• ಹೋಂ
 • »
 • ನ್ಯೂಸ್
 • »
 • ಜಿಲ್ಲೆ
 • »
 • Sumalatha Ambareesh; ಕುಮಾರಸ್ವಾಮಿ ಹೃದಯವಂತರು, ಅವರು ಒಳ್ಳೆಯ ರೀತಿ ಹಾರೈಸಿದ್ದರೆ ಖುಷಿ ಪಡುತ್ತೇನೆ; ಸಂಸದೆ ಸುಮಲತಾ

Sumalatha Ambareesh; ಕುಮಾರಸ್ವಾಮಿ ಹೃದಯವಂತರು, ಅವರು ಒಳ್ಳೆಯ ರೀತಿ ಹಾರೈಸಿದ್ದರೆ ಖುಷಿ ಪಡುತ್ತೇನೆ; ಸಂಸದೆ ಸುಮಲತಾ

ಕುಮಾರಸ್ವಾಮಿ - ಸುಮಲತಾ

ಕುಮಾರಸ್ವಾಮಿ - ಸುಮಲತಾ

MP Sumalatha; ಸಂಸದೆ ಸುಮಲತಾ ಅವರು ಮಂಡ್ಯದಲ್ಲಿ ಮನೆ ಮಾಡುವ ವಿಚಾರವಾಗಿ ಎಚ್​ಡಿ ಕುಮಾರಸ್ವಾಮಿ ಅವರು, ಮನೆ ಮಾಡುವುದಲ್ಲ, ಜನರ ಸಮಸ್ಯೆ ಕೇಳಬೇಕು ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು ಪ್ರತಿಕ್ರಿಯಿಸಿದ ಸುಮಲತಾ ಅವರು, ಹೃದಯವಂತರು ಮನೆ ಮಾಡುವ ಸಂಧರ್ಭದಲ್ಲಿ ಒಳ್ಳೆ ಹಾರೈಕೆ ಬಂದಿದರೆ ಸಂತೋಷ. ಬೇರೆ ಮಾತುಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.

ಮುಂದೆ ಓದಿ ...
 • Share this:

  ಮಂಡ್ಯ: (Mandya) ಶಿಂಷಾ ನದಿಗೆ ಸಂಪರ್ಕ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ, ಮಂಡ್ಯ ಜಿಲ್ಲೆ ಮದ್ದೂರು ತಾ. ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು (K Kodihalli Villagers Protest) ಕಳೆದ ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಸಂಸದೆ ಸುಮಲತಾ (MP Sumalatha) ಭೇಟಿ ನೀಡಿದರು. ಕಳೆದ ಆ. 19ರಂದು ಮೈಸೂರು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದ್ದರು. ಇಂದು ಅದೇ ಸ್ಥಳಕ್ಕೆ ಜಿಲ್ಲೆಯ ಸಂಸದೆಯಾಗಿರುವ ಸುಮಲತಾ ಅವರು ಭೇಟಿ ಕೊಟ್ಟು ಪ್ರತಿಭಟನಾಕಾರರ ಆಹವಾಲು ಆಲಿಸಿದರು. ಮುಂದಿನ 15 ದಿನದಲ್ಲಿ ಸೇತುವೆ ನಿರ್ಮಾಣ ಕುರಿತು ಸ್ಪಷ್ಟ ನಿರ್ಧಾರ ಆಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು. ಸೇತುವೆ ನಿರ್ಮಿಸಿದರೆ ಅದರಿಂದ ಆಗುವ ಅನುಕೂಲಗಳ ಕುರಿತು ಸಂಸದೆ ಸುಮಲತಾ ಅವರಿಗೆ ಮಾಹಿತಿ ನೀಡಿ, ನದಿಗೆ ಸಂಪರ್ಕ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದರು.


  ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಮನೆ ವಿಚಾರ ಸಂಬಂಧ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದೆ ಸುಮಲತಾ ಅವರು, ಕುಮಾರಸ್ವಾಮಿ ಅವರು ಏನು ಬೇಕಾದರು ಮಾತನಾಡಲಿ. ಅವರು ಹೃದಯವಂತರು. ಹೃದಯವಂತಿಕೆ ಇರೋರು. ಮನೆ ಮಾಡುವ ಸಂದರ್ಭಗಳಲ್ಲಿ ಒಳ್ಳೆಯ ಹಾರೈಕೆ ಮಾಡಿದರೆ ಸಂತೋಷ ಪಡುತ್ತಿದ್ದೆ. ಆದರೆ ಅವರು ಬೇರೆ ಮಾತನಾಡಿದ್ದರೆ. ಹೀಗಾಗಿ ನಾನು ಪ್ರತಿಕ್ರಿಯೆ ನೀಡಲ್ಲ. ಅವರು ಮಾತನಾಡಿರುವ ಅರ್ಥ ಏನು ಅಂತಾ ಗೊತ್ತಿಲ್ಲ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಅವರೆ ಹೇಳಬೇಕು. ನಾನು ಮಾತುಗಳಲ್ಲಿ ಮಾತ್ರ ಅಲ್ಲ ಕೆಲಸ ಮಾಡಿ ತೋರಿಸುತ್ತೇನೆ. ಅವರು ಒಳ್ಳೆಯದಾಗಿ ಎಂದು ಶುಭ ಹಾರೈಸಿದರೆ ಧನ್ಯವಾದ ಹೇಳುತ್ತೇನೆ. ನಾವು ಸುಮ್ಮನೆ ಮಾತನಾಡಬಾರದು. ನಮ್ಮ ಕೆಲಸವೇ ಮಾತನಾಡಬೇಕು ಎಂದು ಕೆ. ಕೋಡಿಹಳ್ಳಿ ಗ್ರಾಮದಲ್ಲಿ ಹೇಳಿದರು.


  ಸಂಸದೆ ಸುಮಲತಾ ಅವರು ಮಂಡ್ಯದಲ್ಲಿ ಮನೆ ಮಾಡುವ ವಿಚಾರವಾಗಿ ಎಚ್​ಡಿ ಕುಮಾರಸ್ವಾಮಿ ಅವರು, ಮನೆ ಮಾಡುವುದಲ್ಲ, ಜನರ ಸಮಸ್ಯೆ ಕೇಳಬೇಕು ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು ಪ್ರತಿಕ್ರಿಯಿಸಿದ ಸುಮಲತಾ ಅವರು, ಹೃದಯವಂತರು ಮನೆ ಮಾಡುವ ಸಂಧರ್ಭದಲ್ಲಿ ಒಳ್ಳೆ ಹಾರೈಕೆ ಬಂದಿದರೆ ಸಂತೋಷ. ಬೇರೆ ಮಾತುಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.


  ಇದನ್ನು ಓದಿ: Koramanagala Accident: ಏಳು ಮಂದಿ ಸಾವಿಗೆ ಕಾರಣವಾಯ್ತಾ ಒಂದು ನೀರಿನ ಬಾಟಲ್? ಕೋರಮಂಗಲ ಅಪಘಾತ ಪ್ರಕರಣದಲ್ಲೊಂದು ಅನುಮಾನ


  ಬೆಂಗಳೂರು- ಮೈಸೂರು ಹೆದ್ದಾರಿ 2 ನಗರಗಳಿಗೆ ಮಾತ್ರ ಓಡಾಡುವ ರಸ್ತೆಯಲ್ಲ. ಮಂಡ್ಯದಲ್ಲಿ 58 ಕಿ. ಮೀ. ಹೆದ್ದಾರಿ ಇದೆ. ಇಲ್ಲಿನ ರೈತರು ರಸ್ತೆಗಾಗಿ ತಮ್ಮ ತಮ್ಮ ಜಮೀನು ತ್ಯಾಗ ಮಾಡಿದ್ದಾರೆ. ರೈತರಿಗೆ ಸಮಸ್ಯೆ ಕೊಟ್ಟು ಈ ಯೋಜನೆ ಮುಗಿಸಲು ಸಾಧ್ಯವಿಲ್ಲ. ಸರ್ವಿಸ್ ರೋಡ್ ಇಲ್ಲ, ಆಕ್ಸಸ್ ಪಾಯಿಂಟ್ ಸರಿಯಿಲ್ಲ. ಇದಕ್ಕಾಗೇ ನಾನು ಕಾಮಗಾರಿ ವೈಜ್ಞಾನಿಕವಾಗಿಲ್ಲ‌ ಎಂದಿದ್ದು. ಪೇಪರ್‌ನಲ್ಲಿ ಎಲ್ಲಾ ಸರಿಯಿದೆ ಎಂದು ತೋರಿಸುವುದಲ್ಲ. ಗ್ರೌಂಡ್ ರಿಯಾಲಿಟಿ ನೋಡಬೇಕು. ಜನಕ್ಕೆ ಯಾವ ರೀತಿ ಪ್ರಾಬ್ಲಂ ಆಗುತ್ತಿದೆ ಎಂದು ತಿಳಿಯಬೇಕು. ಅರ್ಧ ಕಿ.ಮೀ ಹೋಗಲು 10 ಕಿ.ಮೀ ಬಳಸಿ ಬರಬೇಕು ಅಂದ್ರೆ ಜನಕ್ಕೆ ತೊಂದರೆನೆ ಅಲ್ವಾ. ಇದನ್ನೆಲ್ಲಾ ಲೆಕ್ಕಿಸದೆ ನಾವು ಪ್ರಾಜೆಕ್ಟ್ ಮುಗಿಸಬೇಕು ಅಂದ್ರೆ ಆಗಲ್ಲ. ನಿಯಮಗಳಿರುವುದು ಜನರಿಗೆ ಉಪಯೋಗ ಆಗಲು. 15 ದಿನ ಟೈಮ್ ಕೇಳಿದ್ದಾರೆ. ಕಾದು ನೋಡುತ್ತೇನೆ. ಆನಂತರ ದೆಹಲಿಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅವರು ಹೇಳಿದರು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: