HOME » NEWS » District » IF PEOPLE ARE NOT AWARE OF CORONA THERE WILL BE A MINI LOCKDOWN IN MYSORE DISTRICT ADMINISTRATION WARNING PMTV MAK

ಜನರು ಕೊರೋನಾ ಬಗ್ಗೆ ಜಾಗೃತರಾಗದಿದ್ದರೆ ಮೈಸೂರಿನಲ್ಲಿ ಮಿನಿ ಲಾಕ್‌ಡೌನ್ ಮಾಡಬೇಕಾಗುತ್ತದೆ : ಜಿಲ್ಲಾಡಳಿತ ಎಚ್ಚರಿಕೆ!

ನಂಜನಗೂಡು ಜಾತ್ರೆಗೆ 500 ಮಂದಿ ಭಾಗಿಯಾಗಲು ಅನುಮತಿ ನೀಡಿದ್ದೇವೆ. ಜಾತ್ರೆಯನ್ನ ಮುಂದಿನ ವರ್ಷ ಮಾಡಬಹುದು. ಆದ್ರೆ, ಜೀವನ ಉಳಿಸಿಕೊಳ್ಳುದು ಮುಖ್ಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

news18-kannada
Updated:March 22, 2021, 2:48 PM IST
ಜನರು ಕೊರೋನಾ ಬಗ್ಗೆ ಜಾಗೃತರಾಗದಿದ್ದರೆ ಮೈಸೂರಿನಲ್ಲಿ ಮಿನಿ ಲಾಕ್‌ಡೌನ್ ಮಾಡಬೇಕಾಗುತ್ತದೆ : ಜಿಲ್ಲಾಡಳಿತ ಎಚ್ಚರಿಕೆ!
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ.
  • Share this:
ಮೈಸೂರು: ಕೊರೋನಾ ನಿಯಮಗಳನ್ನು ಜನ ಸರಿಯಾಗಿ ಪಾಲಿಸುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಮಿನಿ ಲಾಕ್‌ಡೌನ್ ಮಾಡಬೇಕಾಗುತ್ತದೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಜಿಲ್ಲೆಯ ಜನರಿಗೆ ಎಚ್ಚರಿಕೆ ನೀಡಿದ್ದಾರೆ. "ರಾಜ್ಯಕ್ಕೆ ಕೊರೋನಾ ಎರಡನೆ ಅಲೆ ಬಂದಿದೆ ಅಂತ ಆರೋಗ್ಯ ಸಚಿವರೇ ಘೋಷಣೆ ಮಾಡಿದ್ದಾರೆ. ಸರ್ಕಾರ ಯಾವ ಗೈಡ್‌ಲೈನ್ ಹೊರಡಿಸಿದೆ ಅದರ ಪ್ರಕರಾವೇ ನಾವು ಕ್ರಮ ಕೈಗೊಂಡಿದ್ದೇವೆ. 500 ಜನರಿಗಿಂತ ಹೆಚ್ಚಾಗಿ ಎಲ್ಲಿಯೂ ಜನ ಸೇರಬಾರದು ಎಂದು ಹೇಳಿದ್ದಾರೆ. ಇದೆ ಕಾರಣಕ್ಕೆ ನಾವು ಎಲ್ಲ ಜಾತ್ರೆ, ಉತ್ಸವಗಳನ್ನ ರದ್ದು ಮಾಡಿದ್ದೇವೆ. ಜನರು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಇಲ್ಲವಾದಲ್ಲಿ ಮಾರ್ಗಸೂಚಿಗಳನ್ನ ಇನ್ನಷ್ಟು ಕಠಿಣಗಳಿಸಗೊಳಿಸಬೇಕಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ನಂಜನಗೂಡು ಜಾತ್ರೆಗೆ 500 ಮಂದಿ ಭಾಗಿಯಾಗಲು ಅನುಮತಿ ನೀಡಿದ್ದೇವೆ. ಲಕ್ಷಾಂತರ ಜನ ಬಂದು ಜಾತ್ರೆ ಮಾಡೋಕೆ ಆಗೋಲ್ಲ. ಅದರ ನಂತರದ ಪರಿಸ್ಥಿತಿ ನಿಭಾಯಿಸಲು ನಮಗು ಕಷ್ಟ ಆಗುತ್ತೆ. ಜಾತ್ರೆಯನ್ನ ಮುಂದಿನ ವರ್ಷ ಮಾಡಬಹುದು. ಆದ್ರೆ, ಜೀವನ ಉಳಿಸಿಕೊಳ್ಳುದು ಮುಖ್ಯ. ಅದಕ್ಕಾಗಿ ನಂಜನಗೂಡು ಜಾತ್ರೆಯಲ್ಲಿ ಜನ ಪಾಲ್ಗೊಳ್ಳುವುದನ್ನು ನಿಷೇಧಿಸಲಾಗದೆ ಎಂದು ಸ್ಪಷ್ಟನೆ ನೀಡಿದರು.

ಇನ್ನು  ಮೈಸೂರು ಅರಮನೆಯಲ್ಲಿ ಮತ್ತೆ RTPCR ಹಾಗೂ ಆಂಟಿಜೆನ್ ಟೆಸ್ಟ್ ಆರಂಭಿಸುತ್ತೇವೆ. ಮೈಸೂರು ಕೇರಳ ಗಡಿಯಾದ ಬಾವಲಿ ಗಡಿಯಲ್ಲಿ ಪ್ರತಿಯೋಬ್ಬರಿಗು RTPCR ಟೆಸ್ಟ್ ಕಡ್ಡಾಯವಾಗಿದೆ. ತರಕಾರಿ ವಾಹನ ಅಲ್ಲ ಯಾವ ವಾಹನಕ್ಕು ಟೆಸ್ಟ್ ಇಲ್ಲದೆ ಪ್ರವೇಶವಿಲ್ಲ. ಇಷ್ಟೆ ಅಲ್ಲದೆ ಜಿಲ್ಲಾಡಳಿತ ಮತ್ತೆ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡುತ್ತಿದ್ದೇವೆ. ಎಲ್ಲಿಂದ ಹರಡುತ್ತಿದ್ದೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ಅಗತ್ಯಬಿದ್ದರೆ ಎಲ್ಲಿ ಸೋಂಕು ಹೆಚ್ಚಿದೆ ಅಲ್ಲಿ ಮಿನಿ ಲಾಕ್‌ಡೌನ್ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹೇಳಿದರು.

ಅತ್ತ ಡಿಸಿ ಸೂಚನೆ ನೀಡುತ್ತಿದ್ದಂತೇಯೆ ಮೈಸೂರು ಅರಮನೆಯಲ್ಲಿ ಪ್ರವಾಸಿಗರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಮಾಡಲು ಮತ್ತೆ ಆರಂಭಿಸಿದ ಜಿಲ್ಲಾಡಳಿತ, ಹೊರರಾಜ್ಯದ ಎಲ್ಲ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯ ಮಾಡಿದ್ದು, ಅರಮನೆಯ ಆರವಣದ ಸ್ಥಳದಲ್ಲೆ ಆಂಟಿಜೆನ್ ಹಾಗೂ RTPCR ಟೆಸ್ಟ್ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕು ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಕೋವಿಡ್ ನಿಯಮಗಳ ಕಡ್ಡಾಯ ಪಾಲನೆ; ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅನುದಾನ: ಸಚಿವ ಸಂಪುಟದಿಂದ ಕೈಗೊಂಡ ನಿರ್ಣಯಗಳು ಇವು

ಪ್ರಮುಖವಾಗಿ ಕೇರಳ ಪ್ರವಾಸಿಗರ ಕೊರೋನಾ ಟೆಸ್ಟ್ ಕಡ್ಡಾಯ ಮಾಡಿದ್ದು, ಅಲ್ಲಿಂದಲೇ ಸೋಂಕು ಹರಡುತ್ತಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಹಿಂದೆಯೂ ಮೈಸೂರು ಅರಮನೆಯಲ್ಲಿ ಕೊರೋನಾ ಟೆಸ್ಟ್ ಮಾಡಲಾಗುತ್ತಿತ್ತು. ಕೊರೋನಾ ಪ್ರಕರಣಗಳು ಇಳಿಕೆಯಾದ ಕಾರ್ಯಚರಣೆ ನಿಲ್ಲಿಸಿದ್ದ ಜಿಲ್ಲಾಡಳಿತ, ಇದೀಗ ಇಂದಿನಿಂದ ಮತ್ತೆ ಅರಮನೆಯಲ್ಲಿ ಕೊರೋನಾ ಟೆಸ್ಟ್ ಮಾಡುತ್ತಿದ್ದಾರೆ. ಇದಲ್ಲದೆ ಮೃಗಾಲಯ ಸೇರಿದಂತೆ ಚಾಮುಂಡಿಬೆಟ್ಟ,ಜಗನ್ಮೋಹನ ಅರಮನೆಯಲ್ಲು ಪ್ರವಾಸಿಗರ ಮೇಲೆ ನಿಗಾ ಇಟ್ಟಿದ್ದು ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಇಲ್ಲದೆ ಯಾವುದೇ ಪ್ರವಾಸಿತಾಣಗಳಿಗೆ ಪ್ರವೇಶವಿಲ್ಲ ಎಂದು ಸೂಚನೆ ನೀಡಲಾಗದೆ.
ಇದರ ಜೊತೆ ಕೊರೋನಾ ಎರಡನೆ ಅಲೆ ಹಿನ್ನಲೆಯಲ್ಲಿಮ ಮೈಸೂರು ಕೇರಳ ಗಡಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು,  ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಆರೋಗ್ಯ ಇಲಾಖೆ, ಪ್ರತಿವಾಹನಗಳನ್ನು ತಪಾಸಣೆ ನಂತರ ಕರ್ನಾಟಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಕೋವಿಡ್ ಟೆಸ್ಟ್ ವರದಿ ಇದ್ದರಷ್ಟೆ ರಾಜ್ಯಕ್ಕೆ ಎಂಟ್ರಿ ಎಂದು ಆದೇಶ ಮಾಡಿದ್ದು, ಪ್ರತಿದಿನ ಓಡಾಡುವ ಗೂಡ್ಸ್ ವಾಹನಕ್ಕೆ ಈಗಾಗಲೇ ಕಳೆದ ವಾರದವರೆಗೂ ಆರ್.ಟಿ.ಪಿ.ಸಿ. ತಪಾಸಣೆ ಸ್ಥಳದಲ್ಲಿ ಮಾಡಲಾಗಿತ್ತು. ಇದೀಗ ಖಾಸಗಿ ವಾಹನಗಳಲ್ಲಿ ಬರುವ ಪ್ರವಾಸಿಗರಿಗೆ ಕೋವಿಡ್ ವರದಿ‌ ಕಡ್ಡಾಯ ಮಾಡಲಾಗಿದೆ. ತರಕಾರಿ ವಾಹನಗಳಿಗು ಯಾವುದೇ ವಿನಾಯಿತಿ ಇಲ್ಲ ಅಂತ ಡಿಸಿ ರೋಹಿಣಿ ಸಿಂಧೂರಿ ಖಡಕ್ ಆದೇಶ ನೀಡಿದ್ದಾರೆ.
Published by: MAshok Kumar
First published: March 22, 2021, 2:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories