ಮಂಡ್ಯ; ನಗರದ ಹೊಳಲು ರಸ್ತೆಯ ಕಂಪ್ಯೂಟರ್ ಸೆಂಟರ್ ಒಂದರಲ್ಲಿ ಐನೂರು-ಸಾವಿರ ಪಡೆದು ಪಾಸ್ ಪೋರ್ಟ್, ಆಧಾರ್, ಓಟರ್, ಮಾರ್ಕ್ಸ್ ಕಾರ್ಡ್ ಎಲ್ಲವನ್ನೂ ನಕಲಿ ಮಾಡಿಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮಂಡ್ಯ ತಹಸಿಲ್ದಾರ್ ಈ ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ನಡೆಸಿ, ಬೀಗ ಜಡಿದಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಸಿ.ಎಸ್.ಸಿ ಕೇಂದ್ರಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ನೋಂದಣಿ ಮಾಡಲಾಗುತ್ತದೆ. ಆದರೆ ಇಲ್ಲೊಂದು ಕೇಂದ್ರ ಹಣಕ್ಕಾಗಿ ನಕಲಿ ಪಾಸ್ಪೋರ್ಟ್, ಓಟರ್ ಐಡಿ, ಆಧಾರ್, ಮಾರ್ಕ್ಸ್ ಕಾರ್ಡ್ ಸೃಷ್ಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಸಲ್ಮಾ ಭಾನು ಸ್ಟಿಂಗ್ ಆಪರೇಷನ್ ಮಾಡಿದ್ದು, ನಕಲಿ ದಾಖಲೆ ಸೃಷ್ಟಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೌದು, ಮಂಡ್ಯ ನಗರದ ಹೊಳಲು ವೃತ್ತದಲ್ಲಿರುವ ಡಿ.ಕೆ.ಹೆಚ್ ಅಸೋಸಿಯೇಟ್ ಹೆಸರಿನ ಸಿ.ಎಸ್.ಸಿ ಸೇವಾ ಕೇಂದ್ರದಲ್ಲಿ ತೌಸಿಫ್ @ ದಡ್ಕನ್ ಹಾಗೂ ಪತ್ನಿ ಹೀನಾ ಕೌಸರ್ ಎಂಬುವರು ಕಳೆದ ಎರಡು ಮೂರು ವರ್ಷಗಳಿಂದ ಐನೂರು - ಸಾವಿರ ರೂಪಾಯಿ ಸಿಗುತ್ತೆ ಅಂತಾ ಪಾಕಿಸ್ತಾನ, ತಾಲಿಬಾನಿಗಳು ಸೇರಿದಂತೆ ಸಿಕ್ಕ ಸಿಕ್ಕವರಿಗೆ ಭಾರತೀಯ ಪೌರತ್ವವನ್ನೇ ಮಾರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇವರ ನಕಲಿ ದಂಧೆಯ ಕರಾಳ ಮುಖ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂಡ್ಯದಲ್ಲಿ 180 ಸಿ.ಎಸ್.ಸಿ ಕೇಂದ್ರಗಳಿಗೆ ಸರ್ವಿಸ್‌ಗಳನ್ನ ಕೊಡಲಾಗ್ತಿದೆ. ಆದ್ರೆ ಕಳೆದ ಒಂದೂವರೆ ತಿಂಗಳಿಂದ ಓಟರ್ ಐಡಿ, ಆಧಾರ್ ಕಾರ್ಡ್ ಕೊಡೋದನ್ನ ಸರ್ಕಾರ ಸ್ಟಾಪ್ ಮಾಡಲಾಗಿದೆ. ಆದರೂ ಕಳೆದ ಎರಡೂ ದಿನಗಳಿಂದ DKH ಅಸೋಸಿಯೇಟ್ಸ್ ನಕಲಿ ಐಡಿ ಕಾರ್ಡ್ ನೀಡುತ್ತಿದ್ದಾರೆ ಎಂಬ ದೂರು ಬಂದಿದ್ದು, ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ಅವರನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಿ ಲೈಸೆನ್ಸ್ ರದ್ದುಪಡಿಸಲಾ ಗುವುದು ಅಂತಾರೆ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ.
ಇದನ್ನೂ ಓದಿ: Kerala Corona| ಕೇರಳದಿಂದ ಬೆಂಗಳೂರಿಗೆ ಆಗಮಿಸುವವರಿಗೆ ವಿಶೇಷ ರೂಲ್ಸ್ ಜಾರಿ ಮಾಡಿದ ಪಾಲಿಕೆ!
ಸರ್ಕಾರಿ ಸೇವೆ ಎಲ್ಲರಿಗೂ ಸಿಗಲಿ ಅಂತಾ ಸರ್ಕಾರ ಇಂತಹ ಕೇಂದ್ರಗಳನ್ನ ತೆರೆದಿವೆ. ಆದರೆ, ಕೆಲವರು ಹಣದಾಸೆಗೆ ಈ ರೀತಿ ದಂಧೆ ಮಾಡ್ಕೊಂಡಿರೋದು ದೇಶದ ಸುರಕ್ಷತೆಯನ್ನ ಪ್ರಶ್ನಿಸುವಂತಿದೆ. ಈ ಹಿಂದೆ ಮಂಡ್ಯದ ವಿಳಾಸ ನೀಡಿ ಭೂಗತ ಪಾತಕಿಗಳಾದ ಚೋಟಾ ರಾಜನ್, ರವಿ ಪೂಜಾರಿ ಪಾಸ್ ಪೋರ್ಟ್ ಪಡೆದಿದ್ದ ಪ್ರಕರಣ ಇನ್ನು ಮಾಸಿಲ್ಲ. ಈ ನಡುವೆ ಈ ಪ್ರಕರಣ ಬೆಳಕಿಗೆ ಬಂದಿರೋದು ಮಂಡ್ಯ ಭೂಗತ ಪಾತಕಿಗಳ ಸ್ವರ್ಗವಾಗುತ್ತಿದೆಯೇ? ಎಂಬ ಅನುಮಾನ ಕಾಡುತ್ತಿದೆ.
ಅತ್ಯಂತ ಸೂಕ್ಷ್ಮ ವಿಚಾರವಾಗಿದ್ರಿಂದ ಮಂಡ್ಯ ಎಸ್ಪಿ ಕಚೇರಿ ಟಪಾಲು ಶಾಖೆಗೆ ಆ.25ರಂದು ಸಲ್ಮಾ ಭಾನು ದೂರು ನೀಡಿದ್ದಾರೆ. ಆದ್ರೆ ಈ ಬಗ್ಗೆ ಕ್ರಮವಹಿಸಬೇಕಾದ ಮಂಡ್ಯ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ದೂರು ಕೊಟ್ಟು 6 ದಿನ ಆದರೂ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ ಅಂತಾ ಪೊಲೀಸರು ನುಲುಚಿಕೊಳ್ತಿದ್ದಾರೆ. ಪೊಲೀಸರ ಈ ನಡೆಯನ್ನ ನೋಡಿದ್ರೆ ಪೊಲೀಸ್ ಇಲಾಖೆ ಸುತ್ತ ಅನುಮಾನ ಕಾಡುತ್ತಿದೆ.
ಇನ್ನು ಮಾಧ್ಯಮಗಳಲ್ಲಿ ನಕಲಿ ದಾಖಲೆ ಸೃಷ್ಟಿ ಬಗೆಗಿನ ವಿಡಿಯೋ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ನಡೆಸಿದ್ದಾರೆ. ಬಳಿಕ ಕಂಪ್ಯೂಟರ್ ಮತ್ತು ಆರ್ಡಿಸ್ಕ್ ಗಳನ್ನ ವಶಕ್ಕೆ ಪಡೆದು, ಕಂಪ್ಯೂಟರ್ ಸೆಂಟರ್ಗೆ ಬೀಗ ಜಡಿಯಲಾಗಿದೆ. ಅಲ್ಲದೆ ಆರೋಪಿತರನ್ನ ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಏನೇ ಆಗ್ಲೀ, ಸಂಬಂಧಪಟ್ಟವರು ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದರೆ ಕರುನಾಡು ಉಗ್ರರ ನೆಲೆ ಬೀಡಾಗೋದ್ರಲ್ಲಿ ಸಂಶಯವೇ ಇಲ್ಲ.
(ವರದಿ - ಸುನೀಲ್ ಗೌಡ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ