• Home
  • »
  • News
  • »
  • district
  • »
  • ಬಿಡಿಎ, ಬಿಎಂಆರ್​ಡಿಎಯೊಳಗಿನ ಅಕ್ರಮಗಳಿಂದ ಸರ್ಕಾರದ ಬೊಕ್ಕಸಕ್ಕೆ 850 ಕೋಟಿ ನಷ್ಟ: ಬಿಜೆ ಪುಟ್ಟಸ್ವಾಮಿ

ಬಿಡಿಎ, ಬಿಎಂಆರ್​ಡಿಎಯೊಳಗಿನ ಅಕ್ರಮಗಳಿಂದ ಸರ್ಕಾರದ ಬೊಕ್ಕಸಕ್ಕೆ 850 ಕೋಟಿ ನಷ್ಟ: ಬಿಜೆ ಪುಟ್ಟಸ್ವಾಮಿ

ಬಿಡಿಎ

ಬಿಡಿಎ

ಬೆಂಗಳೂರಿನಲ್ಲಿ ಅಕ್ರಮ ಬಡಾವಣೆಗಳನ್ನ ತಡೆಯುವಲ್ಲಿ ಬಿಡಿಎ ಮತ್ತು ಬಿಎಂಆರ್ಡಿಎ ವಿಫಲವಾಗಿವೆ. ಕೋಟ್ಯಂತರ ಹಣವು ಅಲ್ಲಿನ ಅಧಿಕಾರಿಗಳ ಜೇಬು ಸೇರಿವೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಹೇಳಿದ್ಧಾರೆ.

  • Share this:

ಬೆಂಗಳೂರು(ಆ. 04): ನಗರದಲ್ಲಿ ನೂರಾರು ಅಕ್ರಮ ಬಡಾವಣೆಗಳು ತಲೆ ಎತ್ತಿರುವುದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ ನಷ್ಟವಾಗಿದೆ. ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಬೇಕಾದ ಬಿಡಿಎ ಮತ್ತು ಬಿಎಂಆರ್​ಡಿಎ ಸಂಸ್ಥೆಗಳು ಕೈಕಟ್ಟಿ ಕೂತಿವೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪುಟ್ಟಸ್ವಾಮಿ, ಬಿಡಿಎ ಮತ್ತು ಬಿಎಂಆರ್​​ಡಿಎಯಿಂದ ಸರ್ಕಾರದ ಬೊಕ್ಕಸಕ್ಕೆ 850 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.


ಬೆಂಗಳೂರು ನಗರವನ್ನು ಯೋಜನಾಬದ್ಧವಾಗಿ ನಿರ್ಮಿಸುವುದು, ಇಲ್ಲಿನ ನಾಗರಿಕರ ಸೂರಿಗಾಗಿ ಮನೆಗಳನ್ನ ಹಂಚುವುದು, ನೂತನ ಬಡವಾಣೆಯ ನಕ್ಷ ತಯಾರಿಸುವುದು ಸೇರಿದಂತೆ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳನ್ನ ಗಮನಿಸುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉದ್ದೇಶ. ಆದರೆ, ನಗರದಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಬಡಾವಣೆಗಳು ತಲೆ ಎತ್ತುತ್ತಲೇ ಇವೆ. ಇದನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. 15 ವರ್ಷದಿಂದ ಒಂದೇ ಒಂದು ನಿವೇಶನ ಹಂಚಿಕೆಯಾಗಿಲ್ಲ. ಆದರೆ, ಅಕ್ರಮ ಬಡಾವಣೆ ನಿರ್ಮಾಣವನ್ನು ನಿಯಂತ್ರಿಸುವ ಕೆಲಸವೂ ಆಗುತ್ತಿಲ್ಲ. ಕೋಟ್ಯಂತರ ಹಣವು ಅಧಿಕಾರಿಗಳ ಜೇಬು ಸೇರುತ್ತಿದೆ ಎಂದು ಬಿ.ಜೆ. ಪುಟ್ಟಸ್ವಾಮಿ ಅಪಾದಿಸಿದ್ದಾರೆ.


ಇದನ್ನೂ ಓದಿ: ವೃತ್ತಿಜೀವನದಲ್ಲಿ ಒಂದೂ ಅಪಘಾತ ಮಾಡದ, ಒಮ್ಮೆಯೂ ರಜೆ ಮಾಡದ ಬಸ್ ಚಾಲಕ ಕೃಷ್ಣಪ್ಪಗೆ ಸನ್ಮಾನ


ಬೆಂಗಳೂರಿನಲ್ಲಿ 172 ಬಡಾವಣೆಗಳು ಅಕ್ರಮ ಇವೆ ಎಂದು ಬಿಡಿಎ ಹೇಳುತ್ತಿದೆ. 500 ಕೋಟಿಯಷ್ಟು ಹಣ ಬಿಡಿಎಗೆ ಬರಬೇಕಿದೆ. ಸರ್ಕಾರದ ಬೊಕ್ಕಸಕ್ಕೆ 352 ಕೋಟಿ ನಷ್ಟವಾಗಿದೆ. ಇಷ್ಟಾದರೂ ಬಿಡಿಎನವರು ಅನಧಿಕೃತ ಬಡಾವಣೆಗಳ ನಿರ್ಮಾಣವನ್ನು ಯಾಕೆ ತಡೆಯಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.


ಬಿಎಂಆರ್​ಡಿ ಪ್ರಾಧಿಕಾರ ಮಾಸ್ಟರ್ ಪ್ಲಾನ್ ಬಿಡುಗಡೆ ಮಾಡಿದ ಮೇಲೆ ಯಾವುದೇ ಅನಧಿಕೃತ ಬಡಾವಣೆ ತಲೆ ಎತ್ತಬಾರದಿತ್ತು. ಆದರೆ, ಪ್ರಾಧಿಕಾರ ನೀಡಿದ ಮಾಹಿತಿ ಪ್ರಕಾರವೇ 800 ಸಂಸ್ಥೆಗಳು 5,488 ಎಕರೆಯಷ್ಟು ಪ್ರದೇಶಗಳಲ್ಲಿ ಅಕ್ರಮವಾಗಿ ಬಡಾವಣೆಗಳನ್ನ ಕಟ್ಟಲಾಗಿದೆ. ಇದರಿಂದ ಸರ್ಕಾರಕ್ಕೆ ಬರಬೇಕಾದ 185 ಕೋಟಿ ರೂ ತೆರಿಗೆ ಸಂದಾಯವಾಗಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷರು ಈ ಅಕ್ರಮವನ್ನು ಬಯಲಿಗೆಳೆದಿದ್ದಾರೆ.


ಇದನ್ನೂ ಓದಿ: ಗಿರಿಜನರ ಲ್ಯಾಂಪ್ಸ್ ಸೊಸೈಟಿಯಲ್ಲಿ ಮೂರು ಕೋಟಿ ಅಕ್ರಮ ಆರೋಪ ; ಕ್ರಿಮಿನಲ್ ಕೇಸ್ ದಾಖಲಿಸಲು ಆಗ್ರಹ




ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ತತ್​ಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಬಡಾವಣೆಗಳನ್ನ ಕೆಡವಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.

Published by:Vijayasarthy SN
First published: