ರಾತ್ರಿ ದಂಪತಿ ಜಗಳ; ಬೆಳಗ್ಗೆ ಗಂಡ ಅನುಮಾನಾಸ್ಪದ ರೀತಿಯಲ್ಲಿ ಸಾವು

ಕ್ಷುಲ್ಲಕ ಕಾರಣಕ್ಕೆ ದಂಪತಿ ಮಧ್ಯೆ ಜಗಳವಾಗಿದ್ದು, ರಾತ್ರಿ ಹೆಂಡತಿ ತವರು ಮನೆಗೆ ಹೋದರೆ ಬೆಳಗ್ಗೆ ಪತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೆಂಡತಿ ಮನೆ ಕಡೆಯವರೇ ಕೊಲೆ ಮಾಡಿದ್ದಾರೆಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೊಡ್ಡಬಳ್ಳಾಪುರ: ರಾತ್ರಿ ಗಂಡ ಹೆಂಡತಿ ಜಗಳವಾಗಿದ್ದು, ಬೆಳಗ್ಗೆ ಗಂಡ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾತ್ರಿಯ ಜಗಳ ಅತಿರೇಕಕ್ಕೆ ಹೋದ ಕಾರಣ ಹೆಂಡತಿ ಮನೆಯವರು ರಾತ್ರಿಯೇ ಆಕೆಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದರು. ಬೆಳಗ್ಗೆ ಗಂಡ ಅನುಮಾನಾಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದೆ. ಕೆರೆಯಂಗಳದಲ್ಲಿನ ಹೊಂಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ದೊಡ್ಡಬೆಳವಂಗಲ ಹೋಬಳಿ ಮಧುರನಹೊಸಹಳ್ಳಿ ಗ್ರಾಮದ ಮಾರಪ್ಪ (38)  ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ವೇಳೆ ಗಂಡ ಹೆಂಡತಿ ನಡುವೆ ಕ್ಷುಲ್ಲಕ  ಕಾರಣಕ್ಕೆ ಜಗಳವಾಗಿದೆ. ರಾತ್ರಿಯೇ ಹೆಂಡತಿ ಮನೆಯವರು ತವರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಹೆಂಡತಿ ಎರಡನೇ ಮಗುವಿಗೆ ತುಂಬು ಗರ್ಭಿಣಿಯಾಗಿದ್ದಾಳೆ. ಬೆಳಗ್ಗೆ ಗಂಡ ಅನುಮಾನಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಹೆಂಡತಿ ಮನೆಯವರು ಹೊಡೆದು ಸಾಯಿಸಿದ್ದಾರೆಂಬ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಮಾನವ ಸರಪಳಿ ನಿರ್ಮಿಸಿದ ಕನ್ನಡಪರ ಹೋರಾಟಗಾರರು

ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಲು ಮಾರಪ್ಪನ ಮನೆಯವರು ಅಡ್ಡಿಪಡಿಸಿದ್ದಾರೆ. ಹೆಂಡತಿ ಮನೆಯವರೇ ಈ ಕೊಲೆ ಮಾಡಿರುವುದಾಗಿ ಆರೋಪ ಮಾಡಿದ್ದು, ಆರೋಪಿಗಳನ್ನ ಬಂಧಿಸುವಂತೆ ಆಗ್ರಹ ವ್ಯಕ್ತಪಡಿಸಿದ್ಧಾರೆ.

ಘಟನೆಯ ಸ್ಥಳಕ್ಕೆ ಹೆಂಡತಿ ಮನೆಯವರು ಬಾರದಿರುವುದು ಹಾಗೂ ಆಕೆಯ ನಡೆ ಕೂಡ ಅನುಮಾನ ಹುಟ್ಟಿಸುತ್ತದೆ. ಯಾರೇ ಆದರೂ ಗಂಡ ಅಥವಾ ಅಳಿಯ ಸತ್ತರೆ ಮುಖ‌ನೋಡುವುದಕ್ಕೂ ಬಂದಿಲ್ಲ ಅಂದರೆ ಇದರ ಹಿಂದೆ ದೊಡ್ಡ ಪಿತೂರಿ ಇದೆ ಎನಿಸುತ್ತದೆ ಎಂದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ, ಪೊಲೀಸರ ಮಧ್ಯಸ್ಥಿಕೆ ವಹಿಸುವ ಮೂಲಕ ಮರಣೋತ್ತರ ಪರೀಕ್ಷೆಗೆ ಅನುವು ಮಾಡಿಕೊಡಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಿಂದ ಮಾರಪ್ಪನ ಸಾವು ಕೊಲೆಯೋ ಆತ್ಮಹತ್ಯೆಯೋ ಎಂಬುದು ಗೊತ್ತಾಬಹುದು.

ವರದಿ: ನವೀನ್ ಕುಮಾರ್
Published by:Vijayasarthy SN
First published: