ಗದಗ; ಗದಗ ಜಿಲ್ಲೆಯಲ್ಲಿ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು 17 ವರ್ಷಗಳ ಬಳಿಕ ಬಂಧಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ, 17 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಭಯಾನಕ ಆರೋಪಿ ಕೈಗೆ ಕೊನೆಗೂ ಗದಗ ಪೊಲೀಸರು ಕೋಳ ತೊಡಿಸಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅಂಕಲಿ ಗ್ರಾಮದಲ್ಲಿ 2004 ಡಿಸೆಂಬರ್ 16 ರಂದು ವೀರಯ್ಯ ಹಿರೇಮಠ ಎನ್ನುವಾತ ತನ್ನ ಪತ್ನಿ ಈರಮ್ಮಳನ್ನು ಭೀಕರವಾಗಿ ಕೊಲೆ ಮಾಡಿದ್ದ. ಪತ್ನಿಯ ಈರಮ್ಮಳ ಶೀಲ ಶಂಕಿಸಿ ಆಕೆಯ್ನು ಅಂಕಲಿ ಗ್ರಾಮದ ಬಳಿಯಿರುವ ಹಳ್ಳಕ್ಕೆ ಕರೆದುಕೊಂಡು ಹೋಗಿ ಕಟ್ಟಿಗೆ ಕಡಿಯುವ ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿ, ಹಾಕಿದ್ದ. ಬಳಿಕ ಆರೋಪಿ ಪರಾರಿಯಾಗಿದ್ದ. ಮನೆಯವರು ಅಳಿಯ ಹಾಗೂ ಮಗಳು ಯಾವುದೊ ಊರಿಗೆ ಹೋಗಿರಬಹುದು ಎಂದು ಸುಮ್ಮನಾಗಿದ್ರು. ಆದರೆ ಹತ್ಯೆಯಾದ ಒಂಬತ್ತು ದಿನಗಳ ನಂತರ ಹಳ್ಳದಲ್ಲಿ ತುಂಡು ತುಂಡಾದ ದೇಹವನ್ನು ನೋಡಿ ಇದು ಈರಮ್ಮಳ ಶವ ಅಂತಾ ಪತ್ತೆಯಾಗಿದೆ. ಆಗ ಲಕ್ಷ್ಮೇಶ್ವರ ಪೊಲೀಸ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆದರೆ ಎಷ್ಟೇ ಹುಡುಕಿದರೂ ಕೊಲೆ ಆರೋಪಿ ವೀರಯ್ಯ ಮಾತ್ರ ಪತ್ತೆಯಾಗಿರಲಿಲ್ಲ. ಈಗ ಲಕ್ಷ್ಮೇಶ್ವರ ಪೊಲೀಸರು ಚಾಣಾಕ್ಷತನದಿಂದ ಪ್ರಕರಣವನ್ನು ಭೇದಿಸಿದ್ದಾರೆ.
ಇದನ್ನು ಓದಿ: ಭಾರತ-ಶ್ರೀಲಂಕಾ ಸಂಬಂಧ ಸುಧಾರಣೆಗೆ ಮತ್ತೆ ಅಡ್ಡಿ..! ಹಿಂದೂ ಮಹಾಸಾಗರದಲ್ಲಿ ಚೀನಾದಿಂದ ಕೊಳಕು ರಾಜಕೀಯ?
ಕೊಲೆಯಾದ ಈರಮ್ಮಳ ತಂದೆ ಪಕ್ಕಿರಯ್ಯ ಹಾಗೂ ತಾಯಿ ನೀಲಮ್ಮಳಿಗೆ ಒಬ್ಬಳೇ ಮಗಳು. ವೀರಯ್ಯ ಹಿರೇಮಠ ಕೂಡಾ ಸಂಬಂಧಿ. ಹೀಗಾಗಿ ಗಂಡು ಮಕ್ಕಳು ಇಲ್ಲವೆಂದು ವೀರಯ್ಯನಿಗೆ 10 ವರ್ಷ ಇದ್ದಾಗಲೇ ಮನೆಯಲ್ಲಿ ಇಟ್ಟುಕೊಂಡು ಬೆಳೆಸಿ ದೊಡ್ಡವನನ್ನಾಗಿ ಮಾಡಿ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು. ಮದುವೆಯಾದ ಮೇಲೆ ಒಂದೂವರೆ ವರ್ಷ ಚನ್ನಾಗಿದ್ದರು. ಒಂದು ಮಗು ಕೂಡ ಇತ್ತು. ಆದರೆ ಅದು ಹುಟ್ಟಿದ ಮೇಲೆ ಸಾವನ್ನಪ್ಪಿತು. ನಂತರ ಮೂರು ತಿಂಗಳ ಗರ್ಭಿಣಿಯಾಗಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ