ನಾನು ಯಾವತ್ತೂ ಹಲ್ಕಟ್ ರಾಜಕಾರಣ ಮಾಡುವುದಿಲ್ಲ: ಸಚಿವ ST Somashekhar

ನನಗೂ ಆತನಿಗೂ ಯಾವ ಸಂಬಂಧವೂ ಇಲ್ಲ. ನನ್ನ ಆತ್ಮ ಸಾಕ್ಷಿ ಯಾವತ್ತೂ ಪಕ್ಷ ದ್ರೋಹದ ಕೆಲಸ ಮಾಡಿಸುವುದಿಲ್ಲ. ನಾನು ಇಪ್ಪತ್ತೈದು ವರ್ಷದ ರಾಜಕೀಯದಲ್ಲಿ ಈ ರೀತಿಯ ವಲಸು ರಾಜಕಾರಣ ಮಾಡಿಲ್ಲ. ಈ ವಿಚಾರದಲ್ಲಿ ಯಾರು ಏನೇ ಹೇಳಬಹುದು. ನನ್ನ ಆತ್ಮ ಸಾಕ್ಷಿಗೆ ಸರಿ ಇದೆ ಎಂದು ಸ್ಪಷ್ಟನೆ ನೀಡಿದರು.

ಎಸ್​​ಟಿ ಸೋಮಶೇಖರ್​​

ಎಸ್​​ಟಿ ಸೋಮಶೇಖರ್​​

  • Share this:
ತಮ್ಮ ವಿಶೇಷ ಕರ್ತವ್ಯ ಅಧಿಕಾರಿಗೆ ಕಾಂಗ್ರೆಸ್ ಟಿಕೆಟ್ (Congress Ticket) ಸಿಕ್ಕ ವಿಚಾರಕ್ಕೆ ಮೈಸೂರಿನಲ್ಲಿ (Mysuru) ಪ್ರತಿಕ್ರಿಯಿಸಿರುವ ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar), ನಾನು ಯಾವತ್ತೂ ಹಲ್ಕಟ್ ರಾಜಕಾರಣ ಮಾಡುವುದಿಲ್ಲ.  ಬಿಜೆಪಿಯಲ್ಲಿದ್ದು (BJP) ನನ್ನ ಆಪ್ತ ಸಹಾಯಕನನ್ನು ಕಾಂಗ್ರೆಸ್ ಗೆ (Congress) ಕಳುಹಿಸುವ ಹೇಯ ರಾಜಕೀಯ (Politics) ಯಾವತ್ತೂ ಮಾಡಿಲ್ಲ. ಎಂಟು ದಿನದ ಹಿಂದೆ ಆತ ಬಂದು, ಎಸ್.ಎಂ.ಕೃಷ್ಣ (SM Krishna) ಅವರ ಮೂಲಕ  ಕಾಂಗ್ರೆಸ್ ಟಿಕೆಟ್ ಸಿಗುತ್ತಿದೆ ಎಂದು ಹೇಳಿದ. ಆ ಕ್ಷಣವೇ ನಾನು ಆತನನ್ನ ಕರ್ತವ್ಯದಿಂದ ತೆಗೆದು ಹಾಕುವಂತೆ ಸರ್ಕಾರಕ್ಕೆ ವರದಿ ಮಾಡಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ನನಗೂ ಆತನಿಗೂ ಯಾವ ಸಂಬಂಧವೂ ಇಲ್ಲ. ನನ್ನ ಆತ್ಮ ಸಾಕ್ಷಿ ಯಾವತ್ತೂ ಪಕ್ಷ ದ್ರೋಹದ ಕೆಲಸ ಮಾಡಿಸುವುದಿಲ್ಲ. ನಾನು ಇಪ್ಪತ್ತೈದು ವರ್ಷದ ರಾಜಕೀಯದಲ್ಲಿ ಈ ರೀತಿಯ ವಲಸು ರಾಜಕಾರಣ ಮಾಡಿಲ್ಲ. ಈ ವಿಚಾರದಲ್ಲಿ ಯಾರು ಏನೇ ಹೇಳಬಹುದು. ನನ್ನ ಆತ್ಮ ಸಾಕ್ಷಿಗೆ ಸರಿ ಇದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:  ತಮಾಷೆಗೆ ಹೇಳಿದ ಮಾತನ್ನು ನಾರಾಯಣ ಗೌಡರು ನಿಜ ಮಾಡಿದ್ರು: ಸಚಿವ ST Somashekhar

ಮೈಸೂರು ಚಾಮರಾಜನಗರ ವಿಧಾನ ಪರಿಷತ್ತು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ 3 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಹೊಸಬರಾಗಿದ್ದಾರೆ‌. ಬಿಜೆಪಿ ಅಭ್ಯರ್ಥಿ ರಘು ಆರ್‌. ಕೌಟಿಲ್ಯ ಕಳೆದ ಚುನಾವಣೆಯಲ್ಲಿ ಸೋತ ಬಳಿಕವೂ ಎಲ್ಲ ಗ್ರಾಮ ಪಂಚಾಯತಿ ಸದಸ್ಯರ ಜತೆ ಸಂಪರ್ಕದಲ್ಲಿದ್ದಾರೆ ಎಂದರು.

ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಸೋಮಶೇಖರ್

ರಘು ಅವರ ಗೆಲುವಿಗಾಗಿ ಈಗಾಗಲೇ ರಣತಂತ್ರ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ನವರು ಏನು ಬೇಕಾದರೂ ಮಾಡಲಿ. ಈ ಬಾರಿ ನೂರಕ್ಕೆ ನೂರರಷ್ಟು ರಘು ಕೌಟಿಲ್ಯ ಗೆಲುವು ಸಾಧಿಸಲಿದ್ದಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಪಕ್ಷ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಮೊಟಕು ಮಾಡಿಲ್ಲ. ಎಲ್ಲ ಸಮುದಾಯದವರಿಗೂ ಅಧಿಕಾರ ಸಿಗಬೇಕೆಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ಸದಸ್ಯರ ಅಧ್ಯಕ್ಷ ಸ್ಥಾನದ ಅವಧಿಯನ್ನು ಎರಡೂವರೆ ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:  ಈ ಚುನಾವಣೆ ಹೆಬ್ಬಾಳ್ಕರ್ Vs ಜಾರಕಿಹೊಳಿ ರೀತಿ ಆಗುತ್ತಾ? ಪ್ರಶ್ನೆಗೆ ಥೂ.. ಥೂ... ಎಂದ Ramesh Jarkiholi

ಎಸ್.ಎಂ.ಕೃಷ್ಣ ವಿರುದ್ಧ ಅಸಮಧಾನ

ಹಾಲಿ MLC ಅಪ್ಪಾಜಿ ಗೌಡ ಯಾವೊಬ್ಬ ಗ್ರಾ.ಪಂ ಸದಸ್ಯರ ಮನೆಗೆ ತೆರಳಿ ಒಂದು ಸ್ವೀಟ್ ಬಾಕ್ಸ್ ಕೂಡ ನೀಡಿಲ್ಲ. ಎಲ್ಲಿ ಜಮೀನಿದೆ, ಎಲ್ಲಿ ಸೈಟ್ ಮಾಡಬಹುದು ಎಂಬ ಬಗ್ಗೆ ಗಮನ ಕೊಟ್ಟವನು ಅಪ್ಪಾಜಿಗೌಡ. ಜನಸೇವೆ ಮಾಡುವ ಭಾವನೆ ಆತನಲ್ಲಿ ಇಲ್ಲ. ಇನ್ನು ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ನಮ್ಮ ಪಕ್ಷದ ಹಿರಿಯರು ಕರೆ ಮಾಡಿ ನಮ್ಮ ಹುಡುಗನನ್ನು ನಿಮ್ಮ ಇಲಾಖೆಗೆ ತೆಗೆದುಕೊಳ್ಳಿ ಎಂದ್ರು.

ಅವರ ಮಾತಿಗೆ ಗೌರವ ಕೊಟ್ಟು ಆತನನ್ನು ವಿಶೇಷ ಅಧಿಕಾರಿ ಮಾಡಿಕೊಂಡೆ. ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದೇನೆ ಎಂದು ಹೇಳಿದ್ದ. ತಕ್ಷಣ ಆತನನ್ನು ನನ್ನ ವಿಶೇಷ ಕರ್ತವ್ಯಾಧಿಕಾರ ಸ್ಥಾನದಿಂದ ತೆಗೆದುಹಾಕಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಸ್‌ಎಂ ಕೃಷ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಬಗ್ಗೆ ಅಸಮಾಧಾನ ಹೊರಹಾಕಿದರು.

ಡಿಸೆಂಬರ್ 14ಕ್ಕೆ ಮತ ಎಣಿಕೆ

2022ರ ಜನವರಿ 5ರಂದು 25 ಪರಿಷತ್​ ಸದಸ್ಯರ (MLC’s)ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು.
Published by:Mahmadrafik K
First published: