ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದೇಳಿ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿದ ಗಂಡ : ಮುಂದೇನಾಯ್ತು ಗೊತ್ತಾ.?

ಸಾಯುವುದಕ್ಕೂ ಮುಂಚೆ ಸೀತಾಬಾಯಿ ಆನಂದ ಜಾಧವ ತನ್ನ ತಾಯಿಗೆ ಹೇಳಿದ ಮಾತು ಈಗ ಈ ಪ್ರಕರಣದ ನಿಜಾಂಶವನ್ನು ಬಿಚ್ಚಿಟ್ಟಿದೆ. ಈ ಕುರಿತು ತನಿಖೆ ಕೈಗೊಂಡ ಪೊಲೀಸರೂ ಕೂಡ ಇದರಿಂದ ಬೆಚ್ಚಿ ಬಿದ್ದಿದ್ದಾರೆ.

ಮೃತ ಮಹಿಳೆ ಸೀತಾಬಾಯಿ

ಮೃತ ಮಹಿಳೆ ಸೀತಾಬಾಯಿ

  • Share this:
ವಿಜಯಪುರ(ಆಗಸ್ಟ್​. 21): ಮಹಿಳೆಯೊಬ್ಬಳು ಕಿರುಚಾಡುತ್ತಿದ್ದುದನ್ನು ಕಂಡು ಪಕ್ಕದ ನಿವಾಸಿಗಳು ಓಡೋಡಿ ಬಂದಿದ್ದರು. ಸುದ್ದಿ ತಲುಪಿದ ಆಕೆಯ ಗಂಡ ಬಂದು ಸ್ಥಳೀಯರ ಸಹಾಯದೊಂದಿಗೆ ಬೆಂಕಿಯಲ್ಲಿ ಸುಟ್ಟ ಗಾಯಗಳೊಂದಿಗೆ ನರಳಾಡುತ್ತಿದ್ದ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಲಂಬಾಣಿ ತಾಂಡಾದಲ್ಲಿ. ಆಗಸ್ಟ್​ 9 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿತ್ತು. ಆದರೆ, ಆಗಸ್ಟ್​ 10 ರಂದು ಚಿಕಿತ್ಸೆ ಫಲಿಸದೇ ಸೀತಾಬಾಯಿ ಆನಂದ ಜಾಧವ ಕೊನೆಯುಸಿರೆಳೆದಿದ್ದಳು. ಆದರೆ, ಸೀತಾಬಾಯಿ ಆನಂದ ಜಾಧವ ಬೆಂಕಿಯಲ್ಲಿ ಬೇಯಲು ಕಾರಣ ಏನು ಎಂಬುದು ಈಗ ಪತ್ತೆಯಾಗಿದೆ.

ಸಾಯುವುದಕ್ಕೂ ಮುಂಚೆ ಸೀತಾಬಾಯಿ ಆನಂದ ಜಾಧವ ತನ್ನ ತಾಯಿಗೆ ಹೇಳಿದ ಮಾತು ಈಗ ಈ ಪ್ರಕರಣದ ನಿಜಾಂಶವನ್ನು ಬಿಚ್ಚಿಟ್ಟಿದೆ. ಈ ಕುರಿತು ತನಿಖೆ ಕೈಗೊಂಡ ಪೊಲೀಸರೂ ಕೂಡ ಇದರಿಂದ ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ಯಾರು ಈ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದರೋ ಅವರೆ ಇದರ ರೂವಾರಿಯಾಗಿದ್ದಾರೆ.

ಆಗಸ್ಟ್​ 9 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಘಟನೆ ನಡೆಯುವುದಕ್ಕೂ ಮುನ್ನ ಸೀತಾಬಾಯಿ ಆನಂದ ಜಾಧವ ಮತ್ತು ಆಕೆಯ ಗಂಡ ಆನಂದ ಜಾಧವಗೂ ಜಗಳವಾಗಿದೆ. ಸದಾ ಹೆಂಡತಿಯ ಶೀಲ ಶಂಕಿಸುತ್ತಿದ್ದ ಆನಂದ ಜಾಧವ ಆ ದಿನವೂ ಇದೇ ವಿಷಯವಿಟ್ಟುಕೊಂಡು ಜಗಳವಾಡಿದ್ದಾನೆ. ಆಗ ಸೀತಾಬಾಯಿ ಆನಂದ ಜಾಧವ ಹೀಗೆ ಕಿರುಕುಳ ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟಾದ ಆನಂದ ಜಾಧವ ಸಾಯಿಸುತ್ತೀಯಾ ನಾನೇ ಸಾಯಿಸ್ತೇನೆ ಎಂದು ಆಕೆಯ ಬಾಯಿಗೆ ಬಟ್ಟೆ ಹಾಕಿ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಅಲ್ಲಿಂದ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ : ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ ಬಾರ್ ಮತ್ತು ಕ್ಲಬ್​ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಸಾಧ್ಯತೆ..!

ಸೀತಾಬಾಯಿ ಆನಂದ ಜಾಧವ ಚೀರಾಟ ಕೇಳಿ ತಾಂಡಾದಲ್ಲಿದ್ದ ಅಲ್ಪಸ್ವಲ್ಪ ಜನ ಸೇರಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗ ಬಂದ ಗಂಡ ನನ್ನ ಹೆಂಡತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಿ ತಾಂಡಾದ ಜನರ ಸಹಾಯದಿಂದಲೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈಗ ನಿಜಾಂಶ ಗೊತ್ತಾದ ಬಳಿಕ ಈತನನ್ನು ಬಂಧಿಸಿರುವ ಕೂಡಗಿ ಎನ್ ಟಿ ಪಿ ಪಿ ಠಾಣೆಯ ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ ಎಂದು ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ.

ಗಂಡ ಕುಡುಕನಾಗಿದ್ದರೂ ಇರುವ ಇಬ್ಬರು ಮಕ್ಕಳಿಗಾಗಿ ಸೀತಾಬಾಯಿ ಆನಂದ ಜಾಧವ ಬದುಕುತ್ತಿದ್ದಳು. ಹಲವಾರು ಬಾರಿ ಕಿರುಕುಳ ನೀಡಿದ್ದರೂ ಅದನ್ನು ಸಹಿಸಿಕೊಂಡಿದ್ದಳು. ಸೀತಾಬಾಯಿ ಆನಂದ ಜಾಧವ ಸೀತೆಯಂತಿದ್ದರೂ ಗಂಡ ಆನಂದ ಮಾತ್ರ ಆಕೆಯ ಸಂತೋಷಕ್ಕೆ ಕಾರಣವಾಗುವ ಬದಲು ಆಕೆಯನ್ನೇ ಬಲಿ ತೆಗೆದುಕೊಂಡಿದ್ದು ಮಾತ್ರ ವಿಪರ್ಯಾಸವಾಗಿದೆ.
Published by:G Hareeshkumar
First published: