ಮಾಟ ಮಂತ್ರ ದುಷ್ಟ ಶಕ್ತಿಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಂಡಿದ್ದೇನೆ; ಹೆಚ್.ಡಿ. ರೇವಣ್ಣ

ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಬೆಂಬಲಿತ  ಅಭ್ಯರ್ಥಿಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಕಾರ್ಯದರ್ಶಿಗಳು ಇಂತಿಷ್ಟು ಹಣ ಕೊಡಬೇಕೆಂದು ಮೇಲ್ಮಟ್ಟದ ಬಿಜೆಪಿ ನಾಯಕರುಗಳು ಆದೇಶ ಹೊರಡಿಸಿದ್ದಾರೆ ಎಂದು ಹೆಚ್​ಡಿ ರೇವಣ್ಣ ಆರೋಪಿಸಿದ್ದಾರೆ.

ಮಾಜಿ ಸಚಿವ ಹೆಚ್. ಡಿ. ರೇವಣ್ಣ

ಮಾಜಿ ಸಚಿವ ಹೆಚ್. ಡಿ. ರೇವಣ್ಣ

  • Share this:
ಹಾಸನ (ನವೆಂಬರ್​ 03); ಈ ಹಿಂದೆ ಹಲವು ಬಾರಿ ನಿಂಬೆ ಹಣ್ಣಿನಿಂದಲೇ ರಾಜ್ಯ ರಾಜಕೀಯದಲ್ಲಿ ಅಪಹಾಸ್ಯಕ್ಕೊಳಗಾಗಿದ್ದ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಇದೀಗ ಮತ್ತೊಮ್ಮೆ ನಿಂಬೆ ಹಣ್ಣಿನಿಂದಲೇ ಸುದ್ದಿಯಾಗುತ್ತಿದ್ದಾರೆ. ಇಂದು ಹಾಸನದಲ್ಲಿ ಮಾತನಾಡಿರುವ ಅವರು, "ದುಷ್ಟ ಶಕ್ತಿಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕು. ಅದಕ್ಕೆ ನಾನು ನಿಂಬೆಹಣ್ಣು ಇಟ್ಟುಕೊಂಡಿದ್ದೀನೆ. ಇದರ ಮೂಲಕ ಕೆಲ ಶತ್ರು ವೈರಿಗಳನ್ನು ಎದುರಿಸುತ್ತೇನೆ. ನನ್ನ ವಿರುದ್ದ ಕೆಲ ವಿರೋಧಿಗಳು ಮಾಡುವ ಮಾಟ ಮಂತ್ರ ತಂತ್ರಗಳಿಂದ ಬಚಾವಾಗಲು ನಾನು ಯಾವಾಗಲೂ ಕೈಯಲ್ಲಿ ನಂಬೆ ಹಣ್ಣನ್ನು ಇಟ್ಟುಕೊಂಡಿರುತ್ತೇನೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರೇ ನಿಂಬೆಹಣ್ಣು ಇಟ್ಟುಕೊಂಡಿದ್ದಾರೆ. ನಾನು ನಿಂಬೆಹಣ್ಣು ಇಟ್ಟುಕೊಳ್ಳೋದ್ರಲ್ಲಿ ತಪ್ಪೇನಿದೆ" ಎಂದು ಹೇಳುವ ಮೂಲಕ ಮತ್ತೆ ಸುದ್ದಿಯ ಕೇಂದ್ರಕ್ಕೆ ಬಂದಿದ್ದಾರೆ.

ಇದೇ ವೇಳೆ ಗ್ರಾಮ ಪಂಚಾಯತ್​ ಚುನಾವಣೆ ಬಗ್ಗೆಯೂ ಮಾತನಾಡಿರುವ ಅವರು, "ಗ್ರಾಮ ಪಂಚಾಯತ್​ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿಯ ಅಭ್ಯರ್ಥಿಗಳಿಗೆ ಪಿಡಿಓಗಳು 10 ರಿಂದ 20 ಸಾವಿರ ಹಣ ನೀಡುವಂತೆ ದೊಡ್ಡ ಮಟ್ಟದ ಬಿಜೆಪಿ ನಾಯಕರು ಸೂಚಿಸಿದ್ದಾರೆ. ಗ್ರಾಪಂ, ಪಿಡಿಓ ಮತ್ತು ಕಾರ್ಯದರ್ಶಿಗಳು ವಂತಿಕೆ ನೀಡಬೇಕು ಎಂದು ಬಿಜೆಪಿ ನಾಯಕರು ಸೂಚಿಸಿದ್ದಾರೆ" ಎಂದು ಸರ್ಕಾರದ ವಿರುದ್ದ ಬಾಂಬ್ ಸಿಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ಸರ್ಕಾರ ಹಿಂದೇಟು ಹಾಕುತ್ತಿತ್ತು. ಆದರೆ ರಾಜ್ಯದ ನ್ಯಾಯಾಲಯ ಆದೇಶ ಹೊರಡಿಸಿದ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ನ್ಯಾಯಾಲಯ ಆದೇಶ ಮಾಡದಿದ್ದರೆ ಆಡಳಿತಾಧಿಕಾರಿ ಗಳಿಂದಲೇ ರಾಜ್ಯವನ್ನು ಲೂಟಿ ಮಾಡಕ್ಕೆ ಹೋಗುತ್ತಿದ್ದರು ಮಾಜಿ ಸಚಿವ ಎಚ್ ಡಿ ರೇವಣ್ಣ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಬೆಂಬಲಿತ  ಅಭ್ಯರ್ಥಿಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಕಾರ್ಯದರ್ಶಿಗಳು ಇಂತಿಷ್ಟು ಹಣ ಕೊಡಬೇಕೆಂದು ಮೇಲ್ಮಟ್ಟದ ಬಿಜೆಪಿ ನಾಯಕರುಗಳು ಆದೇಶ ಹೊರಡಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ರೇವಣ್ಣ ಮಾಡಿದ್ದಾರೆ.

ಇದು ದೊಡ್ಡಮಟ್ಟದಲ್ಲಿ ನಡೆದಿರುವ ಚುನಾವಣಾ ಅಕ್ರಮ ಪ್ರಧಾನಿಗಳೇ ತನಿಖೆ ಮಾಡಲು ಆದೇಶ ಮಾಡಬೇಕು ಜೊತೆಗೆ ಸ್ಥಳೀಯ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆಗೆ ಆದೇಶ ಮಾಡಬೇಕು ಎರಡು ದಿನಗಳಲ್ಲಿ ನಾನು ಜಿಲ್ಲಾಧಿಕಾರಿಗಳಿಗೆ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಗಮನ ಸೆಳೆಯುತ್ತಿದೆ ಎಂದರು.

ಬಿಜೆಪಿ ನಾಯಕರಿಗೆ ವೋಟ್ ಕೇಳಲು ಯಾವ ನೈತಿಕತೆ ಇದೆ ಮಾನ ಮರ್ಯಾದೆ ಇದ್ದರೆ ಓಟು ಕೇಳಲು ಹಾಸನಕ್ಕೆ ಬರಬಾರದು ಎಂದು ತಾಕೀತು ಮಾಡಿದ ರೇವಣ್ಣ ಹಾಸನ ಬೇಲೂರು ಬಿಳಿಕೆರೆ ಮಾರ್ಗದ ಕಾಮಗಾರಿಯನ್ನು ತಡೆಹಿಡಿಯುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : Karnataka Weather: ಬುರೇವಿ ಚಂಡಮಾರುತದ ಎಫೆಕ್ಟ್​; ಕರ್ನಾಟಕದ ಈ ಭಾಗಗಳಲ್ಲಿ ಇಂದಿನಿಂದ 3 ದಿನ ಮಳೆ ಹೆಚ್ಚಳ

ಎಲ್ಲಾ ಸಮಾಜವನ್ನು ಸಮಾನ ರೀತಿಯಲ್ಲಿ ಓಲೈಕೆ ಮಾಡಬೇಕು ಕೇವಲ ಚುನಾವಣಾ ಸಂದರ್ಭದಲ್ಲಿ ಮತ ರಾಜಕೀಯಕ್ಕಾಗಿ ನಿಗಮ ಪ್ರಾಧಿಕಾರ ರಚನೆ ಮಾಡುವುದು ಸರಿಯಲ್ಲ. ಹಾಸನ ನಗರಸಭೆ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡ್ಲಿಲ್ವಾ ಸರ್ಕಾರದಿಂದಲೇ ರಾಜ್ಯದಲ್ಲಿ ದುಡ್ಡು ಕಲೆಕ್ಟ್ ಮಾಡೋಕೆ ಒಬ್ಬರಿದ್ದಾರೆ ಮುಂದಿನ ದಿನಗಳಲ್ಲಿ ಅದನ್ನು ಹೇಳುತ್ತೇನೆ ಎಂದಿದ್ದಾರೆ.

ನಾವು ಎರಡು ರಾಷ್ಟ್ರೀಯ ಪಕ್ಷದವರಿಂದ ದೂರವಿದ್ದೇವೆ. ಕಳೆದ ಬಾರಿಯ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಆದಾಯ ತೆರಿಗೆ ದಾಳಿ ಮಾಡಿದ್ದು,  ದ್ವೇಷದ ರಾಜಕಾರಣ ಅಲ್ವಾ. . ?  ಹಾಸನ ನಗರಕ್ಕೆ 70 ಕೋಟಿ ವೆಚ್ಚದಲ್ಲಿ ಕಾಮಗಾರಿ ನೀಡಿದ್ದೇನೆ. ಬಿಜೆಪಿಯವರು ಯಾವ ಅನುದಾನ ತಂದಿದ್ದಾರೆ. . ? ಚನ್ನಪಟ್ಟಣ ಕೆರೆಯ ಅಭಿವೃದ್ಧಿಯನ್ನು ಕೂಡ ಮೊಟಕುಗೊಳಿಸಿದ್ದಾರೆ ಎಂದು ಬಿಜೆಪಿ ನಾಯಕರುಗಳ ವಿರುದ್ಧ ಗುಡುಗಿದರು.
Published by:MAshok Kumar
First published: