿನಲ್ಲಿ ತಯಾರಿಸಿದ ಇಟ್ಟಿಗೆ ಕೆಂಪು ಮತ್ತು ಗಟ್ಟಿಯಾಗಿರುವ ಕಾರಣ ಅತಿ ಹೆಚ್ಚು ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹೊರ ರಾಜ್ಯದ ಅಕ್ರಮ ಇಟ್ಟಿಗೆ ದಂಧೆಕೋರರು ಕೊರೊನಾ ಹಾವಳಿ ನಡುವೆಯೂ ರಾಜ್ಯದ ಗಡಿ ಹಳ್ಳಿಗಳ ರೈತರ ಹೊಲಗಳಲ್ಲಿ ಅನಧಿಕೃತವಾಗಿ ಇಟ್ಟಿಗೆ ಘಟಕಗಳನ್ನು ಸ್ಥಾಪಿಸಿದ್ದು, ಇಲ್ಲಿ ತಯಾರಾದ ಇಟ್ಟಿಗೆಗಳನ್ನು ದುಬಾರಿ ಬೆಲೆಗೆ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಮಾತ್ರ ಬಿಡಿಗಾಸು‌ ನೀಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಮಂಜುನಾಥ್ ದೇವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Illegal Mud Bricks Scam Running in Tamil Nadu Border Anekal.
ಅನಧಿಕೃತ ಮಣ್ಣಿನ ಇಟ್ಟಿಗೆ ಘಟಕ


ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ನಕಲಿ ನೋಟು ದಂಧೆಕೋರರ ಬಂಧನ; 5.50 ಲಕ್ಷ ರೂ. ವಶಕ್ಕೆ

ಅಂದಹಾಗೆ ಅನಧಿಕೃತ ಇಟ್ಟಿಗೆ ತಯಾರಿಕಾ ಘಟಕಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಕೃಷಿ ಉದ್ದೇಶಿತ ಜಮೀನುಗಳಲ್ಲಿ ಕೃಷಿಯೇತರ ಚಟುವಟಿಕೆ ನಡೆಸಲು ಸಂಬಂಧಪಟ್ಟ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆಯಬೇಕು. ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದು ಸರ್ಕಾರಕ್ಕೆ ಕಂದಾಯ ಪಾವತಿಸಬೇಕು. ಇಲ್ಲವಾದರೆ ಅಂತಹವುಗಳು ಕಾನೂನುಬಾಹಿರ ಆಗುತ್ತವೆ. ತಾಲ್ಲೂಕು ಆಡಳಿತದಿಂದ ಯಾವುದೇ ಇಟ್ಟಿಗೆ ತಯಾರಿಕಾ ಘಟಕಗಳು ಪರವಾನಗಿ ಪಡೆದಿಲ್ಲ. ಹಾಗಾಗಿ ಸ್ಥಳೀಯ ಕಂದಾಯ ಅಧಿಕಾರಿಗಳ ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು ಎಂದು ಆನೇಕಲ್ ತಹಶೀಲ್ದಾರ್ ಮಹಾದೇವಯ್ಯ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಕೊರೊನಾ ಹಾವಳಿ ನಡುವೆಯು ತಮಿಳುನಾಡಿನ ಕೆಲ ಇಟ್ಟಿಗೆ ದಂಧೆಕೋರರು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ನೀರಾತಂಕವಾಗಿ ಕೃಷಿ ಜಮೀನುಗಳಲ್ಲಿ ಇಟ್ಟಿಗೆ ತಯಾರಿಕೆ  ದಂಧೆ ನಡೆಸುತ್ತಿದ್ದಾರೆ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ವಹಿಸಬೇಕಿದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.
Published by: Sushma Chakre
First published: October 13, 2020, 8:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading