ಶೀಲ ಶಂಕಿಸಿ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಂದ ಪತಿ; ಭೀಭತ್ಸ ಘಟನೆಗೆ ಬೆಚ್ಚಿದ ಹುಬ್ಬಳ್ಳಿ ಜನ

ಸೋಮವಾರ ಬೆಳಗಿನ ಜಾವ ಶಾರವ್ವ ಕುರ್ಡಿಕೇರಿಯನ್ನು ಆಕೆಯ ಗಂಡನೇ ನಡುರಸ್ತೆಯಲ್ಲಿ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಬಳಲಿದ ಶಾರವ್ವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ‌ ಎನ್ನಲಾಗಿದೆ.‌

news18
Updated:July 27, 2020, 3:54 PM IST
ಶೀಲ ಶಂಕಿಸಿ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಂದ ಪತಿ; ಭೀಭತ್ಸ ಘಟನೆಗೆ ಬೆಚ್ಚಿದ ಹುಬ್ಬಳ್ಳಿ ಜನ
ಸಾಂದರ್ಭಿಕ ಚಿತ್ರ
  • News18
  • Last Updated: July 27, 2020, 3:54 PM IST
  • Share this:
ಹುಬ್ಬಳ್ಳಿ; ಗಂಡಹೆಂಡಿರ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಇಲ್ಲಿ ಗಂಡ ಹೆಂಡಿರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಯ ನಡತೆಯನ್ನು ಶಂಕಿಸಿದ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ ಜೈಲು ಸೇರಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಗ್ರಾಮದಲ್ಲಿ ನಡೆದಿದೆ.

42 ವರ್ಷದ ಶಾರವ್ವ ಕುರ್ಡಿಕೇರಿ ಕೊಲೆಯಾಗಿರುವ ಮೃತದೈವಿ. ಇನ್ನೂ ಕೊಲೆ ಮಾಡಿರುವ ವ್ಯಕ್ತಿಯನ್ನು ಹನುಮಂತ ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಗಿನ ಜಾವ ಶಾರವ್ವ ಕುರ್ಡಿಕೇರಿಯನ್ನು ಆಕೆಯ ಗಂಡನೇ ನಡುರಸ್ತೆಯಲ್ಲಿ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಬಳಲಿದ ಶಾರವ್ವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ‌ ಎನ್ನಲಾಗಿದೆ.‌

ಹನ್ನೆರಡು ವರ್ಷಗಳ ಹಿಂದೆ ಸುಳ್ಳ ಗ್ರಾಮದ ಶಾರವ್ವಳನ್ನು ಬಂಡಿವಾಡ ಗ್ರಾಮದ ಹನುಮಂತ ಮದುವೆಯಾಗಿದ್ದ. ಮದುವೆಯಾದ ಕೆಲ ವರ್ಷಗಳು ಸಂಸಾರ ಚೆನ್ನಾಗಿಯೇ ನಡೆದಿತ್ತು. ಆದರೆ, ಹನುಮಂತ ತನ್ನ ಪತ್ನಿ ಶಾರವ್ವ ಮೇಲೆ ಅನುಮಾನ ‌ಮಾಡತೊಡಗಿದ. ಶೀಲ ಸಂಕಿಸಿ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಹೀಗಾಗಿ ಇಬ್ಬರ ನಡುವೆಯೂ ದಿನಂಪ್ರತಿ ಜಗಳ ನಡೆಯುತ್ತಲೇ ಇತ್ತು.

ಅನುಮಾನದ ಪಿಶಾಚಿ ತಲೆಗೇರಿ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ ಎನ್ನಲಾಗಿದೆ. ಕುಟುಂಬದ ಹಿರಿಯರು ಸಾಕಷ್ಟು ಬಾರಿ ರಾಜಿ‌ ಸಂಧಾನ ಮಾಡಿಸಿದ್ದರೂ ಸಂಧಾನ ವಿಫಲವಾಗಿ ಇವರಿಬ್ಬರ ಜಗಳ ಕೋರ್ಟ್ ಮೆಟ್ಟಿಲೇರಿತ್ತು. ಪತಿಯಿಂದ ದೂರವಿದ್ದ ಶಾರವ್ವ ಬಂಡಿವಾಡ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ನಂತರ ಡೈವರ್ಸ್‌ ಮತ್ತು ಜೀವನಾಂಶಕ್ಕಾಗಿ ಶಾರವ್ವಾ ಕೋರ್ಟ್ ಮೊರೆ ಹೋಗಿದ್ದಳು.

ಇದನ್ನೂ ಓದಿ : ಚೀನಾದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಭಾರತ ಸರ್ಕಾರ; ಕಾರಣವೇನು ಗೊತ್ತಾ?
ಇದರಿಂದ ಹನುಮಂತ ಕೆಂಡಾಮಂಡಲನಾಗಿದ್ದ. ಶಾರವ್ವ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಹೀಗಾಗಿ ಕೋರ್ಟ್ ತೀರ್ಪು ಬರುವ ಮುನ್ನವೇ ಇಂದು ಪತ್ನಿಯ‌ ಉಸಿರು ನಿಲ್ಲಿಸಿದ್ದಾನೆ. ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿ ಹನುಮಂತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. 
Published by: MAshok Kumar
First published: June 30, 2020, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading