ಮದುವೆಯ ಬಳಿಕವೂ ಹಳೆ ಪ್ರೇಮಿಗಳ ಸರಸ.. ಗಂಡ-ತಂದೆಯ ಕೋಪಾಗ್ನಿಯಲ್ಲಿ ಬೆಂದ ಪ್ರಿಯಕರ!

ಮದುವೆಯಾದರೂ ಪ್ರಿಯಕರನನ್ನು ಬಿಡದ ಪತ್ನಿಯ ಅನೈತಿಕತೆ ಬಗ್ಗೆ ಆಕೆಯ ಗಂಡ ಅಜೀತ್ ತನ್ನ ಮಾವ ಅಂದ್ರೆ ಬಾಲಕಿಯ ತಂದೆಗೆ ತಿಳಿಸುತ್ತಾನೆ. ಅವರೂ ಸಹ ಬುದ್ದಿವಾದ ಹೇಳಿದರೂ ಇಬ್ಬರೂ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಯಾವೂದಕ್ಕೂ ಕೇರ್ ಮಾಡದೆ ಪ್ರೀತಿ, ಪ್ರೇಮ, ಪ್ರಣಯವನ್ನು ಮುಂದುವರೆಸಿದ್ದರು.

ಕೊಲೆಯಾದ ಅರವಿಂದ ದ್ಯಾಪೂರ

ಕೊಲೆಯಾದ ಅರವಿಂದ ದ್ಯಾಪೂರ

 • Share this:
  ವಿಜಯಪುರ : ಆತ ಸರ್ಕಾರಿ‌ ನೌಕರಿ ಪಡೆಯಬೇಕು ಎಂದು ಕನಸು ಕಂಡಿದ್ದ. ಆದರೆ ಪ್ರೀತಿ ಅನ್ನೋ ಮಾಯೆಗೆ ಬಿದ್ದು ಇದೀಗ ಬೀದಿ ಹೆಣವಾಗಿದ್ದಾನೆ. ಚಡಚಣ ಪಟ್ಟಣದಲ್ಲಿ ಪಾಳುಬಿದ್ದ ಮನೆಯೊಂದರಲ್ಲಿ ಜುಲೈ 15 ರಂದು ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ ಗುರುತು ಸಿಗಬಾರದು ಎಂದು ಶವವನ್ನು ಸೀಮೆಎಣ್ಣೆ ಹಾಕಿ ಸುಟ್ಟು ಹಾಕಲಾಗಿತ್ತು. ಓದೋಕೆ ಬಂದು ಹುಡುಗಿ ಲವ್ವಲ್ಲಿ ಬಿದ್ದು ಕೊಲೆಯಾಗಿದ್ದಾರೆ. ಕೊಲೆಯಾದ ಯುವಕ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ 23 ವರ್ಷದ ಅರವಿಂದ ದ್ಯಾಪೂರ.

  ಕೊಲೆಯ ಹಿಂದಿನ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಇದರ ಹಿಂದೆ ಇರುವ ಪ್ರೇಮ್ ಕಹಾನಿ ಗೊತ್ತಾಗಿತ್ತು. ಬೋರಗಿಯ ಅರವಿಂದ ಪದವೀಧರನಾಗಿದ್ದು, ಕಳೆದ ವರ್ಷ ಲಾಕಡೌನ್ ಗೂ ಮೊದಲು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆಂದು ಇಂಡಿ ಪಟ್ಟಣದಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದ. ಈ ಸಂದರ್ಭದಲ್ಲಿ ಪಕ್ಕದ ಮನೆಯ ಅಪ್ರಾಪ್ತ ಹುಡುಗಿಯೊಬ್ಬಳ ಪರಿಚಯವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತ್ತು.

  ವಿಷಯ ತಿಳಿದ ಹುಡುಗಿಯ ತಂದೆ ವಿಕ್ರಮ ಕಾಟಕರ ಸೇರಿದಂತೆ ಅವರ ಮನೆಯವರು ಅರವಿಂದನಿಗೆ ಬುದ್ದಿವಾದ  ಹೇಳಿದ್ರು. ಇದೆಲ್ಲ ಬಿಟ್ಟು ನಿನ್ನ ಪಾಡಿಗೆ ಇದ್ದು ಬಿಡು ಎಂದು ಎಚ್ಚರಿಕೆ ನೀಡಿದ್ದರು. ಜೊತೆಗೆ ಅಪ್ರಾಪ್ತ ಯುವತಿಯನ್ನು ಆತನಿಂದ ದೂರ ಮಾಡುವ ಉದ್ದೇಶದಿಂದ ಇತ್ತೀಚೆಗಷ್ಟೆ ಬೇರೊಬ್ಬ ಯುವಕನಿಗೆ ಕೊಟ್ಟು ಮದುವೆಯನ್ನೂ ಮಾಡಿದ್ರು. ಆದ್ರೂ ಸಹ ಅರವಿಂದ ಹಾಗೂ ಹುಡುಗಿಯ ಪ್ರೀತಿ, ಪ್ರಣಯದಾಟ ಮಾತ್ರ ನಿಂತಿರಲಿಲ್ಲ. ಇದರಿಂದ ರೋಸಿಹೋಗಿದ್ದ ಆಕೆಯ ಕುಟಂಬಸ್ಥರು ಹೇಗಾದ್ರು ಮಾಡಿ ಇದಕ್ಕೆ ಅಂತ್ಯ ಹಾಡಬೇಕು ಎಂದು ನಿರ್ಧರಿಸಿದರು. ಹಾಗಾಗಿ ಪ್ಲಾನ್ ಮಾಡಿ ಅಪ್ರಾಪ್ತ ಬಾಲಕಿಯ ಗಂಡ ಅಜೀತ ಹಾಗೂ ತಂದೆ ವಿಕ್ರಮ ಸೇರಿ ಅರವಿಂದನನ್ನು ಮುಗಿಸಿಬಿಟ್ಟರು.

  ಇದನ್ನೂ ಓದಿ: ಬೆಂಗಳೂರಿಂದ ಕೇರಳಕ್ಕೆ ಹೊರಟ್ಟಿದ್ದ ಸರ್ಕಾರಿ ಬಸ್ ಅಪಘಾತ: ಚಾಲಕ ಸಾವು, 15 ಮಂದಿಗೆ ಗಾಯ

  ಮದುವೆಯಾದರೂ ಪ್ರಿಯಕರನನ್ನು ಬಿಡದ ಪತ್ನಿಯ ಅನೈತಿಕತೆ ಬಗ್ಗೆ ಆಕೆಯ ಗಂಡ ಅಜೀತ್ ತನ್ನ ಮಾವ ಅಂದ್ರೆ ಬಾಲಕಿಯ ತಂದೆ ವಿಕ್ರಮಗೆ ತಿಳಿಸುತ್ತಾನೆ. ಅವರೂ ಸಹ ಬುದ್ದಿವಾದ ಹೇಳಿದರೂ ಇಬ್ಬರೂ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಯಾವೂದಕ್ಕೂ ಕೇರ್ ಮಾಡದೆ ಪ್ರೀತಿ, ಪ್ರೇಮ, ಪ್ರಣಯವನ್ನು ಮುಂದುವರೆಸಿದ್ದರು. ಇದರಿಂದ ಕೋಪಗೊಂಡು ಗಂಡ ಹಾಗೂ ತಂದೆ ಇಬ್ಬರೂ ಸೇರಿ  ಕೊಲೆ ಮಾಡುವ ಪ್ಲಾನ್ ಮಾಡುತ್ತಾರೆ. ಅದರಂತೆ ಜುಲೈ 10ರಂದು ಅರವಿಂದನಿಗೆ ಅಪ್ರಾಪ್ತೆ ಪ್ರಿಯತಮೆಯಿಂದಲೇ ಫೋನ್ ಮಾಡಿಸಿ ಚಡಚಣಕ್ಕೆ ಬರುವಂತೆ ತಿಳಿಸುತ್ತಾರೆ. ಅದರಂತೆ ಪ್ರಿಯತಮೆ ಕರೆ ಮಾಡಿದ ತಕ್ಷಣ ಅರವಿಂದ ಹಿಂದೆ ಮುಂದೆ ಯೋಚನೆ ಮಾಡದೆ ಚಡಚಣ ಹೊರವಲಯದ ಪಾಳು ಬಿದ್ದಿರುವ ಆಶ್ರಯ ಮನೆಗಳ ಬಳಿ ಬರುತ್ತಾನೆ.

  ಈ ವೇಳೆ ಮೊದಲೇ ಸಿದ್ಧವಾಗಿದ್ದ ಬಾಲಕಿಯ ಗಂಡ ಅಜೀತ ಹಾಗೂ ತಂದೆ ವಿಕ್ರಮ ಸೇರಿ ಅರವಿಂದನ ಮೇಲೆ ಎಗರಿ ಚಾಕುವಿನಿಂದ ಚುಚ್ಚಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡುತ್ತಾರೆ. ಬಳಿಕ ಶವದ ಗುರುತು ಸಿಗಬಾರದು ಎಂದು ಸೀಮೆಎಣ್ಣೆ ಹಾಕಿ ಅರ್ಧಂಬರ್ಧ ಸುಟ್ಟು ಪರಾರಿಯಾಗುತ್ತಾರೆ. ಗುರುತು ಸಿಗದ ಶವದ ತಿನಿಖೆಯ ಬೆನ್ನುಬಿದ್ದ ಚಡಚಣ ಠಾಣೆ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ.

  ಪ್ರಿಯಕರನಿಗೆ ಕರೆ ಮಾಡಿ ಕರೆಯಿಸಿದ್ದ ಪ್ರಿಯತಮೆ ಅಪ್ರಾಪ್ತೆಯಾದ ಕಾರಣ ಸಾಂತ್ವನ ಕೇಂದ್ರಕ್ಕೆ ಕಳಿಹಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಬೇಕಿದ್ದ ಅರವಿಂದ ಆತುರಕ್ಕೆ ಬಿದ್ದು ಅಪ್ರಾಪ್ತೆಯ ಪ್ರೇಮ ಪರೀಕ್ಷೆಯಲ್ಲಿ ಪಾಸಾಗಿದ್ದ. ಲಾಕಡೌನ್ ವೇಳೆ ಬೆಳೆದ ಸಲುಗೆ ಪ್ರೇಮಕ್ಕೆ ತಿರುಗಿ ಇದೀಗ ಅನಲಾಕ್ ವೇಳೆ ಜೀವನದ ದುರಂತ ಅಂತ್ಯಕ್ಕೆ ತಲುಪಿದ್ದು ಮಾತ್ರ ವಿಪರ್ಯಾಸವೇ ಸರಿ.

  ವರದಿ: ಗುರು
  Published by:Kavya V
  First published: