HOME » NEWS » District » HUTARI FESTIVAL CELEBRATION IN MADIKERI RH RSK

ಕಾರ್ತಿಕ ಹುಣ್ಣಿಮೆ ಹುತ್ತರಿ ಸಂಭ್ರಮ; ಮಡಿಕೇರಿ ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ

ತೆಪ್ಪೋತ್ಸವದ ಬಳಿಕ ದೇವಾಲಯದ ಪಕ್ಕದಲ್ಲೇ ಇರುವ ದೇವಾಲಯದ ಗದ್ದೆಯಲ್ಲಿ ಹುತ್ತರಿಗೆ ಕದಿರು ಕೊಯ್ಯುವುದಕ್ಕಾಗಿ ಬೆಳೆದಿದ್ದ ಭತ್ತವನ್ನು ಪೂಜಿಸಿ ಕೊಯ್ಯಲಾಯಿತು. ಬಳಿಕ ದೇವಾಲಯಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಕದಿರು ವಿತರಣೆ ಮಾಡಲಾಯಿತು. ಕದಿರು ಪಡೆದ ಭಕ್ತರು ತಮ್ಮ ಮನೆಗಳಿಗೆ ಭಕ್ತಿ ಭಾವದಿಂದ ಕದಿರು ಪಡೆದು ಧಾನ್ಯ ಲಕ್ಷ್ಮಿ ತಮ್ಮ ಮನೆಗಳಲ್ಲಿ ತುಂಬಿ ತುಳುಕಲಿ ಎಂದು ಕೊಂಡೊಯ್ದರು.

news18-kannada
Updated:November 30, 2020, 9:58 PM IST
ಕಾರ್ತಿಕ ಹುಣ್ಣಿಮೆ ಹುತ್ತರಿ ಸಂಭ್ರಮ; ಮಡಿಕೇರಿ ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ
ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಲೋಕ ಕಾಯುವ ಈಶ್ವರನಿಗೆ ತೆಪ್ಪೋತ್ಸವ ಮಾಡಲಾಯಿತು.
  • Share this:
ಕೊಡಗು: ಕೊಡಗಿನ ಪಾಲಿಗೆ ಇಂದು ವಿಶೇಷ ದಿನ. ಒಂದೆಡೆ ಕಾರ್ತಿಕ ಹುಣ್ಣಿಮೆಯಾದರೆ ಮತ್ತೊಂದೆಡೆ ಕೊಡಗಿನ ರೈತರ ಸುಗ್ಗಿ ಹಬ್ಬವಾದ ಹುತ್ತರಿ ಹಬ್ಬ. ಹುತ್ತರಿ ಹಬ್ಬ ಮತ್ತು ಕಾರ್ತಿಕ ಹುಣ್ಣಿಮೆ ಅಂಗವಾಗಿ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಲೋಕ ಕಾಯುವ ಈಶ್ವರನಿಗೆ ತೆಪ್ಪೋತ್ಸವ ಮಾಡಲಾಯಿತು.

ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಪುಷ್ಪಾಲಂಕೃತ ತೆಪ್ಪದ ಮೇಲೆ ಬೆಳ್ಳಿ ಮೂರ್ತಿಯ ಮುಕ್ಕಣ್ಣನನ್ನು ಕೂರಿಸಿ ತೆಪ್ಪೋತ್ಸವ ಮಾಡಲಾಯಿತು. ಇದಕ್ಕೂ ಮೊದಲು ದೇವಾಲಯದಲ್ಲಿ ಜಗದ ಪಾಲಕನಿಗೆ ವಿವಿಧ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು. ಬಳಿಕ ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಆವರಣದಲ್ಲೇ ಉತ್ಸವ ಮಾಡಲಾಯಿತು. ನಂತರ ಅದೇ ಪಲ್ಲಕ್ಕಿಯಲ್ಲಿ ಈಶ್ವರನ್ನು ಕರೆತಂದು ತೆಪ್ಪದಲ್ಲಿ ಕೂರಿಸಿ ಕಲ್ಯಾಣಿಯಲ್ಲಿ ಉತ್ಸವ ಮಾಡಲಾಯಿತು. ಬೃಹತ್ ಕಲ್ಯಾಣಿಯಲ್ಲಿ ಮೂರು ಸುತ್ತು ತೆಪ್ಪೋತ್ಸವ ಮಾಡಲಾಯಿತು.

ಇದನ್ನು ಓದಿ: ಯಡಿಯೂರಪ್ಪ ಸರ್ವಸಮ್ಮತ ನಾಯಕ, ಮುಂದಿನ ಎರಡೂವರೆ ವರ್ಷ ಅವರೇ ಸಿಎಂ; ನಳಿನ್ ಕುಮಾರ್ ಕಟೀಲ್

ವರ್ಷಕ್ಕೊಮ್ಮೆ ನಡೆಯುವ ಈ ತೆಪ್ಪೋತ್ಸವಕ್ಕೆ ನೂರಾರು ಭಕ್ತರು ಆಗಮಿಸಿ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ತೆಪ್ಪೋತ್ಸವದ ಅಂಗವಾಗಿ ದೇವಾಲಯದ ಆವರಣ ಮತ್ತು ಕಲ್ಯಾಣಿ ಸುತ್ತಲೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
Youtube Video

ತೆಪ್ಪೋತ್ಸವದ ಬಳಿಕ ದೇವಾಲಯದ ಪಕ್ಕದಲ್ಲೇ ಇರುವ ದೇವಾಲಯದ ಗದ್ದೆಯಲ್ಲಿ ಹುತ್ತರಿಗೆ ಕದಿರು ಕೊಯ್ಯುವುದಕ್ಕಾಗಿ ಬೆಳೆದಿದ್ದ ಭತ್ತವನ್ನು ಪೂಜಿಸಿ ಕೊಯ್ಯಲಾಯಿತು. ಬಳಿಕ ದೇವಾಲಯಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಕದಿರು ವಿತರಣೆ ಮಾಡಲಾಯಿತು. ಕದಿರು ಪಡೆದ ಭಕ್ತರು ತಮ್ಮ ಮನೆಗಳಿಗೆ ಭಕ್ತಿ ಭಾವದಿಂದ ಕದಿರು ಪಡೆದು ಧಾನ್ಯ ಲಕ್ಷ್ಮಿ ತಮ್ಮ ಮನೆಗಳಲ್ಲಿ ತುಂಬಿ ತುಳುಕಲಿ ಎಂದು ಕೊಂಡೊಯ್ದರು.
Published by: HR Ramesh
First published: November 30, 2020, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories