ಸಂಪುಟ ಪುನಾರಚನೆ ಬಗ್ಗೆ ನನಗೇನು ಗೊತ್ತಿಲ್ಲ ತಂದೆ; ವಸತಿ ಸಚಿವ ವಿ.ಸೋಮಣ್ಣ

ಯತ್ನಾಳ ಬುದ್ದಿವಂತರಿದ್ದಾರೆ. ನಾಳೆ ವಿಜಯಪುರಕ್ಕೆ ಹೋಗ್ತಾಯಿದ್ದೀನಿ, ಮಾತಾಡ್ತಿನಿ. ಎಲ್ಲವನ್ನೂ ಹೈಕಮಾಂಡ್ ನೋಡ್ತಾಯಿದೆ. ಸಾವಿರ ಬಾರಿ ಸುಳ್ಳು ಹೇಳಿದರೆ ಅದು ಸುಳ್ಳೇ. ಒಂದು ಹಂತದಲ್ಲಿ ಮಾತಾಡಿದ್ದಾರೆ. ಎರಡನೇ ಹಂತದಲ್ಲಿ ಏನೆನ್ ಮಾಡ್ತಾರೆ ನೋಡೋಣ.  ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ಲಿಂಗಾಯತ ಸಮಾಜದ ಸಿಎಂ ಬದಲಾವಣೆ ಸಾಧ್ಯವಿಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ.

  • Share this:
ಗದಗ: ಸಚಿವ ಸಂಪುಟ ವಿಸ್ತರಣೆ ಪುನಾರಚನೆ ಬಗ್ಗೆ ನನಗೆ ಏನೂ ಗೊತ್ತಿಲ್ಲ ತಂದೆ. ಹೈಕಮಾಂಡ್ ಏನ್ ಹೇಳುತ್ತೊ ಗೊತ್ತಿಲ್ಲ. ಯಡಿಯೂರಪ್ಪ ಏನ್ ಹೇಳ್ತಾರೋ ಗೊತ್ತಿಲ್ಲ. ಏನಾದರೂ ಗೊತ್ತಾಗಬೇಕಿದ್ದರೆ ತೋಂಟದಾರ್ಯ ಶ್ರೀಗಳು ಇಚೀಗೆ ಬರಬೇಕು. ಆಗ ಗೊತ್ತಾಗುತ್ತೆ ಎಂದು ಸಂಪುಟ ಪುನಾರಚನೆ ವಿಚಾರಕ್ಕೆ ಗದಗನಲ್ಲಿ ವಸತಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ ಅವರು, ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಸಚಿವರು ಎಲ್ಲರಿಗೂ ರಾತ್ರಿ ಕನಸು ಬಿಳುತ್ತೆ. ಆದರೆ ಸಿದ್ದರಾಮಯ್ಯಗೆ ಹಗಲು ಕನಸು ಬಿಳುತ್ತಿದೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಯತ್ನಾಳ ನಮ್ಮ ಪಕ್ಷದ ಹಿರಿಯ ಶಾಸಕರು. ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಹೈಕಮಾಂಡ್ ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಒಂದು ಕೊನೆ ಅಂತ ಇದ್ದೇ ಇರುತ್ತೆ. ತೋಂಟದಾರ್ಯ ಶ್ರೀಗಳು ಲಿಂಗೈಕ್ಯರಾದ ಬಳಿಕ ಸಿದ್ದರಾಮ ಶ್ರೀಗಳು ಈ ಮಠಕ್ಕೆ ಬರ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಬುದ್ಧಿವಂತ, ತಪಸ್ವಿಗಳನ್ನು ಪೀಠಕ್ಕೆ ಕೂರಿಸಿದ್ದಾರೆ ಎಂದರು.

ಇದನ್ನು ಓದಿ: ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ; ಹುಬ್ಬಳ್ಳಿ ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಗುಡುಗು

ನಾನು ಏಳೆಂಟು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಸಿಎಂ ಗುಂಡೂರಾವ್ ರಿಂದ ಯಡಿಯೂರಪ್ಪ ಅವರವರೆಗೂ ನೋಡಿದ್ದೇನೆ. ಜೆ ಎಚ್ ಪಟೇಲ್ ಕಾಲದಲ್ಲಿ ನಾನೂ ಒಬ್ಬ ಬುದ್ಧಿವಂತ. ಇನ್ನೊಬ್ಬ ಪಟೇಲ್ ಈ ಪ್ರಪಂಚಕ್ಕೆ ತರೋಕೆ ಆಗಲ್ಲ. ಸಮಾಜಕ್ಕೆ ದೊಡ್ಡ ಇತಿಹಾಸ ಇದೆ. ನಿಜಲಿಂಗಪ್ಪ ಅಂಥ ನಾಯಕರು ಈ ಸಮಾಜದಿಂದ ಬಂದವರಿದ್ದಾರೆ. ಈ ಸಮಾಜದಿಂದ ಬಂದ ಸಿಎಂ ಗಳು ಎಲ್ಲ ವರ್ಗದ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರು ಅದನ್ನು ಮುಂದುವರೆಸಿದ್ದಾರೆ. ಯತ್ನಾಳ ಬುದ್ದಿವಂತರಿದ್ದಾರೆ. ನಾಳೆ ವಿಜಯಪುರಕ್ಕೆ ಹೋಗ್ತಾಯಿದ್ದೀನಿ, ಮಾತಾಡ್ತಿನಿ. ಎಲ್ಲವನ್ನೂ ಹೈಕಮಾಂಡ್ ನೋಡ್ತಾಯಿದೆ. ಸಾವಿರ ಬಾರಿ ಸುಳ್ಳು ಹೇಳಿದರೆ ಅದು ಸುಳ್ಳೇ. ಒಂದು ಹಂತದಲ್ಲಿ ಮಾತಾಡಿದ್ದಾರೆ. ಎರಡನೇ ಹಂತದಲ್ಲಿ ಏನೆನ್ ಮಾಡ್ತಾರೆ ನೋಡೋಣ.  ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ಲಿಂಗಾಯತ ಸಮಾಜದ ಸಿಎಂ ಬದಲಾವಣೆ ಸಾಧ್ಯವಿಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
Published by:HR Ramesh
First published: