ನಾನು ಸಿಎಂ ಆಗಿದ್ದಿದ್ದರೆ 1 ಕೋಟಿ ಕುಟುಂಬಕ್ಕೆ ತಲಾ 10 ಸಾವಿರ ರೂ. ನೀಡುತ್ತಿದ್ದೆ; ಸಿದ್ದರಾಮಯ್ಯ

ಸಾಲ ತೆಗೆದುಕೊಂಡು ಒಂದು ಕೋಟಿ ಜನರಿಗೆ ಸಾಲ ಕೊಡುತ್ತಿದ್ದೆ. ಸಿಎಂ ಯಡಿಯೂರಪ್ಪ ಅವರು 53 ಸಾವಿರ ಕೋಟಿ ಸಾಲ ಪಡಿತೀನಿ ಅಂತಾರೆ. ಅದರಲ್ಲಿ 10 ಸಾವಿರವನ್ನು 1 ಕೋಟಿ‌ ಬಡ ಕುಟುಂಬಕ್ಕೆ ನೀಡಲಿ ಎಂದು ಆಗ್ರಹಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ.

ವಿಪಕ್ಷ ನಾಯಕ ಸಿದ್ದರಾಮಯ್ಯ.

  • Share this:
    ಮೈಸೂರು: ಇನ್ನೂ ಮೂರು ತಿಂಗಳು ಶಾಲೆಗಳನ್ನು ತೆರೆಯಬಾರದು. ರಾಜ್ಯ ಸರ್ಕಾರಕ್ಕೆ ಇದು ನನ್ನ ಸಲಹೆ. ಸಾಧ್ಯವಾದರೆ ಎರಡು ಶಿಫ್ಟ್ ನಲ್ಲಿ ಕ್ಲಾಸ್ ಮಾಡಬೇಕು. ಮಕ್ಕಳಿಗೆ ಏನಾದರೂ ಕೊರೋನಾ ತಗುಲಿದರೆ‌ ಇಡೀ ಕುಟುಂಬಕ್ಕೆ ಹರಡುತ್ತೆ. ಸರ್ಕಾರ ಪೂರ್ವ ಸಿದ್ದತೆ ಮಾಡಿಕೊಂಡು ಶಾಲೆ ತೆರೆಯಬೇಕು. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಅವರೊಂದಿಗೆ ಮಾತನಾಡುತ್ತೇನೆ. ಎಲ್ಲ ರೀತಿಯ ಶಾಲೆಗಳಿಗೂ ಇದು ಅನ್ವಯ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಕೊರೋನಾಗೆ ಯಾವುದೇ ಔಷಧ ಇಲ್ಲ. ಇದಕ್ಕೆ ಮಾಸ್ಕ್ ಹಾಕಿಕೊಳ್ಳುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದೇ ಮದ್ದು. ಇದಕ್ಕೆ ಔಷಧ ಕಂಡು ಹಿಡಿಯುವವರೆಗೂ ಇದೆ ಮದ್ದು. ಫ್ರಾನ್ಸ್‌ನಲ್ಲಿ ಇದೇ ರೀತಿ ಶಾಲೆ ತೆರೆದು ಮಕ್ಕಳಿಗೆ ಕೊರೋನಾ ಬಂದಿದೆ. ಇದನ್ನು‌ ನಾನು ಕೂಡ ನ್ಯೂಸ್​‌ನಲ್ಲಿ ನೋಡಿದ್ದೇನೆ. ಹಾಗಾಗಿ ಸರ್ಕಾರ ಶಾಲೆ ತೆರೆಯಲು ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು. ಆದರೆ ಶಾಲೆಯನ್ನು ಈಗ ಆರಂಭಿಸಬಾರದು ಎಂದು ಹೇಳಿದರು.

    ನಾನು ಸಿಎಂ ಆಗಿದಿದ್ದರೆ ರಾಜ್ಯದ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ನೀಡುತ್ತಿದೆ. ಇದನ್ನು ಯಡಿಯೂರಪ್ಪನವರಿಗೆ ಹೇಳ್ತಾ ಇದ್ದೀನಿ. ಸಾಲ ತೆಗೆದುಕೊಂಡು ಒಂದು ಕೋಟಿ ಜನರಿಗೆ ಸಾಲ ಕೊಡುತ್ತಿದ್ದೆ. ಸಿಎಂ ಯಡಿಯೂರಪ್ಪ ಅವರು 53 ಸಾವಿರ ಕೋಟಿ ಸಾಲ ಪಡಿತೀನಿ ಅಂತಾರೆ. ಅದರಲ್ಲಿ 10 ಸಾವಿರವನ್ನು 1 ಕೋಟಿ‌ ಬಡ ಕುಟುಂಬಕ್ಕೆ ನೀಡಲಿ ಎಂದು ಆಗ್ರಹಿಸಿದರು.

    ಇದನ್ನು ಓದಿ: ಎಲ್ಲರ ಅಭಿಪ್ರಾಯ ಪಡೆದೆ ಮರಳಿ ಬರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು; ಡಿಕೆಶಿ

    ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಖರ್ಗೆ ನೇಮಕ ವಿಚಾರಯಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನನ್ನ ಶಿಫಾರಸ್ಸು ಖರ್ಗೆ ಅಂತ ಈಗಾಗಲೇ ಹೇಳಿದ್ದೀನಿ. ವೇಣುಗೋಪಾಲ್ ಅವರಿಗೆ ಈ ಬಗ್ಗೆ ಹೇಳಿದ್ದೇನೆ. ಕೊಪ್ಪಳದಲ್ಲಿ ನಾನು ಆಸಕ್ತಿ ಇದ್ದರೆ ಖರ್ಗೆ ಹೆಸರು ಶಿಫಾರಸ್ಸು ಮಾಡ್ತಿವಿ ಎಂದಿದ್ದೆ. ಅದಕ್ಕೆ ಖರ್ಗೆ ಅವರು ನನಗೆ ಆಸಕ್ತಿ ಇದೆ ಎಂದಿದ್ದಾರೆ. ಏನು ಹೇಳಬೇಕೋ‌ ಎಲ್ಲವನ್ನೂ ಹೈಕಮಾಂಡ್‌ಗೆ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
    First published: