ಚಿಕ್ಕಮಗಳೂರು(ಏಪ್ರಿಲ್ 16): ತಿಂಗಳಿಗೆ ಮೂರ್ನಾಲ್ಕು ದೇಶ ಸುತ್ತಿಕೊಂಡು ಆರಾಮಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ನಮ್ಮೂರೇ ನಮಗೆ ಮೇಲು ಎನ್ನಿಸಿಬಿಟ್ಟಿತ್ತು. ಪರಿಣಾಮವಾಗಿ ಎಲ್ಲಾ ಬಿಟ್ಟು ಕೃಷಿ ಮಾಡಲು ಊರಿಗೆ ಬಂದವನ ಬದುಕಿಗೆ ಮೆಸ್ಕಾಂನಿಂದ ಕರೆಂಟ್ ಶಾಕ್ ಕೊಟ್ಟುಬಿಟ್ಟಿದೆ. ಈ ಶಾಕಿಂಗ್ ಘಟನೆ ಚಿಕ್ಕಮಗಳೂರು ತಾಲೂಕಿನ ಲಕ್ಷ್ಮಿಪುರದಲ್ಲಿ ನಡೆದಿದೆ.
ಲಕ್ಷ್ಮೀಪುರ ನಿವಾಸಿ ರವಿ ಸ್ಪೋಟ್ರ್ಸ್ ಹಾಗೂ ಎಜುಕೇಷನ್‍ನಲ್ಲಿ ಟೀಚ್ ಮಾಡುವ ವೃತ್ತಿ ಮಾಡಿಕೊಂಡು ದೇಶ ಸುತ್ತಿಕೊಂಡು ಇದ್ದರು. ದೇಶ-ದೇಶ ಸುತ್ತಿ ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದ್ದರು. ಆದ್ರೆ ನಮ್ಮೂರೆ ನಮಗೆ ಚೆಂದ ಎಂದು ಎಲ್ಲಾ ಬಿಟ್ಟು ಊರಲ್ಲಿ ಕೃಷಿ ಮಾಡೋಣ ಎಂದು ವಾಪಸ್ ಬಂದಿದ್ದರು. ಆದರೆ, ಅವರಿಗೆ ಗೊತ್ತಿಲ್ಲದಂತೆ ಅವರ ಜಮೀನಿನಲ್ಲಿ ಮೆಸ್ಕಾಂ 11000 ಕೆ.ವಿ.ಯ ಹೈವೋಲ್ಟೇಜ್ ಲೈನ್ ಎಳೆದಿದ್ದು ಇಂದು ಆ ಲೈನ್‍ನಿಂದ ಕೃಷಿ ಮಾಡದಂತಹಾ ಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ, ಈ ಲೈನ್‍ನಿಂದ ಸಿಡಿಯುವ ಕಿಡಿ ಜಮೀನಿನಲ್ಲಿರೋ ಬೆಳೆಯನ್ನ ಸಂಪೂರ್ಣವಾಗಿ ಸುಟ್ಟು ಹಾಕಿದೆ. ಇದು ಕೃಷಿ ಆಸೆ ಹೊತ್ತು ಬಂದು ರವಿ ಆಸೆ ತಣ್ಣೀರೆರಚಿದಂತಾಗಿದೆ.
ರವಿಗೆ ಲಕ್ಷ್ಮೀಪುರದಲ್ಲಿ ತಾತ ಮಾಡಿದ ಐದು ಎಕರೆ ಜಮೀನು ಇದೆ. ಈತ ಜಮೀನು ಕಡೆ ಬರದೆ ಸುಮಾರು 15 ವರ್ಷಗಳೇ ಕಳೆದಿವೆ. ಹಳ್ಳಿಗೆ ಬಂದರು ಜಮೀನು ಕಡೆ ಹೋಗಿರಲಿಲ್ಲ. ಈಗ ಕೃಷಿ ಮಾಡೋಣ ಎಂದು ಬಂದಾಗ ಅದೇ ಐದು ಎಕರೆ ಜಮೀನು ಮಧ್ಯೆ ಹೈಟೆನ್ಷನ್ ಲೈನ್ ಹೋಗಿದೆ. ಓಲ್ಟೇಜ್ ಜಂಪ್ ಆಗುವಾಗ ಸಿಡಿಯುವ ಕಿಡಿಯಿಂದ ಇಡೀ ಹೊಲದಲ್ಲಿದ್ದ ಬೆಳೆಗಳು ಸುಟ್ಟು ಹೋಗಿವೆ. ಎರಡು ವರ್ಷದ ಹಿಂದೆ ವಿದೇಶದಿಂದ ಬಂದ ರವಿ ಕಳೆದ ಒಂದೂವರೆ ವರ್ಷದಿಂದ ತಮ್ಮ ಜಮೀನಲ್ಲಿ ಹಲಸು, ಮಾವು, ತೆಂಗು, ಸೀಬೆ, ಜೊತೆಗೆ ಶ್ರೀಗಂಧ ಹಾಗೂ ಕಾಡು ಜಾತಿಯ ಮರ ಸೇರಿದಂತೆ ಸುಮಾರು 40 ಜಾತಿಯ 600ಕ್ಕೂ ಅಧಿಕ ಸಸಿಗಳನ್ನ ಹಾಕಿದ್ದರು. ಆದರೆ, ಲೈಟ್ ಕಂಬದಿಂದ ಸಿಡಿದ ಕಿಡಿ ಸುಮಾರು ಎರಡೂವರೆ ಎಕರೆಯಲ್ಲಿದ್ದ ಬೆಳೆಯನ್ನ ಸಂಪೂರ್ಣ ಸುಟ್ಟು ಹಾಕಿದೆ. ಇದು ಕೃಷಿಕ ರವಿಗೆ ದೊಡ್ಡ ಆಘಾತವಾಗಿದೆ.
ಈಗಾಗಲೇ ಜಮೀನಿನಲ್ಲಿ ಬೆಳೆದಿರುವ ಹಣ್ಣಿನ ಗಿಡಗಳ ಜೊತೆಗೆ ಬೆಲೆಬಾಳುವ ಮರಗಳು ಕೂಡ ಬೆಂಕಿಗಾಹುತಿಯಾಗಿವೆ. ಈ ಪರಿವರ್ತಕದಿಂದ ಹಾನಿ ಕಟ್ಟಿಟ್ಟ ಬುತ್ತಿ ಅಂತ ಈಗಾಗಲೇ ಅಗ್ನಿಶಾಮಕ ಇಲಾಖೆ ಕೂಡ ಅಪಾಯದ ಮುನ್ಸೂಚನೆ ನೀಡಿದೆ. ಹೈವೋಲ್ಟೆಜ್ ಸಫ್ಲೈ ಮಾಡುವ ವಿದ್ಯುತ್ ಲೈನ್ ಆಗಿರುವುದರಿಂದ ಇಲ್ಲಿ ಕಿಡಿಗಳು ಆಗಾಗ ಬೀಳುತ್ತಾನೇ ಇರುತ್ತೆ. ಹಾಗಾಗಿ, ಇಲ್ಲಿ ಯಾವ ರೀತಿ ಕೃಷಿ ಮಾಡೋದು ಅಂತಾನೇ ತಿಳಿಯುತ್ತಿಲ್ಲ ಅಂತ ರೈತ ರವಿ ಶಾಕ್‍ಗೆ ಒಳಗಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ