HOME » NEWS » District » HUSBAND INTERESTED ON STEP DAUGHTER MOTHER MURDERED HER OWN DAUGHTER OF FIRST HUSBAND HK

ಎರಡನೇ ಗಂಡನ ಮಗಳ ಮೇಲೆ ಆಸೆ, ಮೊದಲ ಗಂಡನ ಮಗಳನ್ನೇ ಕೊಂದ ತಾಯಿ : ಮೈಸೂರಿನಲ್ಲೊಂದು ಅಮಾನವೀಯ ಘಟನೆ

ಅನುಮಾನದ ಮೇಲೆ ಪವಿತ್ರ , ಸೂರ್ಯ ಹಾಗೂ ಅವರ ತಾಯಿಯನ್ನ ವಿಚಾರಣೆ ಮಾಡದಾಗ ಮೂವರು ಸೇರಿ ಬಾಲಕಿಯನ್ನ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಇದೀಗ ಮೂವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ

news18-kannada
Updated:September 6, 2020, 5:03 PM IST
ಎರಡನೇ ಗಂಡನ ಮಗಳ ಮೇಲೆ ಆಸೆ, ಮೊದಲ ಗಂಡನ ಮಗಳನ್ನೇ ಕೊಂದ ತಾಯಿ : ಮೈಸೂರಿನಲ್ಲೊಂದು ಅಮಾನವೀಯ ಘಟನೆ
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಸೆಪ್ಟೆಂಬರ್​.06): ಆಕೆ ಏನೂ ಅರಿಯದ ಪುಟ್ಟ ಬಾಲಕಿ. ಕೇವಲ 6 ವರ್ಷದ ಮುದ್ದಾದ ಮಗು. ಆ ಪುಟಾಣಿಯನ್ನು ತನ್ನ ತಾಯಿಯೇ ಕೊಲೆ ಮಾಡಿಸಿದ್ದಾಳೆ. ಅಂತ್ಯ ಸಂಸ್ಕಾರವೂ ಮುಗಿದು ಹೋಗಿತ್ತು. ತಂದೆಯ ಅನುಮಾನದಿಂದಾಗಿ ಕೊಲೆ ಪ್ರಕರಣ ಪತ್ತೆಯಾಗಿದೆ. ಅದು ಸಹ ಎರಡನೇ ಗಂಡನಿಗೆ ಜನಿಸಿದ ಮಗಳ ಮೇಲಿನ ಪ್ರೀತಿಯಿಂದ ಮೊದಲ ಗಂಡನಿಗೆ ಜನಿಸಿದ ಮಗಳ ಮೇಲಿನ ದ್ವೇಷಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ಹೆಸರು ಜಯಲಕ್ಷ್ಮಿ. ಈಗಷ್ಟೇ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಶುರು ಮಾಡಬೇಕಿದ್ದ ಬಾಲಕಿ, ತಾಯಿ ಮತ್ತು ಅಜ್ಜಿಯಿಂದಲೇ ಕೊಲೆಯಾಗಿದ್ದಾಳೆ. 23 ವರ್ಷದ ತಾಯಿ ಪವಿತ್ರಾ, 55 ವರ್ಷದ ಅಜ್ಜಿ ಗೌರಮ್ಮ, 23 ವರ್ಷದ ಸೂರ್ಯ ಅಲಿಯಾಸ್ ಪಾಪು ಕೊಲೆ ಮಾಡಿದವರು. ಮೈಸೂರು ತಾಲೂಕಿನ ಶ್ಯಾದನಹಳ್ಳಿಯಲ್ಲಿ ಇಂತಹದ್ದೊಂದು ಅಮಾನವೀಯ ಕೃತ್ಯ ನಡೆದು ಹೋಗಿದೆ.

ಪವಿತ್ರಾ ಹಾಗೂ ಸಿದ್ದೇಶ ಎಂಬವರಿಗೆ 8 ವರ್ಷಗಳ ಹಿಂದೆ ಮದುವೆಯಾಗಿತ್ತು. ಗಂಡ ಬದುಕಿರುವಾಗಲೇ ಪವಿತ್ರಾ ಸೂರ್ಯನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ನಂತರ ಮೊದಲ ಗಂಡನನ್ನ ಬಿಟ್ಟ ಪವಿತ್ರ ಸೂರ್ಯನೊಂದಿಗೆ ಮದುವೆಯಾದಳು, ಇದಾದ ನಂತರ ಪವಿತ್ರಳಿಗೆ ಎರಡನೆ ಗಂಡನಿಗು ಹೆಣ್ಣುಮಗು ಜನಿಸಿತು. ಆ ಮಗುವಿಗೆ 3 ತಿಂಗಳು ಕಳೆದ ನಂತರ. ಮೊದಲ ಗಂಡನ ಮಗುವಿನ ಮೇಲೆ ದ್ವೇಷ ಹೆಚ್ಚಾಯಿತು. ಮೊದಲ ಗಂಡನ ಮಗು ಜೀವಂತವಾಗಿದ್ದರೆ ನಮ್ಮಿಬ್ಬರಿಗೂ ತೊಂದರೆ ಆಗುತ್ತೆ ಅಂತ ಅಂದಾಜಿಸಿದ್ದ ಪವಿತ್ರ ಹಾಗೂ ಸೂರ್ಯ, ಕೊಲೆ ಮಾಡುವ ಪ್ಲಾನ್ ಮಾಡಿದರು. ಇವರಿಬ್ಬರ ಪ್ಲ್ಯಾನ್​ಗೆ ಪವಿತ್ರಾ ತಾಯಿ ಗೌರಮ್ಮ ಕೂಡ ಸಾಥ್ ಕೊಟ್ಟಿದ್ದಾಳೆ. ಮೂವರೂ ಸೇರಿ ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ಕೊಲೆ ಮಾಡಿದ ಮರು ದಿನ ಆ ಮಗುವಿನ ಸಾವನ್ನ ಸಹಜ ಸಾವು ಅಂತ ಬಿಂಬಿಸುವುದರಲ್ಲಿ ಯಶಸ್ವಿಯಾಗಿದ್ದರು. ಆದರೆ, 6 ವರ್ಷದ ಮಗು ಇದ್ದಕ್ಕಿದ್ದಂತೆ ಸಾವನ್ನಪ್ಪುವುದು ಅಂದ್ರೆ ಸಹಜವಾಗಿಯೇ ಅನುಮಾನ ಮೂಡುತ್ತದೆ. ಆ ನಂತರ ಆದರೆ, ಬಾಲಕಿ ಜಯಲಕ್ಷ್ಮಿ ತಂದೆ ಸಿದ್ದೇಶ್​ಗೆ ಅನುಮಾನ ಹೆಚ್ಚಾದಾಗ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರು.

ಇದನ್ನೂ ಓದಿ : ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ : ಸಚಿವ ಭೈರತಿ ಬಸವರಾಜ್

ಅನುಮಾನದ ಮೇಲೆ ಪವಿತ್ರ ಸೂರ್ಯ ಹಾಗೂ ಅವರ ತಾಯಿಯನ್ನ ವಿಚಾರಣೆ ಮಾಡದಾಗ ಮೂವರು ಸೇರಿ ಬಾಲಕಿಯನ್ನ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಇದೀಗ ಮೂವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆದರೆ, ಎರಡನೆ ಗಂಡನಿಗೆ ಜನಿಸಿದ ಮಗಳ ಮೇಲಿನ ವ್ಯಾಮೋಹಕ್ಕೆ ಮೊದಲ ಗಂಡನಿಗೆ ಜನಿಸಿದ ಮಗಳನ್ನ ಹೆತ್ತ ತಾಯಿಯೇ ಕೊಂದಿದ್ದು ಮಾತ್ರ ವಿಪರ್ಯಾಸವೇ ಸರಿ.
Published by: G Hareeshkumar
First published: September 6, 2020, 4:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories