HOME » NEWS » District » I AM NOT DOING LOBBY FOR MINISTER POST SAYS MLA UMESH KATTI RHHSN

ಮಂತ್ರಿ ಗಿರಿಗಾಗಿ ಲಾಬಿ ಮಾಡಲ್ಲ, ಹೈ ಕಮಾಂಡ್ ಕರೆದರೆ ಹೋಗಿ ಮಂತ್ರಿ ಆಗ್ತಿನಿ; ಶಾಸಕ ಉಮೇಶ್ ಕತ್ತಿ

ಬಳಿಕ ಮತ್ತೊಮ್ಮೆ ಸಂಪುಟ ವಿಸ್ತರಣೆ ಆದಾಗಲೂ ಈ ಬಾರಿ ಮಂತ್ರಿ ಆಗ್ತಾರೆ ಎಂದು ಹೇಳುತ್ತಿತ್ತು. ಆದರೆ ಮತ್ತೆ ಕೊನೆಯ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿತ್ತು. ಸದ್ಯ ಈಗ ಮೂರನೇ ಬಾರಿಗೆ ಮಂತ್ರಿಮಂಡಲ ವಿಸ್ತರಣೆ ಆಗುತ್ತಿದ್ದು ಸ್ವತಃ ಯಡಿಯೂರಪ್ಪ ಉಮೇಶ್ ಕತ್ತಿ ಸಂಪುಟದಲ್ಲಿ ಇರ್ತಾರೆ ಅನ್ನುವ ಭರವಸೆ ನೀಡಿದ್ದಾರೆ. ಈ ಬಾರಿಯಾದರೂ ಉಮೇಶ್ ಕತ್ತಿ ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸ್ತಾರಾ ಎಂಬುದನ್ನು ಕಾದು ನೋಡಬೇಕು.

news18-kannada
Updated:January 11, 2021, 5:22 PM IST
ಮಂತ್ರಿ ಗಿರಿಗಾಗಿ ಲಾಬಿ ಮಾಡಲ್ಲ, ಹೈ ಕಮಾಂಡ್ ಕರೆದರೆ ಹೋಗಿ ಮಂತ್ರಿ ಆಗ್ತಿನಿ; ಶಾಸಕ ಉಮೇಶ್ ಕತ್ತಿ
ಶಾಸಕ ಉಮೇಶ್​ ಕತ್ತಿ
  • Share this:
ಬೆಳಗಾವಿ; ಬಹುನಿರೀಕ್ಷೆ ಹುಟ್ಟಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಬರುವ 13 ನೇ ತಾರೀಖಿನಂದೇ ಮುಹೂರ್ತ ಫಿಕ್ಸ ಆಗಿದೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ರಾಜ್ಯದ ಹಲವು ಶಾಸಕರು ಮಂತ್ರಿ ಪಟ್ಟಕ್ಕೆ ಏರಲು ಲಾಭಿ ಸಹ ನಡೆಸಿದ್ದಾರೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲೂ ಈ ಕುರಿತು ಬಿಸಿ ಬಿಸಿ ಚರ್ಚೆಗಳು ನಡೆದಿದ್ದು, ರಾಜ್ಯದಲ್ಲೇ ಹಿರಿಯ ಶಾಸಕರಾಗಿರುವ ಉಮೇಶ್ ಕತ್ತಿಗೆ ಈ ಬಾರಿ ಆದ್ರು ಚಾನ್ಸ್ ಸಿಗುತ್ತಾ ಅನ್ನುವ ಚರ್ಚೆಗಳು ಶುರುವಾಗಿವೆ. ಆದರೆ ಶಾಸಕ ಉಮೇಶ್ ಕತ್ತಿ ಮಾತ್ರ ನಾನು ಮಂತ್ರಿಗಿರಿಗಾಗಿ ಯಾವುದೇ ಲಾಭಿ ಮಾಡಲ್ಲ ಎಂದಿದ್ದಾರೆ.

ಹೌದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ಬಾರಿಯ ಲಿಸ್ಟ್ ನಲ್ಲಿ ಉಮೇಶ್ ಕತ್ತಿಯು ಇರ್ತಾರೆ ಎಂದು ಹೇಳಿರುವ ಬೆನ್ನಲ್ಲೇ ಮಾಧ್ಯಮಗಳು ಉಮೇಶ್ ಕತ್ತಿಯವರ ಪ್ರತಿಕ್ರಿಯೆ ಪಡೆಯಲು ಹೋದಾಗ ಈ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾತನಾಡಿದ ಕತ್ತಿ, ರಾಜ್ಯದ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಮುಖೇನವೇ ನನಗೆ ತಿಳಿದು ಬಂದಿದೆ. ನನಗೆ ಇಲ್ಲಿಯವರೆಗೂ ಮಂತ್ರಿಯಾಗುವ ಕುರಿತು ಯಾವುದೇ ಕರೆ ಬಂದಿಲ್ಲ ಎಂದಿದ್ದಾರೆ. ಬುಧವಾರ ಸಾರ್ವಜನಿಕ ಉದ್ದಿಮೆಗಳ ಕಮಿಟಿ ಮೀಟಿಂಗ್ ಇದ್ದು ಬೆಂಗಳೂರಿಗೆ ತೆರಳುತ್ತಿದ್ದೇನೆ. ನನಗೆ ಸಚಿವನಾಗಲು ಕರೆದರೆ ನಾನು ಹೋಗಿ ಸಚಿವನಾಗುತ್ತೇನೆ ಎಂದಿದ್ದಾರೆ.

ಯಾವುದೇ ಲಾಭಿ ಮಾಡಲ್ಲಾ

ಇನ್ನು ಉಮೇಶ್ ಕತ್ತಿ ಈ ಬಾರಿ ಶತಾಯ ಗತಾಯ ಮಂತ್ರಿ ಪಟ್ಟಕ್ಕೆ ಏರಲೇಬೇಕು ಎಂದು ಸಾಕಷ್ಟು ಲಾಭಿ ನಡೆಸುತ್ತಿದ್ದಾರೆ ಎನ್ನುವ ಮಾತಿಗೆ ಸ್ವತಃ ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ. ನಾನು ಮಂತ್ರಿಗಿರಿಗಾಗಿ ಹಿಂದೆಯೂ ಲಾಭಿ ಮಾಡಿಲ್ಲ ಮುಂದೆಯೂ  ಲಾಭಿ ಮಾಡಲ್ಲ. ಯಾರ ಸ್ಥಾನವನ್ನು ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ ನಶೀಬ್ ಯಾರ ಕೈಯಲ್ಲೂ ಇಲ್ಲ, ಮಂತ್ರಿಗಿರಿ ನೀಡಿದರೆ ಮಂತ್ರಿಯಾಗುವೇ ಇಲ್ಲವಾದರೆ ಕ್ಷೇತ್ರದ ಕೆಲಸದಲ್ಲಿರುವೆ ಎಂದು ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ಇವತ್ತು ನೋ ಕಮೆಂಟ್ ಎಂದ ಯತ್ನಾಳ; ಸಂಪುಟ ವಿಸ್ತರಣೆ ಬೆನ್ನಲ್ಲೇ ಮೌನಕ್ಕೆ ಶರಣಾದ ಬಿಜೆಪಿ ಫೈರ್ ಬ್ರಾಂಡ್

ಬಸನಗೌಡ ಪಾಟೀಲ್ ಯತ್ನಾಳ ಅವರ ಬಿ ಎಸ್ ವೈ ಸಂಪುಟದಲ್ಲಿ ತಾನು ಮಂತ್ರಿ ಆಗಲ್ಲ ಎಂಬ ಹೇಳಿಕೆ ವಿಚಾರವಾಗಿಯೂ ಮಾತನಾಡಿರುವ ಕತ್ತಿ, ಅದು ಅವರವರ ವೈಯಕ್ತಿಕ ವಿಚಾರ. ಹೈಕಮಾಂಡ್ ಪಕ್ಷ ಕರೆದರೆ ಮಂತ್ರಿಯಾಗಬೇಕಾಗುತ್ತೆ. ಹೈಕಮಾಂಡ್ ಮತ್ತು ಪಕ್ಷ ಕರೆದರೆ ಅವರೂ ಸಹ ಮಂತ್ರಿಯಾಗಲಿ ನಾನು ಅವರ ವಿಚಾರವಾಗಿ ಮಾತನಾಡಲ್ಲ ಎಂದಿದ್ದಾರೆ.
ಎರಡು ಬಾರಿ ವಂಚಿತರಾಗಿರುವ ಕತ್ತಿ

ಇನ್ನು ಉಮೇಶ್ ಕತ್ತಿ ಕಳೆದ ಎರಡು ಬಾರಿಯು ಸಂಪುಟ ವಿಸ್ತರಣೆ ಆದಾಗ ಸಚಿವ ಸಂಪುಟದಿಂದ ವಂಚಿತರಾದರು. ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿ, ರಾಜ್ಯದಲ್ಲಿ ಅತ್ಯಂತ ಹಿರಿಯ ಶಾಸಕ ಉಮೇಶ್ ಕತ್ತಿ ಸಚಿವರಾಗುವುದು ಖಚಿತ ಎಂದೆಲ್ಲ ಹೇಳಲಾಗುತ್ತಿತ್ತು. ಆದ್ರೆ ಹೈಕಮಾಂಡ್ ಮಾತ್ರ ಕತ್ತಿಗೆ ಶಾಕ್ ನೀಡಿ ಜಿಲ್ಲೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿಯನ್ನು ಮಂತ್ರಿ ಮಾಡಿ ಉಪ ಮುಖ್ಯಮಂತ್ರಿ ಪಟ್ಟಕ್ಕೆ ಏರಿಸಿತ್ತು‌. ಬಳಿಕ ಮತ್ತೊಮ್ಮೆ ಸಂಪುಟ ವಿಸ್ತರಣೆ ಆದಾಗಲೂ ಈ ಬಾರಿ ಮಂತ್ರಿ ಆಗ್ತಾರೆ ಎಂದು ಹೇಳುತ್ತಿತ್ತು. ಆದರೆ ಮತ್ತೆ ಕೊನೆಯ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿತ್ತು. ಸದ್ಯ ಈಗ ಮೂರನೇ ಬಾರಿಗೆ ಮಂತ್ರಿಮಂಡಲ ವಿಸ್ತರಣೆ ಆಗುತ್ತಿದ್ದು ಸ್ವತಃ ಯಡಿಯೂರಪ್ಪ ಉಮೇಶ್ ಕತ್ತಿ ಸಂಪುಟದಲ್ಲಿ ಇರ್ತಾರೆ ಅನ್ನುವ ಭರವಸೆ ನೀಡಿದ್ದಾರೆ. ಈ ಬಾರಿಯಾದರೂ ಉಮೇಶ್ ಕತ್ತಿ ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸ್ತಾರಾ ಎಂಬುದನ್ನು ಕಾದು ನೋಡಬೇಕು.
Published by: HR Ramesh
First published: January 11, 2021, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories