• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಜನರ ಮೇಲೆ ಕಳಕಳಿ, ಪ್ರೀತಿ ಇದ್ದರೆ ಕೊರೋನಾ ತಡೆಯಲು ನೀವು ಬಂದು ಕೆಲಸ ಮಾಡಿ; ಕಾಂಗ್ರೆಸ್ ನಾಯಕರಿಗೆ ಶ್ರೀರಾಮುಲು ಆಹ್ವಾನ

ಜನರ ಮೇಲೆ ಕಳಕಳಿ, ಪ್ರೀತಿ ಇದ್ದರೆ ಕೊರೋನಾ ತಡೆಯಲು ನೀವು ಬಂದು ಕೆಲಸ ಮಾಡಿ; ಕಾಂಗ್ರೆಸ್ ನಾಯಕರಿಗೆ ಶ್ರೀರಾಮುಲು ಆಹ್ವಾನ

ಸಚಿವ ಶ್ರೀರಾಮುಲು.

ಸಚಿವ ಶ್ರೀರಾಮುಲು.

ವಿರೋಧ ಪಕ್ಷದವರು ನೀವೇನು ಮಾಡುತ್ತಿದ್ದೀರಿ, ನೀವು ಕೈಜೋಡಿಸಿ ಸಮ್ಮನೆ ಹೇಳಿಕೆ ಕೊಟ್ಟು ತಪ್ಪಿಸಿಕೊಳ್ಳೋದಲ್ಲ. ಅಲ್ಲದೇ ಜನರ ಮೇಲೆ ಕಳಕಳಿ, ಪ್ರೀತಿ ಇದ್ದರೆ ನೀವು ಬಂದು ಕೆಲಸ ಮಾಡಿ, ನೀವೂ ಬಂದು ಕೆಲಸ ಮಾಡಿ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ಸಚಿವ ಶ್ರೀರಾಮುಲು ಕಿಡಿ ಕಾರಿದ್ದಾರೆ.

ಮುಂದೆ ಓದಿ ...
  • Share this:

ಚಿತ್ರದುರ್ಗ: ಕೊರೋನಾ ನಿಯಂತ್ರಣ ವಿಚಾರಕ್ಕೆ ವಿರೋಧ ಪಕ್ಷದವರು ಸ್ವಾರ್ಥಕ್ಕಾಗಿ ಸರ್ಕಾರದ ಮೇಲೆ ತಪ್ಪು ಹಾಕುವುದು ಶೋಭೆ ತರಲ್ಲ. ವಿಶ್ವವೇ ಒಂದಾಗಿರುವಾಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೆ ಕೆಲಸ ಮಾಡಿದರೆ ಜನರ ಪ್ರಾಣ ಉಳಿಸಬಹುದು. ಸಾವು ಎಲ್ಲರಿಗೂ ಸಾವೆ, ಅದಕ್ಕಾಗಿ ಎಲ್ಲರೂ ಪಶ್ಚಾತ್ತಾಪ ಪಡೋಣ. ಇನ್ನುಮುಂದೆ ಆ ರೀತಿ ಆಗದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು  ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.


ಚಿತ್ರದುರ್ಗದಲ್ಲಿ ಬೆಂಗಳೂರು ಬೆಡ್ ಬ್ಲಾಕಿಂಗ್ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ  ಶ್ರೀರಾಮುಲು, ಬಹಳಷ್ಟು ಜನರು ಸ್ವಾರ್ಥಿಗಳು ಇರಬಹುದು ಇಲ್ಲವೆಂದು ಹೇಳಲ್ಲ. ಕೆಲವೊಂದು ಸಾರಿ ಕೆಟ್ಟ ಆಸೆಯಿಂದ ವ್ಯಾಪಾರೀಕರಣ ಮಾಡುತ್ತಾರೆ. ವ್ಯಾಪಾರದ ಜೊತೆಗೆ ವೈಯಕ್ತಿಕ ಹಿತಾಸಕ್ತಿಗೆ ಲಾಭ ನೋಡಿಕೊಳ್ಳುತ್ತಾರೆ. ಜನರು ಸಾವಿನಲ್ಲೂ ಕೂಡ ಲಾಭ ಪಡೆದುಕೊಳ್ಳುವವರಿದ್ದಾರೆ. ಇದು ಅಲ್ಲೆಲ್ಲೊ ದೊಡ್ಡಮಟ್ಟದಲ್ಲಿ ನಡೆಯುತ್ತಿರಬೇಕು. ಜಿಲ್ಲೆಗಳಲ್ಲಿ ನಡೆಯುತ್ತಿಲ್ಲ. ಬೆಂಗಳೂರಲ್ಲಿ ಈ ರೀತಿಯ ಘಟನೆ ನಡೆದಿದ್ದರಿಂದ ತೇಜಸ್ವಿ ಸೂರ್ಯ ಹೇಳಿಕೆ ಕೊಟ್ಟಿದ್ದಾರೆ. ನಾನು ಇಡೀ ರಾಜ್ಯವನ್ನು ಸುತ್ತುತ್ತಿದ್ದೇನೆ. ಆ ರೀತಿ ಕಂಡು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.


ಇದನ್ನು ಓದಿ: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಕೊರೋನಾಘಾತ! ನಿರ್ದೇಶಕ, ನಿರ್ಮಾಪಕ ಸ್ವಾತಿ ಅಂಬರೀಶ್ ಬಲಿ


ಇನ್ನೂ ಸರ್ಕಾರ ICU ನಲ್ಲಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಡಿಕೆ ಶಿವಕುಮಾರ್ ಅಧಿಕಾರ ಕಳೆದುಕೊಂಡಿದ್ದಾರೆ. ನಮ್ಮ ಸಿಎಂ ಬಿಎಸ್​ವೈ ವಿರೋಧ ಪಕ್ಷದವರನ್ನು ಕರೆದು ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. ಸಮಸ್ಯೆ ಪರಿಹಾರ, ಲಾಕ್ ಡೌನ್ ಕುರಿತು ಸಲಹೆ ಕೇಳುತ್ತಿದ್ದೇವೆ. ಅವರು ನಮ್ಮ ಹತ್ತಿರ ಬಂದಾಗ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ, ಬೆಂಬಲ ನೀಡುತ್ತೇವೆ ಅನ್ನುತ್ತಾರೆ. ಹೊರಗಡೆ, ರಾಜಕೀಯ ಲಾಭಕ್ಕಾಗಿ ಸರ್ಕಾರ ICU ನಲ್ಲಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇವರ ಸರ್ಕಾರ ಫೇಲ್ಯೂರ್ ಆಗಿದೆ. ಕೆಲಸ ನಿಭಾಯಿಸಿಲ್ಲ ಎಂಬ ಹೇಳಿಕೆಗಳು ಎಲ್ಲವೂ ರಾಜಕೀಯ ಲಾಭ ಪಡೆದುಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕೊರೋನಾ ವಿಚಾರಕ್ಕೆ ಇಡೀ ದೇಶ ತಲ್ಲಣಿಸುತ್ತಿದೆ. ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಇಡೀ ವಿಶ್ವವೇ ಕೋವಿಡ್ ನಿಯಂತ್ರಿಸೋಕೆ ಜಗಳ ಮಾಡುತ್ತಿದೆ. ವಿರೋಧ ಪಕ್ಷದವರು ಸ್ವಾರ್ಥಕ್ಕಾಗಿ ಸರ್ಕಾರದ ಮೇಲೆ ತಪ್ಪು ಹಾಕುವುದು ಶೋಭೆ ತರಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ವಿಶ್ವವೇ ಒಂದಾಗಿರುವಾಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೆ ಕೆಲಸ ಮಾಡಿದರೆ ಜನರ ಪ್ರಾಣ ಉಳಿಸಬಹುದು. ಅದನ್ನ ಬಿಟ್ಟು ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುವಂತೆ ಚಾಮರಾಜನಗರ ಪ್ರಕರಣವನ್ನು ಸರ್ಕಾರದ ಮೇಲೆ ಹಾಕುವುದು, ಮುಖ್ಯಮಂತ್ರಿ, ಉಸ್ತುವಾರಿ ಸಚಿವರ ಮೇಲೆ ಹಾಕಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದು ಸರಿಯಲ್ಲ. ಇನ್ನು ಮುಂದೆ ಆ ರೀತಿ ಆಗದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.


ವಿರೋಧ ಪಕ್ಷದವರು ನೀವೇನು ಮಾಡುತ್ತಿದ್ದೀರಿ, ನೀವು ಕೈಜೋಡಿಸಿ ಸಮ್ಮನೆ ಹೇಳಿಕೆ ಕೊಟ್ಟು ತಪ್ಪಿಸಿಕೊಳ್ಳೋದಲ್ಲ. ಅಲ್ಲದೇ ಜನರ ಮೇಲೆ ಕಳಕಳಿ, ಪ್ರೀತಿ ಇದ್ದರೆ ನೀವು ಬಂದು ಕೆಲಸ ಮಾಡಿ, ನೀವೂ ಬಂದು ಕೆಲಸ ಮಾಡಿ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ಸಚಿವ ಶ್ರೀರಾಮುಲು ಕಿಡಿ ಕಾರಿದ್ದು, ಕೋವಿಡ್ ನಿಯಂತ್ರಿಸೋಕೆ ಕೈಜೋಡಿಸಿ ಕೆಲಸ ಮಾಡಲು ಆಹ್ವಾನ ನೀಡಿದ್ದಾರೆ. ಇನ್ನೂ ಲಾಕ್ ಡೌನ್ ವಿಚಾರಕ್ಕೆ ಸಿಎಂ ನಿನ್ನೆ ಚರ್ಚಿಸಿದ್ದಾರೆ. ಕೇಂದ್ರ ಸರ್ಕಾರ ಪ್ರಧಾನಿ ಏನು ಮಾಡುತ್ತಾರೋ ನೋಡಬೇಕು ಎಂದು ಹೇಳಿದರು.

First published: