ಅತ್ತಿಗೆ-ಮೈದುನರ ನಡುವೆ ಅಕ್ರಮ ಸಂಬಂಧ; ರೋಸಿ ಹೋದ ಗಂಡನಿಂದ ಡಬ್ಬಲ್​ ಮರ್ಡರ್​

ಈ ಕೊಲೆಗೆ ಇಬ್ಬರ ನಡುವಿನ ದೈಹಿಕ ಸಂಬಂಧವೇ ಕಾರಣವಾಗಿದೆ.  ಇದನ್ನು ಆರೋಪಿ ಕೂಡ ತಮ್ಮೆದುರು ಹೇಳಿಕೊಂಡಿದ್ದಾನೆ.

ಕಣ್ಣೀರಾಕುತ್ತೀರುವ ಸಂಬಂಧಿಕರು

ಕಣ್ಣೀರಾಕುತ್ತೀರುವ ಸಂಬಂಧಿಕರು

  • Share this:
ವಿಜಯಪುರ, (ಜ. 06) ಇದು ನಾಲ್ಕಾರು ವರ್ಷದ ರೋಷ ಜ್ವಾಲಾಗ್ನಿಯಾಗಿ ಸ್ಪೋಟಗೊಂಡ ಕೊಲೆಯಲ್ಲಿ ಅಂತ್ಯವಾದ ಕಥೆ ಇದು.  ಹಿರಿಯರು ಕರೆದು ಬುದ್ದಿ ಹೇಳಿದರೂ ಸುಧಾರಿಸದ ಇಬ್ಬರು ರಾತ್ರೋ ರಾತ್ರಿ ಹೆಣವಾಗಿ ಹೋಗಿದ್ದಾರೆ.  ಇಲ್ಲಿ ಸಂಬಂಧಕ್ಕಿಂತ ಆಸೆಗಳೇ ಮುಖ್ಯವಾದ ಕಾರಣ ಇಬ್ಬರೂ ಹೆಣವಾಗಿದ್ದಾರೆ. ಹೀಗೆ ಭೀಕರವಾಗಿ ಹೊಲದಲ್ಲಿ ಹೆಣವಾಗಿ ಬಿದ್ದವರು ಅಕ್ಕಪಕ್ಕದ ಬಿದ್ದವರು ಅಕ್ಕಪಕ್ಕದ ತೋಟದ ಮನೆಯವರು.  ಮೇಲಾಗಿ ವರಸೆಯಲ್ಲಿ ಅತ್ತಿಗೆ-ಮೈದುನ.  ಮಾಡಬಾರದ ಕೆಲಸ ಮಾಡಿ ಹೀಗೆ ಹೊಲದಲ್ಲಿ ಹೆಣವಾಗಿ ಬಿದ್ದಿದ್ದಾರೆ.  ಈ ಘಟನೆ ನಡೆದಿದ್ದು ಜಿಲ್ಲೆಯ‌ ಇಂಡಿ‌ ತಾಲೂಕಿನ ಬಂಥನಾಳ ಗ್ರಾಮದಲ್ಲಿ. ಇಲ್ಲಿನ ಚಟ್ಟರಕಿ ರಸ್ತೆಯಲ್ಲಿ ಆಲಮೇಲ ಕುಟುಂಬಸ್ಥರ ತೋಟದ ಮನೆಗಳಿವೆ.  ಲಕ್ಷ್ಮಣ ಶಂಕ್ರೆಪ್ಪ ಆಲಮೇಲ ಮತ್ತು ರುದ್ರಪ್ಪ ಚನ್ನಬಸಪ್ಪ ಆಲಮೇಲ ವರಸೆಯಲ್ಲಿ ಒಂದೇ ಮನೆತನದ ಸಹೋದರರು.  ಆದರೆ, 40 ವರ್ಷದ ಲಕ್ಷ್ಮಣ ಶಂಕ್ರೆಪ್ಪ ಆಲಮೇಲ ನಿನ್ನೆ ರಾತ್ರಿ ಸುಮಾರು 11.30ರ ಸುಮಾರಿಗೆ ತನ್ನ ಚಿಕ್ಕಪ್ಪನ ಮಗ 34 ರುದ್ರಪ್ಪ ಚನ್ನಬಸಪ್ಪ ಆಲಮೇಲ ಮತ್ತು ತನ್ನ ಸ್ವಂತ ಪತ್ನಿ ಯನ್ನು ಕಬ್ಬು ಕತ್ತರಿಸಲು ಬಳಸುವ ಕೊಯ್ತಾ ಬಳಸಿ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. 

ನಂತರ ಬಂಥನಾಳ ಊರಿನ ಗೌಡರಾದ ಬಿ. ಡಿ. ಪಾಟೀಲ ಅವರಿಗೆ ರಾತ್ರಿ 12.45ಕ್ಕೆ ದೂರವಾಣಿ ಕರೆ ಮಾಡಿ ಇಬ್ಬರನ್ನು ತೆಗೆದಿದ್ದೇನೆ ಗೌಡ್ರೆ ಎಂದು ಹೇಳಿದ್ದಾನೆ.  ಏನು ಮಾಡಿದ್ದೀಯಾ ಎಂದು ಪ್ರಶ್ನಿಸಿದಾಗ ತನ್ನ ಹೆಂಡತಿ ಮತ್ತು ಆಕೆಯ ಜೊತೆಯಲ್ಲಿದ್ದ ರುದ್ರಪ್ಪ ಚನ್ನಬಸಪ್ಪ ಆಲಮೇಲ ನನ್ನು ಕೊಂದಿರುವುದಾಗಿ ತಿಳಿಸಿದ್ದಾನೆ.  ಆಗ ಗೌಡರು ಮೊಬೈಲ್ ಕರೆ ಕಟ್ ಮಾಡಿದ್ದಾರೆ.  ನಂತರ ಫೋನ್ ಮಾಡಲು ಅವರ ಮೊಬೈಲ್ ನಲ್ಲಿ ಕರೆನ್ಸಿ ಇರಲಿಲ್ಲ.  ಆಗ ಗುರು ಹತ್ತಳ್ಳಿ ಗೌಡರಿಗೆ ಕರೆ ಮಾಡಿ ಗೌಡರೆ ಲಕ್ಷ್ಮಣ ಶಂಕ್ರೆಪ್ಪ ಆಲಮೇಲ ಕರೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.  ಏನು ಮಾಡುವುದು ಎಂದು ಎಂದು ಕೇಳಿದ್ದಾರೆ.  ಆಗ, ಊರ ಗೌಡರು ನೀನೇ ಜನರಿಗೆ ಹೇಳು ಎಂದು ಹೇಳಿದರು.

ನಂತರ ಆರೋಪಿ ತನ್ನ ಅಣ್ಣನ ಮಗ ಸಂಗಪ್ಪ ಶಿವಪ್ಪ ಆಲಮೇಲ ಗೂ ಕರೆ ಮಾಡಿ ಎರಡು ಖಲಾಸ್ ಮಾಡಿದ್ದೇನೆ ಮಗನೇ ಬಾ ಎಂದು ಹೇಳಿದ್ದಾನೆ.  ಆಗ, ಆತ ಕೂಡ ಗೌಡರಿಗೆ ವಿಷಯ ತಿಳಿಸಿದ್ದಾನೆ.  ನಂತರ ಊರಿನ ಜನರೆಲ್ಲ ನಸುಕಿನ ಜಾವ 4ರ ಸುಮಾರಿಗೆ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರೂ ಜೋಡಿಯಾಗಿಯೇ ಬಿದ್ದಿದ್ದರು.  ನಂತರ ಆರೋಪಿಯನ್ನು ಹುಡುಕಿದರೂ ಸಿಗಲಿಲ್ಲ.  ಕೊಲೆ ಮಾಡಿದ ಬಳಿಕ ಆತ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ಬಿ. ಡಿ. ಪಾಟೀಲ ತಿಳಿಸಿದ್ದಾರೆ.

ಇದನ್ನು ಓದಿ: ಹಸುವಿನ ಬಗ್ಗೆ ಅರಿವು ಮೂಡಿಸಲು ಗೋ ವಿಜ್ಞಾನ ಪರೀಕ್ಷೆ ನಡೆಸಲು ಮುಂದಾದ ಸರ್ಕಾರ

ಈ ಕೊಲೆಗೆ ಇಬ್ಬರ ನಡುವಿನ ದೈಹಿಕ ಸಂಬಂಧವೇ ಕಾರಣವಾಗಿದೆ.  ಇದನ್ನು ಆರೋಪಿ ಕೂಡ ತಮ್ಮೆದುರು ಹೇಳಿಕೊಂಡಿದ್ದಾನೆ. ತನ್ನ ಪತ್ನಿ ಪ್ರತಿದಿನ ರಾತ್ರಿ 12ಕ್ಕೆ ಶೌಚಾಲಯಕ್ಕೆ ಹೋಗುತ್ತಿದ್ದಳು.  ಇದರಿಂದ ಆಕೆಯ ಪತಿ ರೋಸಿ ಹೋಗಿದ್ದ.  ಈ ಬಗ್ಗೆ ಹಿಂದೆ ರಾಜಿ ಪಂಚಾಯಿತಿ ಕೂಡ ನಡೆದಿತ್ತು.  ಇಬ್ಬರಿಗೂ ಬುದ್ದಿವಾದ ಕೂಡ ಹೇಳಲಾಗಿತ್ತು.  ಆದರೆ, ಅವರಿಬ್ಬರು ತಮ್ಮ ಛಾಳಿ ಮುಂದುವರೆಸಿರುವುದು ಆರೋಪಿಯ ಕೊಲೆ ಮಾಡಲು ಕಾರಣವಾಗಿದೆ.

ಪ್ರಕರಣ ಕುರಿತು ಪೊಲೀಸರು ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ.   ಇಂಡಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Published by:Seema R
First published: