HOME » NEWS » District » HUSBAND CHEAT PREGNANT WIFE BY MARRY ANOTHER WOMAN NMPG KVD

ನನ್ನ ಗಂಡ ನನಗೆ ಬೇಕ್ರಿ.. ಗರ್ಭಿಣಿ ಹೆಂಡತಿಯನ್ನು ಬಿಟ್ಟು 2ನೇ ಮದುವೆಯಾದ ಭೂಪ!

ತಾನು 8 ತಿಂಗಳ ಗರ್ಭಿಣಿಯಾಗಿದ್ದು ನನ್ನ ಜೊತೆ ಇರಬೇಕಾದ ಪತಿ ವಿರೇಶ ಈಗ ಎರಡನೇ ವಿವಾಹವಾಗಿದ್ದಾನೆ. ನನಗೆ ಮೋಸ ಮಾಡಿದ್ದಾನೆ. ನನ್ನ ಪತಿ ನನಗೆ ‌ಬೇಕೆಂದು ಅಕ್ಷತಾ ನೋವು ತೊಡಿಕೊಂಡಿದ್ದಾರೆ. 

news18-kannada
Updated:June 24, 2021, 8:36 PM IST
ನನ್ನ ಗಂಡ ನನಗೆ ಬೇಕ್ರಿ.. ಗರ್ಭಿಣಿ ಹೆಂಡತಿಯನ್ನು ಬಿಟ್ಟು 2ನೇ ಮದುವೆಯಾದ ಭೂಪ!
ನೊಂದ ಮಹಿಳೆ ಹಾಗೂ ಆಕೆಯ ಪೋಷಕರು
  • Share this:
ಯಾದಗಿರಿ : ಮತ್ತೊಂದು ಮದುವೆ ಆಗುವ ಮೂಲಕ ಗರ್ಭಿಣಿ ಪತ್ನಿಗೆ ಪತಿ ಮೋಸ ಮಾಡಿರುವ ಘಟನೆ ಸುರಪುರ ತಾಲೂಕಿನ ಹದನೂರು ಗ್ರಾಮದಲ್ಲಿ ನಡೆದಿದೆ. ಕಂದನ ನಿರೀಕ್ಷೆಯಲ್ಲಿದ್ದ ಹೆಂಡತಿಯನ್ನು ನೋಡಿಕೊಳ್ಳಬೇಕಿದ್ದ ಗಂಡ ಮತ್ತೊಂದು ಹೆಣ್ಣಿನ ಹಿಂದೆ ಹೋಗಿದ್ದಾನೆ. ಹೆಂಡತಿ ಇರುವಾಗಲೇ 2ನೇ ಮದುವೆಯಾಗುವ ಮೂಲಕ ವಂಚಿಸಿದ್ದಾನೆ. ಈಗ ಗಂಡನಿಗಾಗಿ ಗರ್ಭಿಣಿ ಹೆಂಡತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ. ನನಗೆ ನನ್ನ ಗಂಡ ಬೇಕೆಂದು ಠಾಣೆಗೆ, ಎಸ್​ಪಿ ಕಚೇರಿಗೆ ಗರ್ಭಿಣಿ ಅಲೆದಾಡುತ್ತಿದ್ದಾಳೆ.

ಮೂರು ವರ್ಷದ ಹಿಂದೆ ಸುರಪುರ ತಾಲೂಕಿನ ಕರಡಕಲ್ ಗ್ರಾಮದ ನಿವಾಸಿ ವಿರೇಶ ಜೊತೆ ಹದನೂರು ಗ್ರಾಮದ ಅಕ್ಷತಾ ವಿವಾಹ ನಡೆದಿತ್ತು. ಕೂಲಿ ಕೆಲಸ ಮಾಡಿ ಬದುಕು ನಡೆಸುತ್ತಿದ್ದ ವಿರೇಶ ಮೊದಮೊದಲು ಪತ್ನಿಯನ್ನು ಚೆನ್ನಾಗಿ ನೋಡಿಕೊಂಡಿದ್ದನು. ಆದರೆ ವರ್ಷದ ನಂತರ ಪತ್ನಿಗೆ ಕಿರುಕುಳ ಕೊಟ್ಟಿದ್ದಾನೆ. ಅಲ್ಲದೇ ಪತಿರಾಯ ವಿರೇಶ ಹಾಗೂ ಆತನ ಕುಟುಂಬಸ್ಥರ ಅಕ್ಷತಾಗೆ ಹಲ್ಲೆ ಮಾಡಿ, ಮಾನಸಿಕವಾಗಿ ಕಿರುಕುಳ ನೀಡಿದ್ದರಂತೆ. ಈ ಬಗ್ಗೆ ಕೆಂಭಾವಿ ಪೊಲೀಸ ಠಾಣೆಯಲ್ಲಿ ಕೂಡ ದೂರು ನೀಡಲಾಗಿದೆ. ಅಕ್ಷತಾ ಪತಿ ವಿರೇಶ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾಳೆ‌. ಆದರೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಕ್ಷತಾ ಆರೋಪಿಸುತ್ತಿದ್ದಾರೆ.

ತಾನು 8 ತಿಂಗಳ ಗರ್ಭಿಣಿಯಾಗಿದ್ದು ನನ್ನ ಜೊತೆ ಇರಬೇಕಾದ ಪತಿ ವಿರೇಶ ಈಗ ಎರಡನೇ ವಿವಾಹವಾಗಿದ್ದಾನೆ. ನನಗೆ ಮೋಸ ಮಾಡಿದ್ದಾನೆ. ನನ್ನ ಪತಿ ನನಗೆ ‌ಬೇಕೆಂದು ಅಕ್ಷತಾ ನೋವು ತೊಡಿಕೊಂಡಿದ್ದಾರೆ. ನನಗೆ ನ್ಯಾಯ ಸಿಗಬೇಕೆಂದು ತಮ್ಮ ಪೋಷಕರ ಜೊತೆ ಅಲೆದಾಡುತ್ತಿದ್ದಾಳೆ. ತಾಯಿ ಭಾಗಮ್ಮ ಜೊತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಅಲೆದಾಡುತ್ತಿದ್ದೇವೆ‌. ವಿರೇಶ ಈಗ ಗರ್ಭಿಣಿ ಹೆಂಡತಿಯನ್ನು ಬಿಟ್ಟು ಮತ್ತೊಂದು ವಿವಾಹವಾಗಿದ್ದಾನಂತೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ನೊಂದ ಮಹಿಳೆಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 24, 2021, 8:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories