news18-kannada Updated:January 12, 2021, 3:56 PM IST
ಮಹೇಶ್ ಕುಮಟಳ್ಳಿ
ಚಿಕ್ಕೋಡಿ; ಮಹೇಶ್ ಕುಮಟಳ್ಳಿ ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ. ಪವರ್ ಫುಲ್ ನಾಯಕ ಅಂತಲೇ ಕರೆಸಿಕೊಳ್ಳುವ ಲಕ್ಷ್ಮಣ ಸವದಿ ಸೋಲಿಸಿ ಅಚ್ಷರಿ ಹುಟ್ಟಿಸಿದ್ದ ಶಾಸಕರಾದ ಇವರು ರಮೇಶ್ ಜಾರಕಿಹೋಳಿ ಅಪ್ಪಟ ಆಪ್ತರು. ಜೊತೆಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ರಾಜೀನಾಮೆ ನೀಡಿದವರಲ್ಲಿ ಇವರು ಒಬ್ಬರು. ಸದ್ಯ ಮಹೇಶ ಕುಮಟಳ್ಳಿ ಈಗ ಮತ್ತೊಂದು ಹೊಸ ವರಸೆ ತೆಗೆದಿದ್ದು, ತಮಗೂ ಸಚಿವ ಸ್ಥಾನ ಬೇಕು. ನಾನು ಸಚಿವ ಸ್ಥಾನದ ಆಕಾಂಕ್ಷೆ ಎಂದು ಬೇಡಿಕೆ ಇಟ್ಟಿದ್ದಾರೆ.
ಹೌದು, ಬಹು ನಿರೀಕ್ಷೆ ಹುಟ್ಟಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಗ್ರೀನ್ ಸಿಗ್ನಲ ಸಿಕ್ಕಿದ್ದು ಬರುವ 13 ನೇ ತಾರೀಖಿನಂದೆ ಮುಹೂರ್ತ ಫಿಕ್ಸ್ ಆಗಿದೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲೆ ರಾಜ್ಯದ ಹಲವು ಶಾಸಕರು ಮಂತ್ರಿಗಿರಿ ಪಟ್ಟಕ್ಕೆ ಏರಲು ಲಾಭಿ ಸಹ ನಡೆಸಿದ್ದಾರೆ. ಅದರ ಬೆನ್ನಲೆ ಈಗ ಇಷ್ಟು ದಿನ ಸುಮ್ಮನಿದ್ದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸಚಿವ ಸ್ಥಾನದ ಪ್ರಸ್ತಾಪ ಮಾಡಿದ್ದಾರೆ.
ಕಾಂಗ್ರೆಸ್ನಲ್ಲಿದ್ದು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಬಂದು ಗೆದ್ದ ಬಹುತೇಕ ಎಲ್ಲಾ ಶಾಸಕರಿಗೆ ಮಂತ್ರಿಗಿರಿ ಭಾಗ್ಯ ಸಿಕ್ಕಿದೆ. ಆದರೆ ಮಹೇಶ್ ಕುಮಟಳ್ಳಿಗೆ ಮಾತ್ರ ಆ ಭಾಗ್ಯ ಸಿಕ್ಕಿರಲಿಲ್ಲಾ. ಅಂದು ನಡೆದ ಉಪ ಚುನಾವಣೆಯಲ್ಲಿ 12 ಜನ ಬಿಜೆಪಿ ಶಾಸಕರಾಗಿ ಆಯ್ಕೆಯಾದವರಲ್ಲಿ 11 ಜನ ಶಾಸಕರಿಗೆ ಎಲ್ಲರಿಗೂ ಮಂತ್ರಿ ಭಾಗ್ಯ ಸಿಕ್ಕಿತ್ತು. ಆದರೆ ಕುಮಟಳ್ಳಿಗೆ ಮಾತ್ರ ಕೋಕ್ ನೀಡಲಾಗಿತ್ತು.
ಸದ್ಯ ಈಗ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದು, ಇದೇ ವಿಚಾರವಾಗಿ ಮಾತನಾಡಿರುವ ಕುಮಟಳ್ಳಿ, ಗೆದ್ದ ಬಳಿಕ ನನಗೂ ಸಚಿವ ಸ್ಥಾನ ಸಿಗುತ್ತೆ ಅಂದುಕೊಂಡಿದ್ದೆ. ಆದರೆ ಇದುವರೆಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂಬುದು ನನಗೂ ಗೊತ್ತಿಲ್ಲ. ಸಚಿವ ಸ್ಥಾನ ನೀಡದ ಕುರಿತು ಸಾಕಷ್ಟು ಬಾರಿ ಪ್ರಶ್ನೆ ಕೇಳಿದ್ದೇನೆ. ಆದರೆ ಆ ಬಗ್ಗೆ ನನಗೆ ಇನ್ನು ಉತ್ತರ ಸಿಕ್ಕಿಲ್ಲ. ನಾನು ಮಾತ್ರ ಅಲ್ಲ ಮಾಧ್ಯಮದವರು ಸಾಕಷ್ಟು ಬಾರಿ ಪ್ರಶ್ನೆ ಕೇಳಿದಾಗಲೂ ಅವರ ಬಳಿ ಉತ್ತರ ಸಿಕ್ಕಿಲ್ಲ. ಜಟಿಲ ಸಮಸ್ಯೆ ಇದ್ದಾಗ ಒಬ್ಬರು ಸಮಾಧಾನ ಮಾಡಿಕೊಳ್ಳಬೇಕು. ಅದು ನಾನಾಗಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಮೂರನೇ ಬಾರಿಗೆ ಕತ್ತಿ ಕೈ ಹಿಡಿದ ಸಿಎಂ ಬಿಎಸ್ವೈ; ಶಾಸಕ ಉಮೇಶ್ ಕತ್ತಿಗೆ ಮಂತ್ರಿಗಿರಿ ಪಕ್ಕಾ?
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗಲೂ ನಾನು ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಗೆ ಬಂದ ಮೇಲೆ ವರಿಷ್ಠರಿಗೆ, ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ಸಚಿವ ಸ್ಥಾನಕ್ಕಾಗಿ ಹಠ ಮಾಡಿಲ್ಲ. ನಾನು ಕೂಡ ಮನುಷ್ಯ. ಸಚಿವ ಸ್ಥಾನದ ಆಕಾಂಕ್ಷಿ ಇದಿನಿ. ಈಗಾಗಲೇ ಸಚಿವ ಸ್ಥಾನ ನೀಡುವಂತೆ ಹೇಳಿದ್ದೇನೆ. ಉತ್ತರ ಬಂದಿಲ್ಲ. ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ಆದಾಗ ನಮ್ಮನ್ನು ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.
ಇನ್ನು ಎಂ.ಟಿ.ಬಿ ನಾಗರಾಜ, ಆರ್. ಶಂಕರ ಹಾಗೂ ಮುನಿರತ್ನ ಅವರಿಗೆ ಅಚಿವ ಸ್ಥಾನ ಸಿಗಲಿದೆ ಎಂದಿರುವ ಕುಮಟಳ್ಳಿ, ನಾವೆಲ್ಲರೂ ಶಾಸಕರಾಗಿ ಒಂದು ವರ್ಷ ಕಳೆದಿದೆ. ಆದರೆ ಅವರು ಈಗ ಶಾಸಕರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಸಾಕಷ್ಟು ಹಿಂಸೆ ಅನುಭವಿಸಿದ್ದಾರೆ. ಅವರೆಲ್ಲರಿಗೂ ಸಂಪುಟದಲ್ಲಿ ಸ್ಥಾನ ಸಿಗಬೇಕಾಗುತ್ತದೆ ಎಂದಿದ್ದಾರೆ.
ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಪರಮಾತ್ಮ ಶಾಸಕರು ಆಗಿರುವ ಮಹೇಶ ಸದ್ಯ ಸಚಿವರಾಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಮೇಶ್ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Published by:
HR Ramesh
First published:
January 12, 2021, 3:56 PM IST