Hassan:ಪ್ರೀತಿಸಿ ಮದುವೆಯಾಗಿ 9 ವರ್ಷ ಸಂಸಾರ: ಎದೆಯತ್ತರದ ಮಗನಿದ್ರೂ ಸುಳ್ಳು ಹೇಳಿ ನಿಶ್ಚಿತಾರ್ಥ ಮಾಡ್ಕೊಂಡ!

9 ವರ್ಷಗಳ ಹಿಂದೆ ಕಾಲೇಜಿನಲ್ಲಿ ಲೋಹಿತ್ ಮತ್ತು ಅಕ್ಷತಾ ಭೇಟಿಯಾಗಿದ್ದರು.ಇಬ್ಬರ ಸ್ನೇಹಕ್ಕೆ ಪ್ರೇಮವಾಗಿ ಬದಲಾದಾಗ ಮದುವೆಯಾಗಿದ್ದರು. ಆದ್ರೆ ಅಕ್ಷತಾ ಜಾತಿ ಬೇರೆ ಎಂದು ಲೋಹಿತ್ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಅದ್ರೂ ಲೋಹಿತ್ ಪ್ರೀತಿಸಿದ ಅಕ್ಷತಾ ಕೈ ಹಿಡಿದಿದ್ದನು

ಪತಿ ಲೋಹಿತ್

ಪತಿ ಲೋಹಿತ್

  • Share this:
ಹಾಸನ: ಇಬ್ಬರು ಪ್ರೀತಿಸಿ (Love) ಮನೆಯವರ ವಿರೋಧದ ನಡುವೆಯೂ ಮದುವೆ (Marriage) ಯಾಗಿದ್ದರು. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮಗನಿದ್ದಾನೆ. ಒಂಬತ್ತು ವರ್ಷ ಸಂಸಾರ ಮಾಡಿದ ಗಂಡ ಈಗ ತನ್ನ ವರಸೆ ಬದಲಿಸಿದ್ದಾನೆ, ಪತ್ನಿಗೆ ತಿಳಿಯದೇ ಎರಡನೇ ಮದುವೆಗೆ (Second Marriage) ಸಿಧ್ದತೆ ನಡೆಸಿಕೊಂಡಿದ್ದಾನೆ. ಪತಿಯ ಎರಡನೇ ಮದುವೆ ವಿಷಯ ತಿಳಿದ ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರೀತಿಸಿ ಮದುವೆಯಾದ (Love Marriage) ಪತ್ನಿ (Wife) ಮತ್ತು ಎದೆಯತ್ತರದ ಮಗ(Son) ನಿದ್ದರೂ ವ್ಯಕ್ತಿಯೋರ್ವ ಸುಳ್ಳು ಹೇಳಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾನೆ. ಇದೀಗ ಪತ್ನಿ ಗಂಡ (Husband) ಮತ್ತು ಆತನ ಕುಟುಂಬಸ್ಥರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು (kunduru, Hassan) ಗ್ರಾಮದಲ್ಲಿ ಘಟನೆ ನಡೆದಿದೆ.

ಲೋಹಿತ್ ಎರಡನೇ ಮದುವೆಗೆ ಸಿದ್ಧನಾದ ಗಂಡ. 9 ವರ್ಷಗಳ ಹಿಂದೆ ಕಾಲೇಜಿನಲ್ಲಿ ಲೋಹಿತ್ ಮತ್ತು ಅಕ್ಷತಾ ಭೇಟಿಯಾಗಿದ್ದರು.ಇಬ್ಬರ ಸ್ನೇಹಕ್ಕೆ ಪ್ರೇಮವಾಗಿ ಬದಲಾದಾಗ ಮದುವೆಯಾಗಿದ್ದರು. ಆದ್ರೆ ಅಕ್ಷತಾ ಜಾತಿ ಬೇರೆ ಎಂದು ಲೋಹಿತ್ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಅದ್ರೂ ಲೋಹಿತ್ ಪ್ರೀತಿಸಿದ ಅಕ್ಷತಾ ಕೈ ಹಿಡಿದಿದ್ದನು

ದಕ್ಷಿಣ ಕನ್ನಡದ ಯುವತಿ ಜೊತೆ ನಿಶ್ಚಿತಾರ್ಥ

ಇದೀಗ ಮೊದಲ ಮದುವೆ ಮುಚ್ಚಿಟ್ಟು ಮತ್ತೊಂದು ಮದುವೆ ಆಗಲು ಎಂಗೇಜ್ಮೆಂಟ್ ಸಹ ಮಾಡಿಕೊಂಡಿದ್ದಾನೆ. ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ಎಂಗೇಜ್ಮೆಂಟ್ ಸಹ ಆಗಿದೆ. ಅಕ್ಷತಾ ಜಾತಿ ಬೇರೆ ಎಂಬ ಕಾರಣಕ್ಕೆ ಮಗನಿಗೆ ಪೋಷಕರು ಮದುವೆ ಮಾಡಲು ಮುಂದಾಗಿದ್ದಾರೆ. ಪೋಷಕರ ಮಾತಿನಂತೆ ಲೋಹಿತ್ ಸಹ ಯುವತಿ ಮುಂದೆ ಸುಳ್ಳು ಹೇಳಿದ್ದಾನೆ.

ಇದನ್ನೂ ಓದಿ:  Crime News: ಮೊಮ್ಮಕ್ಕಳು ಆಡಿಸುವ ವಯಸ್ಸಲ್ಲಿ ಎರಡನೇ ಮದುವೆ; ಆಸ್ತಿ ವಿಚಾರದಲ್ಲಿ ಜಗಳ, ತಂದೆಯನ್ನೇ ಕೊಂದ ಮಕ್ಕಳು!

ದೂರು ದಾಖಲಿಸಿದ ಅಕ್ಷತಾ

ಅನ್ಯ ಜಾತಿಯ ಹುಡುಗಿ ಎನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ, ತಾಯಿ ಜಯಶೀಲಾರಿಂದ‌ ಕಿರುಕುಳ ಆರೋಪ ಮಾಡಿದ್ದಾರೆ. ಈಗ ತನ್ನಿಂದ ಗಂಡನನ್ನು ದೂರ ಮಾಡಿ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿದ್ದಾರೆ  ಮಾವ ಮಲ್ಲಿಕಾರ್ಜುನ , ಅತ್ತೆ ಜಯಶೀಲ, ಮೈದುನ ದರ್ಶನ್ ಹಾಗೂ ಪತಿ ವಿರುದ್ದ ಅಕ್ಷತಾ ದೂರು ದಾಖಲಿಸಿದ್ದಾರೆ.

ಸುಳ್ಳು ಹೇಳಿ ಹುಡುಗಿಯನ್ನು ನಂಬಿಸಿರುವ ಬಗ್ಗೆ ಆಡಿಯೋ ಸಾಕ್ಷಿ ಇಟ್ಟುಕೊಂಡು ಅಕ್ಷತಾ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ವಂಚಕ ಪತಿ ಹಾಗೂ ಆತನ ಕುಟುಂಬಸ್ಥರಿಂದ ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎರಡನೇ ಮದುವೆ ಮುಚ್ಚಿಡಲು ಮಗಳನ್ನೇ ಕೊಂದ ತಂದೆ

ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರೆ. ಆದರೆ, ಇಲ್ಲೊಬ್ಬ ತಂದೆ ಎರಡೂವರೆ ವರ್ಷದ ತನ್ನ ಹೆತ್ತ ಮಗಳನ್ನೇ ಕೊಲೆ ಮಾಡಿ ಪೈಶಾಚಿಕ ಕೃತ್ಯ ಮೆರೆದಿದ್ದಾನೆ. ಗ್ರಾಮ ಪಂಚಾಯತ್ ಚುನಾವಣೆ ನಿಲ್ಲಲು ಎರಡನೇ ಹೆಂಡತಿ ಮಗು ಅಡ್ಡಿಯಾಗುತ್ತದೆ ಎಂದು ಈ ಕೃತ್ಯ ಎಸಗಿದ್ದನು.

ಇದನ್ನೂ ಓದಿ:  ಗ್ರಾಮ ಪಂಚಾಯತ್​​ಗೆ ಹೆಂಡತಿ ಅವಿರೋಧ ಆಯ್ಕೆಯ ಬೆನ್ನಲ್ಲೇ ಗಂಡ ನೇಣಿಗೆ ಶರಣು

ಆರೋಪಿ ತಂದೆ ಗುಡ್ಡದಲ್ಲಿ ಹೂತಿಟ್ಟ ಶವ ಹೊರತೆಗೆದ ಪೊಲೀಸರು ಕೊಲೆ ಪ್ರಕರಣ ಭೇದಿಸಿದ್ದಾರೆ. ಜಗಳೂರು ತಾಲೂಕಿನ ಗುತ್ತಿದುರ್ಗದ 36 ವರ್ಷದ ನಿಂಗಪ್ಪ ತನ್ನ ಎರಡನೇ ಹೆಂಡತಿ ಶಶಿಕಲಾಗೆ ಜನಿಸಿದ ಎರಡು ವರ್ಷದ ಹೆಣ್ಣು‌ಮಗುವನ್ನು ಹತ್ಯೆ ಮಾಡಿದ್ದಾನೆ.‌ ತನ್ನ ಹುಟ್ಟೂರು ಗುತ್ತಿದುರ್ಗದ ಗೋಮಾಳ ಜಮೀನಿನಲ್ಲಿ ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕರ್ಚಿಪ್ ನಿಂದ ಉಸಿರುಗಟ್ಟಿಸಿ ಸಾಯಿಸಿ ಮಣ್ಣಲ್ಲಿ ಹೂತಿಟ್ಟಿದ್ದನು.

ಸೆಪ್ಟಂಬರ್ 9 ರಂದು ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಂಡತಿ ಶಶಿಕಲಾ ತನ್ನ ಗಂಡನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಳು.‌ ಪ್ರಕರಣದ ಜಾಡು ಹಿಡಿದ ಪೊಲೀಸರು ನಿಂಗಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬರುತ್ತದೆ.
Published by:Mahmadrafik K
First published: