Law And Order: ಸಿದ್ದರಾಮಯ್ಯ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು ಅಂತ ಗೊತ್ತಿದೆ; ಸಚಿವ ಅಂಗಾರ ಟೀಕೆ

ಕಾಂಗ್ರೆಸ್ ನವರು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎನ್ನೋ ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಸಚಿವ ಅಂಗಾರ ಪ್ರತಿಕ್ರಿಯಿಸಲಿಲ್ಲ. ಆ ವಿಷಯ ನಾನು ವಿಚಾರಿಸ್ತೇನೆ ಎಂದು ಸುಮ್ಮನಾದರು.

ಸಚಿವ ಎಸ್. ಅಂಗಾರ

ಸಚಿವ ಎಸ್. ಅಂಗಾರ

  • Share this:
ಕೊಡಗು: (Kodagu) ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ (Mysuru Gang Rape) ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಅಂಗಾರ (Minister S Angara) ಟೀಕಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಅರೆಭಾಷೆ ಅಕಾಡೆಮಿಯ ದಶ ವರ್ಷ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾತನಾಡಿದರು. ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಂಗಾರ, ಅದೆಲ್ಲಾ ರಾಜಕೀಯಕ್ಕಾಗಿ ಹೇಳೋದೆಲ್ಲಾ ಇದ್ದೇ ಇದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅವರು ಏನು ಮಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಅವರ ಸರ್ಕಾರದ ಸಂದರ್ಭ ರಾಜ್ಯದಲ್ಲಿ ಏನು ನಡೆದಿತ್ತು ಎನ್ನೋದು ಗೊತ್ತಿದೆ. ಅದನ್ನು ಸ್ವಲ್ಪ ಅವರು ಯೋಚನೆ ಮಾಡಲಿ. ಈಗ ನಮ್ಮ ಸರ್ಕಾರವಿದ್ದು, ಕಾನೂನು ಸುವ್ಯವಸ್ಥೆಗೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಇನ್ನು ಕಾಂಗ್ರೆಸ್ ನವರು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎನ್ನೋ ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಸಚಿವ ಅಂಗಾರ ಪ್ರತಿಕ್ರಿಯಿಸಲಿಲ್ಲ. ಆ ವಿಷಯ ನಾನು ವಿಚಾರಿಸ್ತೇನೆ ಎಂದು ಸುಮ್ಮನಾದರು.

ಒಲಿಂಪಿಕ್ಸ್ ನಲ್ಲಿ ಆಡಿದ ಭಾರತದ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿದ್ದ ಕೊಡಗಿನ ಅಂಕಿತಾ ಅವರು ಮಾತನಾಡಿ, ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಅತ್ಯಂತ ಹೇಯ ಕೃತ್ಯ. ಇಂತಹ ಘಟನೆಗಳು ಇನ್ನು ಮುಂದೆ ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅವರು, ಈ ಕೃತ್ಯದಿಂದ ನಾನು ಕೂಡ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೃತ್ಯದ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ನು ಮುಂದೆ ಯಾರಾದರೂ ಇಂತ ಕೃತ್ಯಕ್ಕೆ ಮುಂದಾದರೆ ಈಗ ಅಪರಾಧಿಗಳಿಗೆ ಕೊಡುವ ಶಿಕ್ಷೆ ಅವರಿಗೆ ನೆನಪಾಗಬೇಕು. ಅಂತಹ ಶಿಕ್ಷೆಯನ್ನು ಅಪರಾಧಿಗಳಿಗೆ ಕೊಡಬೇಕು. ನನ್ನಂತೆ ಸಾಧನೆ ಮಾಡುವ ಎಷ್ಟೋ ಹೆಣ್ಣು ಮಕ್ಕಳು ರಾಜ್ಯದಲ್ಲಿ ಇದ್ದಾರೆ. ಅವರಿಗೆ ಇಂದಿನ ವ್ಯವಸ್ಥೆ ಪೂರಕವಾಗಬೇಕು. ಪುರುಷರು ಹೆಣ್ಣು ಮಕ್ಕಳನ್ನು ತಮ್ಮ ತಂಗಿ, ತಾಯಂದಿರಂತೆ ಕಾಣಬೇಕಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಇನ್ನು ಮಡಿಕೇರಿಯ ಗೌಡ ಸಮಾಜದಲ್ಲಿ ನಡೆದ ಅರೆಭಾಷೆ ಅಕಾಡೆಮಿಯ ದಶವರ್ಷ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಬಂದರು ಮತ್ತು ಮೀನುಗಾರಿಕಾ ಸಚಿವ ಅಂಗಾರ ಮಾತನಾಡಿ, ಕನ್ನಡ, ಇಂಗ್ಲೀಷ್ ಹಿಂದಿ ಭಾಷೆಗಳಿದ್ದು, ಅವುಗಳ ನಡುವೆ ತಮ್ಮದೇ ಆದ ಗ್ರಾಮ್ಯ ಭಾಷೆಗಳಿವೆ. ಅವುಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಇತರೆ ಭಾಷೆಗಳಂತೆ ಅರೆಭಾಷೆ ಕೂಡ ನಮ್ಮ ಪ್ರಮುಖವಾದ ಮನಸ್ಸಿನ ಭಾಷೆ. ಅದನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರೆಭಾಷೆ ಮಾತನಾಡುವ ಅಪಾರ ಜನಸಂಖ್ಯೆ ಇದೆ. ತುಳು ಭಾಷೆಗೆ ಈಗ ಲಿಪಿಯೂ ಇದ್ದು, ನಾನು ಕೂಡ ತುಳು ಮಾತನಾಡುತ್ತೇನೆ ಆದರೂ ಬರೆಯಲು ಬರುವುದಿಲ್ಲ. ಹೀಗಾಗಿ ಬರೆಯುವುದನ್ನು ಎಲ್ಲರಿಗೂ ಕಲಿಸುವ ಕೆಲಸ ಆಗಬೇಕಾಗಿದೆ ಎಂದರು.

ಇದನ್ನು ಓದಿ: Rainfall: ಉತ್ತರಾಖಂಡದಲ್ಲಿ ಭಾರೀ ಮಳೆ; ನದಿಯಲ್ಲಿ ರಸ್ತೆ ಕೊಚ್ಚಿಕೊಂಡ ಹೋದ ವಿಡಿಯೋ ವೈರಲ್!

ಗ್ರಾಮ್ಯ ಭಾಷೆಗಳನ್ನು ಉಳಿಸದಿದ್ದರೆ, ನಮ್ಮ ಕಲೆ ಆಚಾರ ವಿಚಾರಗಳು ಮಾಯವಾಗಿ, ಕೊನೆಗೆ ನಮ್ಮತನವನ್ನು ನಾವು ಉಳಿಸಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: