HOME » NEWS » District » HUNDREDS OF VILLAGERS RALLIES BEHIND A YOUNG CANDIDATE DURING FILING OF NOMINATION NKCKB SNVS

ಎಂಎಲ್ಎ ರೇಂಜಿಗೆ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಯುವ ರೈತ

ಗ್ರಾಮ ಪಂಚಾಯ್ತಿ ಚುನಾವಣೆಯನ್ನ ಈ ಬಾರಿ ಎಲ್ಲಾ ಪಕ್ಷಗಳು ಪ್ರತಿಷ್ಟೆಯಾಗಿ ತೆಗೆದುಕೊಂಡಿವೆ. ದೊಡ್ಡಬಳ್ಳಾಪುರದ ಯುವ ರೈತನೊಬ್ಬ ಎಂಎಲ್ಎ ರೇಂಜಿನಲ್ಲಿ ಬೆಂಬಲಿಗರ ದಂಡಿನೊಂದಿಗೆ ಐದು ಕಿಮೀ ಪಾದಯಾತ್ರೆ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ.

news18-kannada
Updated:December 17, 2020, 3:30 PM IST
ಎಂಎಲ್ಎ ರೇಂಜಿಗೆ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಯುವ ರೈತ
ಹಣಬೆ ಗ್ರಾ.ಪಂ. ಚುನಾವಣೆಯಲ್ಲಿ ನೆರಳಗಟ್ಟ ಸದಸ್ಯತ್ವಕ್ಕೆ ನಾಮಪತ್ರ ಸಲ್ಲಿಸಿದ ರಂಗನಾಥ್
  • Share this:
ದೊಡ್ಡಬಳ್ಳಾಪುರ: ಚುನಾವಣೆಗೆ ಅಭ್ಯರ್ಥಿ ನಾಮಪತ್ರ ಸಲ್ಲಿಸುತ್ತಿದ್ದ ವೇಳೆ ಅಪಾರ ಜನಸ್ತೋಮ… ಅಭ್ಯರ್ಥಿ ಜೊತೆ ಐದು ಕಿ.ಮೀ. ಪಾದಯಾತ್ರೆ ಬಂದ ಗ್ರಾಮಸ್ಥರು... ನಾಮೀನೆಷನ್ ವೇಳೆ ಬಿಂದಾಸ್ ಸ್ಟೆಪ್ ಹಾಕಿದ ಯುವಕರು… ಇದು ಯಾವುದೇ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ದೃಶ್ಯವಲ್ಲ. ಗ್ರಾಮ ಪಂಚಾಯ್ತಿ ಚುನಾವಣೆಯ ಸಂಗತಿ ಇದು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಪಂಚಾಯ್ತಿಯಲ್ಲಿ. ಎಂಎಲ್​ಎ ರೇಂಜ್​ನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಯುವಕ ರಂಗನಾಥ್.

ಹಣಬೆ ಪಂಚಾಯ್ತಿಯಲ್ಲಿ 20 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ನೆರಳಘಟ್ಟ ಎಂಬ ಗ್ರಾಮದಿಂದ ಬಿಕಾಂ ಓದಿರುವ ರಂಗನಾಥ್ ಎಂಬಾತನನ್ನು ಚುನಾವಣಾ ಅಖಾಡಕ್ಕೆ ಅಲ್ಲಿನ ಗ್ರಾಮಸ್ಥರು ಇಳಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಕೆ ಮಾಡಲು ಗ್ರಾಮಸ್ಥರೆಲ್ಲಾ ಸೇರಿ ಅಭ್ಯರ್ಥಿಯನ್ನು ಐದು ಕಿ.ಮೀ. ಪಾದಯಾತ್ರೆ ಮೂಲಕ ಕರೆದೊಯ್ದಿದ್ದಾರೆ. ಅಪಾರ ಬೆಂಬಲಿಗರೊಂದಿಗೆ ಎಂ.ಎಲ್.ಎ ರೇಂಜಿಗೆ ಆಗಮಿಸಿ ರಂಗನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಪಾದಯಾತ್ರೆ ಉದ್ದಕ್ಕೂ ತಮಟೆ ವಾದ್ಯಕ್ಕೆ ಕುಣಿತ, ಶಿಳ್ಳೆ, ಜೈಕಾರ ಇತ್ಯಾದಿಗಳು ಯಾವುದೋ ಸಿನಿಮಾ ದೃಶ್ಯದಂತೆ ಗೋಚರಿಸಿತ್ತು.

ಅಂದಹಾಗೆ ಗ್ರಾಮ ಪಂಚಾಯ್ತಿ ಚುನಾವಣೆಯನ್ನ ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ ಕೆಲ ಗ್ರಾಮಸ್ಥರು ಯುವ ರೈತನೊಬ್ಬನನ್ನ ಗೆಲ್ಲಿಸಿಕೊಳ್ಳಲು ಪಣತೊಟ್ಟಿದ್ಧಾರೆ. ಇಡೀ ತಾಲೂಕಿನಲ್ಲೇ ಈ ರೀತಿಯ ಜನಸ್ಥೋಮ ಎಲ್ಲಿಯೂ ಯಾರು ಮಾಡಬಾರದು ಎನ್ನುವ ರೀತಿಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಚುನಾವಣಾ ಅಖಾಡಕ್ಕೆ ಧುಮಕಿರುವ ಯುವ ರೈತ ಗಂಗನಾಥ್ ತಾನು ಪದವಿ ಓದಿದ್ದರೂ ಉತ್ತಮ ಕೃಷಿ ಮಾಡುವ ಮೂಲಕ ಗ್ರಾಮದಲ್ಲಿ ಹೆಸರು ಪಡೆದಿದ್ದಾನಂತೆ. ಗ್ರಾಮದಲ್ಲಿ ಹತ್ತಾರು ಎಕರೆ ಭೂಮಿಯಲ್ಲಿ ಕೃಷಿ ಮಾಡುವ ರಂಗನಾಥ್ ಹತ್ತಾರು ರೈತರಿಗೂ ಮಾರ್ಗದರ್ಶನ ಮಾಡುತ್ತಾನಂತೆ. ಅಲ್ಲದೆ ತೋಟದಲ್ಲಿ ಕೆಲಸಕ್ಕೂ ಸೈ ಜನರ ಸೇವೆಗೂ ಜೈ ಎಂದಿರುವ ರಂಗನಾಥ್ ತನ್ನ ಗ್ರಾಮದಲ್ಲಿ ಯಾರಿಗೆ ಯಾವ ಸಮಸ್ಯೆಗಳಿದ್ದರೂ ಮುಂದೆ ನಿಂತುಕೊಂಡು ಎಲ್ಲರಿಗೂ ದಾರಿ ದೀಪವಾಗಿದ್ದನಂತೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ; ಮಗುವಿಗೆ ಜನ್ಮ ಕೊಡುವವರೆಗೂ ಬೆಳಕಿಗೆ ಬರದ ಪ್ರಕರಣ

ಈ ಹಿಂದೆ ಇದ್ದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಗ್ರಾಮದಲ್ಲಿರದೇ ಬೆಂಗಳೂರಿನಲ್ಲಿ ಉಳಿದುಕೊಂಡು ಗ್ರಾಮಸ್ಥರಿಗೆ ಸಿಗುತ್ತಿರಲಿಲ್ಲವಂತೆ. ಇದನ್ನರಿತ ಗ್ರಾಮಸ್ಥರೆಲ್ಲಾ ಯುವ ರೈತ ರಂಗನಾಥ್ ಅವರನ್ನೇ ಅಖಾಡಕ್ಕೆ ಇಳಿಸಿದ್ದಾರೆ. ಹೀಗಾಗಿ ಇಂದು ಐದು ಕಿ.ಮಿ ಪಾದಯಾತ್ರೆ ಮಾಡಿಸಿಕೊಂಡು ಹಣಬೆ ಗ್ರಾಮ ಪಂಚಾಯ್ತಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿಸಿ ತಾಲೂಕಿನಲ್ಲೆ ಅತೆ ಹೆಚ್ಚು ಜನರನ್ನ ಸೇರಿಸಿ ನಾಮಪತ್ರ ಸಲ್ಲಿಕೆ ಮಾಡಿದ ಅಭ್ಯರ್ಥಿಯೆಂದು ಇದೀಗ ಪ್ರಸಿದ್ದಿ ಮಾಡಿಸಿದ್ದಾರೆ.

ವರದಿ: ಎಸ್ ನವೀನ್ ಕುಮಾರ್
Published by: Vijayasarthy SN
First published: December 17, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories