ಕನಕಪುರ (ಆಗಸ್ಟ್ 22); ನನ್ನ ಫೋನ್ ಕಾಲ್ಗಳನ್ನು ಟ್ಯಾಪ್ ಮಾಡಲಾಗುತ್ತಿದೆ. ಈ ಕುರಿತು ನನಗೆ ಅನುಮಾನವಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದೇನೆ. ಮೊದಲು ಈ ಬಗ್ಗೆ ತನಿಖೆ ನಡೆಯಲಿ ಆನಂತರ ಮಾತನಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪ್ರತಿವರ್ಷ ಡಿ.ಕೆ.ಶಿವಕುಮಾರ್ ತಮ್ಮ ಹುಟ್ಟೂರಲ್ಲಿ ಗೌರಿಗಣೇಶನ ಹಬ್ಬದಂದು ಕುಟುಂಬ ಸಮೇತರಾಗಿ ಬಂದು ತಮ್ಮ ತಂದೆ ಡಿ.ಕೆ.ಕೆಂಪೇಗೌಡ, ಅಜ್ಜಿ ಪಾರ್ವತಮ್ಮ ಸಮಾಧಿ ಸ್ಥಳಕ್ಕೆ ಪೂಜೆಸಲ್ಲಿಸುತ್ತಾರೆ. ಇವತ್ತು ಸಹ ಪತ್ನಿ ಉಷಾ, ತಾಯಿ ಗೌರಮ್ಮ ಜೊತೆಗೆ ಡಿಕೆಶಿ ಆಗಮಿಸಿ ಹಿರಿಯರ ಸಮಾಧಿಗೆ ಪೂಜೆಸಲ್ಲಿಸಿದರು. ಈ ವೇಳೆ ಮಾತನಾಡಿರುವ ಅವರು,"ಇದು ಹಿಂದಿನಿಂದಲೂ ನಡೆದು ಬಂದಿರುವ ಪದ್ದತಿ,ಹಾಗಾಗಿ ಇವತ್ತು ಸಹ ಕುಟುಂಬದವರ ಜೊತೆಗೆ ಬಂದು ಪೂಜೆ ಸಲ್ಲಿಸಿದ್ದೇನೆ.
ಇನ್ನು ಈ ಬಾರಿ ಕೊರೋನಾ ಇರುವ ಹಿನ್ನೆಲೆಜನರು ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡುವಾಗ ಎಚ್ಚರಿಕೆ ಇರಲಿ.ಸರ್ಕಾರದ ನಿಯಮಗಳನ್ನ ಪಾಲನೆ ಮಾಡಬೇಕು. ನಮ್ಮ ಸಂಪ್ರದಾಯಗಳು ಮುಖ್ಯ, ಆದರೆ ಕೊರೋನಾ ಬಗ್ಗೆಯೂ ನಿಗಾ ಇರಲಿ" ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ನಂಜನಗೂಡು ಟಿಎಚ್ಒ ಆತ್ಮಹತ್ಯೆ ಪ್ರಕರಣ: ಜಿ.ಪಂ. ಸಿಇಒ ಮೇಲೆ ಎಫ್ಐಆರ್; ವರ್ಗಾವಣೆ
ಇದೇ ಸಂದರ್ಭದಲ್ಲಿ ಫೋನ್ ಟ್ಯಾಪಿಂಗ್ ಕುರಿತು ಮಾತನಾಡಿರುವ ಅವರು, "ರಾಜ್ಯ ಸರ್ಕಾರ ವಿರೋಧ ಪಕ್ಷದ ಹಲವು ನಾಯಕರ ಪೋನ್ ಟ್ಯಾಪ್ ಮಾಡುತ್ತಿರುವ ಕುರಿತು ಅನುಮಾನವಿದೆ. ನನ್ನ ಫೋನ್ ಸಹ ಟ್ಯಾಪ್ ಆಗಿರುವ ಸಾಧ್ಯತೆ ಇದೆ. ಹೀಗಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದೇನೆ. ಈ ಬಗ್ಗೆ ಮೊದಲು ತನಿಖೆಯಾಗಲಿ" ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ