ಬೆಳಗಾವಿ: ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣ ರಾಜ್ಯದಲ್ಲೆ ಸಂಚಲನ ಉಂಟು ಮಾಡಿತ್ತು. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಾಗದೆ ಇದ್ದರು ಸಹ ವಿಶೇಷ ತನಿಖಾ ತಡ ರಚನೆ ಮಾಡಿ ಪ್ರಕರಣದ ತನಿಖೆಗೆ ಮುಂದಾಗಿದೆ. ಸದ್ಯದ ಮಟ್ಟಿಗೆ ಇದನ್ನು ಸ್ವಾಗತ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಸಹೋದರ ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಈಗಾಗಲೇ ತನಿಖೆ ಆರಂಭವಾಗಿದೆ. ಕೆಲವರ ವಿಚಾರಣೆ ಕೂಡ ನಡೆಯುತ್ತಿದೆ. ಪ್ರಕರಣದಲ್ಲಿ ಯಾವ ಹಂತಕ್ಕೆ ತನಿಖೆ ಮಾಡ್ತಾರೆ, ಏನ್ ಮಾಡ್ತಾರೆ ಎಂದು ಕಾದು ನೋಡಬೇಕು. ನಾವು ಸದ್ಯಕ್ಕೆ ಎಸ್‌ಐಟಿ ತನಿಖೆಗೆ ಕೊಟ್ಟಿದ್ದನ್ನು ಸ್ವಾಗತ ಮಾಡುತ್ತೇವೆ. ಹೇಗೆ ತನಿಖೆ ಮಾಡ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ ವಿರುದ್ಧ ರಾಜಕೀಯ ಷಡ್ಯಂತ್ರ ಆರೋಪ ವಿಚಾರವಾಗಿ ಮಾತನಾಡಿದ ಅವರು ತನಿಖೆ ಆದ್ಮೇಲೆ ಎಲ್ಲಾ ಗೊತ್ತಾಗುತ್ತೆ. ಈಗ ಊಹಾಪೋಹ ಅಷ್ಟೇ ಇದೆ. ತನಿಖೆ ಆಗುವವರೆಗೂ ಕಾಯಬೇಕು ಒಮ್ಮೆ ತನಿಖೆ ಮುಗಿದರೆ ಊಹಾಪೋಹಗಳಿಗೆ ತೆರೆ ಬೀಳಲಿದೆ ಎಂದಿದ್ದಾರೆ.
ಬೆಂಬಲಿಗರೆ ನಮ್ಮ ಶಕ್ತಿ
ಸಿಡಿ ಪ್ರಕರಣದಿಂದ ಜಾರಕಿಹೊಳಿ ಕುಟುಂಬಕ್ಕೆ ಮುಜುಗರ ಆಗಿದೆ ಎಂಬ ಚರ್ಚೆಯ ವಿಚಾರವಾಗಿ ಮಾತನಾಡಿದ ಸತೀಶ್ ಅವರು ನಮ್ಮ ಬೆಂಬಲಿಗರು ನಮ್ಮ ಶಕ್ತಿ. ಇಂತಹ ಸಿಡಿ ಪ್ರಕರಣದಿಂದ ನಮ್ಮ ಕುಟುಂಬಕ್ಕೆ ಏನೂ ಪರಿಣಾಮ ಆಗಲ್ಲ. ಬೆಂಬಲಿಗರು ನಮ್ಮ ಜೊತೆ ಇದ್ದಾರೆ ಎಂದಿದ್ದಾರೆ. ಇನ್ನುರಮೇಶ್ ಜಾರಕಿಹೊಳಿ ಜೊತೆ ನಾನು ಏನೂ ಮಾತನಾಡಿಲ್ಲ. ಪ್ರಕರಣದ ಹಿಂದೆ 2 4 3 ಇದ್ದಾರೆಂಬ ಬಾಲಚಂದ್ರ ಜಾರಕಿಹೊಳಿ ಹೇಳುತ್ತಿದ್ದಾರೆ. ಬಾಲಚಂದ್ರ ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ಮಾಡಿದಾಗ ಅದನ್ನು ಹೇಳಿದ್ದಾರೆ. ಇನ್ನೂ ಎಸ್ಐಟಿಯವರು ಬೆನ್ನು ಹತ್ತಿ 2, 4, 3 ಯಾರೆಂದು ಕಂಡು ಹಿಡಿಯಬೇಕು. ಮಹಾನಾಯಕ ಯಾರಂತ ಗೊತ್ತಿಲ್ಲ, ತನಿಖೆ ಆದ ಮೇಲೆ ಇನ್ನೊಂದು ತಿಂಗಳಲ್ಲಿ ಬಹಿರಂಗ ಆಗುತ್ತೆ ಎಂದು ಹೇಳಿದರು.
ಓರಾಯನ್ ಮಾಲ್, ಯಶವಂತಪುರ ಅಪಾರ್ಟ್‌ಮೆಂಟ್‌ನಲ್ಲಿ ಷಡ್ಯಂತ್ರ ಎಂಬ ರಮೇಶ್ ಹೇಳಿಕೆಗೆ ಉತ್ತರಿಸಿದ ಸತೀಶ್ ಬಹಳ ಜನ ರಾಜಕಾರಣಿಗಳಿದ್ದಾರೆ. ಯಾರನ್ನು ಅಂತಾ ಹಿಡಿಯುವರು. ಇಂತಹವರೇ ಅಂತಾ ತೋರಿಸೋಕೆ ಹೋಗಿ ಮಿಸ್‌ಫೈರ್ ಆದರೆ ಏನ್ ಮಾಡೋದು ಎಂದಿದ್ದಾರೆ.
ಇದನ್ನು ಓದಿ: ಶಿವರಾತ್ರಿ ಅಮಾವಾಸ್ಯೆ ದಿನ ನಡೆಯಿತು ಗೋವಾ-ಕಾರವಾರ ಗಡಿ ಗ್ರಾಮ ಉತ್ಸವ; ಸಾವಿರಾರು ಜನ ಭಾಗಿ
ಎಸ್‌ಐಟಿ ತನಿಖೆ ತಿಪ್ಪೇ ಸಾರಿಸುವ ಕೆಲಸ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಹೆಚ್.ಡಿ. ಕುಮಾರಸ್ವಾಮಿ ಹೇಳೋದರಲ್ಲಿ ನಿಜಾಂಶ ಇದೆ. ಗೃಹ ಸಚಿವರು ನೋಡಿ ಎಫ್ಐಆರ್ ಮಾಡ್ತೀವಿ ಅಂದಿದ್ದಾರೆ. ಎಸ್‌ಐಟಿ ಯವರು ವರದಿ ಕೊಡ್ತಾರೆ ಅಷ್ಟೇ. FIR ಆದ್ಮೇಲೆನೆ ಶಿಕ್ಷೆಯಾಗೋದು. 70 ವರ್ಷಗಳಲ್ಲಿ ಸಾಕಷ್ಟು ಇಂತಹ ವರದಿಗಳು ಆಗಿವೆ. ಶಿಕ್ಷೆ ಆಗಬೇಕಾದರೆ ಎಫ್‌ಐಆರ್ ಆಗಬೇಕು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ