HOME » NEWS » District » ILLEGAL LIQUOR BREWERY IN MYSORE KERALA PEOPLE ILLEGALY CROSSING THE BORDER FOR LIQUOR MAK

ಮೈಸೂರಲ್ಲಿ ಅಕ್ರಮ ಮದ್ಯ ದಂಧೆ; ಗಡಿದಾಟಿ ಬರುತ್ತಿರುವ ಕೇರಳಿಗರು; ಮತ್ತೆ ಶುರುವಾಯ್ತು ಕೊರೋನಾತಂಕ

ಕೇರಳದಿಂದ ಬರುವ ವಾಹನಗಳನ್ನ ನಿಲ್ಲಿಸಿ ಎಂದು ಕಳೆದ ವಾರವಷ್ಟೇ ರಾಜ್ಯದ ಗಡಿ ಭಾಗದ ಜನರು ಒತ್ತಾಯಿಸಿದ್ದರು. ಇದರಿಂದ ಕೊರೋನಾ ಸೋಂಕು ಹರಡುವ ಭೀತಿ ಇದೆ ಎಂದು ಗಡಿ ಭಾಗದ ಜನ ಆತಂಕ ವ್ಯಕ್ತಪಡಿಸಿದ್ದರು. ಈ ನಡುವೆ ಕೇರಳಿಂದ ಅಕ್ರಮ ವಲಸಿಗರು ಕಪಿಲಾ ನದಿ ದಾಟಿ ಮದ್ಯ ಕೊಳ್ಳಲು ಮುಂದಾಗಿದ್ದು, ಗಡಿ ಭಾಗದ ಜನರಿಗೆ ಮತ್ತಷ್ಟು ಆತಂಕವನ್ನು ತಂದೊಡ್ಡಿದೆ.

news18-kannada
Updated:May 27, 2020, 3:46 PM IST
ಮೈಸೂರಲ್ಲಿ ಅಕ್ರಮ ಮದ್ಯ ದಂಧೆ; ಗಡಿದಾಟಿ ಬರುತ್ತಿರುವ ಕೇರಳಿಗರು; ಮತ್ತೆ ಶುರುವಾಯ್ತು ಕೊರೋನಾತಂಕ
ಅಕ್ರಮ ಮದ್ಯಕ್ಕಾಗಿ ಗಡಿದಾಟಿ ಬಂದಿರುವ ಕೇರಳಿಗರು.
  • Share this:
ಕೇರಳ (ಮೇ 27); ಕೇರಳದಿಂದ ರಾಜ್ಯಕ್ಕೆ ಒಂದು ವಾಹನ ಬಂದ್ರು ಗಡಿ ಭಾಗದ ಜನರು ಬೆಚ್ಚುವಂತ ಸ್ಥಿತಿ ನಿರ್ಮಾಣವಾಗಿದ್ದು, ಜನ ಸಾಮಾನ್ಯರು ಅಂತರ ರಾಜ್ಯ ವಾಹನ ಸಂಚಾರವನ್ನು ನಿರ್ಬಂಧಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೈಸೂರಿನಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದ್ದು, ನೆರೆಯ ಕೇರಳದ ಜನ ನದಿ ದಾಟಿ ಬಂದು ಮದ್ಯ ಕೊಳ್ಳುತ್ತಿದ್ದಾರೆ. ಇದು ಜಿಲ್ಲೆಯಲ್ಲಿ ಮತ್ತೆ ಕೊರೋನಾ ಹಾವಳಿ ಹೆಚ್ಚಾಗುವ ಭೀತಿ ಉಂಟು ಮಾಡಿದೆ.

ಕೇರಳದಿಂದ ಬರುವ ವಾಹನಗಳನ್ನ ನಿಲ್ಲಿಸಿ ಎಂದು ಕಳೆದ ವಾರವಷ್ಟೇ ರಾಜ್ಯದ ಗಡಿ ಭಾಗದ ಜನರು ಒತ್ತಾಯಿಸಿದ್ದರು. ಇದರಿಂದ ಕೊರೋನಾ ಸೋಂಕು ಹರಡುವ ಭೀತಿ ಇದೆ ಎಂದು ಗಡಿ ಭಾಗದ ಜನ ಆತಂಕ ವ್ಯಕ್ತಪಡಿಸಿದ್ದರು. ಈ ನಡುವೆ ಕೇರಳಿಂದ ಅಕ್ರಮ ವಲಸಿಗರು ಕಪಿಲಾ ನದಿ ದಾಟಿ ಮದ್ಯ ಕೊಳ್ಳಲು ಮುಂದಾಗಿದ್ದು, ಗಡಿ ಭಾಗದ ಜನರಿಗೆ ಮತ್ತಷ್ಟು ಆತಂಕವನ್ನು ತಂದೊಡ್ಡಿದೆ.

ಕರ್ನಾಟಕ-ಕೇರಳ‌ ಗಡಿ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಹೆಚ್.ಡಿ ಕೋಟೆ ತಾಲೂಕಿನ ಬಾವಲಿ ಗ್ರಾಮದ ನದಿ ಅಂಚಿಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇನ್ನು ಈ ಮದ್ಯ ಖರೀದಿಸಲು ಹೊಳೆ ದಾಟಿ ಕೇರಳಿಗರು ರಾಜ್ಯ ಪ್ರವೇಶಿಸುತ್ತಿದ್ದಾರೆ. ಹೀಗೆ ಬಂದ ಕೆಲವರಿಗೆ ಗ್ರಾಮಸ್ಥರ ತರಾಟೆ ತೆಗೆದುಕೊಂಡರೆ, ಮತ್ತೇ ಕೆಲವರು ಇದನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಮದ್ಯ ಖರೀದಿಯಲ್ಲಿ ನಿರತರಾಗಿದ್ದಾರೆ.

ಇನ್ನು ಕಬಿನಿ ಹಿನ್ನೀರನ್ನು ದಾಟಿ ಕರ್ನಾಟಕದ ಗಡಿಯತ್ತ ಬರುತ್ತಿರುವ ಕೇರಳ ಮೂಲದವರಿಂದ ಕೊರೊನೊ ಸೋಂಕು ತಗಲುವ ಭೀತಿಯಲ್ಲಿ ಗಡಿ ಭಾಗದ ಜನತೆಯಲ್ಲಿ ಉದ್ಭವಿಸಿದೆ. ಇದರಿಂದ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಹಾಗೂ ಕೇರಳದವರ ಅಕ್ರಮ ಪ್ರವೇಶ ತಡೆಯುವಂತೆ ಇಲ್ಲಿನ ಜನ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕುರಿತು ಗಮನವಹಿಸದೇ ಇದ್ದಲ್ಲಿ ಜಿಲ್ಲೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಇದನ್ನೂ ಓದಿ : ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ನಾಮಕರಣ; ಸರ್ಕಾರದ ತೀರ್ಮಾನಕ್ಕೆ ವಿರೋಧ ಪಕ್ಷದ ನಾಯಕರು ಕಿಡಿ

First published: May 27, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories