ರಾಷ್ಟ್ರ ಪಕ್ಷಿ ನವಿಲುಗಳಿಗೆ ವಿಷ ಹಾಕಿ ಕೊಂದ ಪಾಪಿಗಳು ; ಕೋಟೆ ನಾಡಿನಲ್ಲೊಂದು ಹೃದಯವಿದ್ರಾವಕ ಘಟನೆ

ಚಿತ್ರದುರ್ಗದ ಜೋಗಿ ಮಟ್ಟಿ ಅರಣ್ಯ ಪ್ರದೇಶದ ಕಂದಾಯ ಜಮೀನುಗಳ ಬಳಿ ಆಹಾರ ಹುಡುಕಿ ಬಂದಿದ್ದ ಏಳು ಹೆಣ್ಣು ನವಿಲುಗಳು ಮನುಷ್ಯನ ಕ್ರೂರತೆಗೆ ಬಲಿಯಾಗಿವೆ

news18-kannada
Updated:July 9, 2020, 4:03 PM IST
ರಾಷ್ಟ್ರ ಪಕ್ಷಿ ನವಿಲುಗಳಿಗೆ ವಿಷ ಹಾಕಿ ಕೊಂದ ಪಾಪಿಗಳು ; ಕೋಟೆ ನಾಡಿನಲ್ಲೊಂದು ಹೃದಯವಿದ್ರಾವಕ ಘಟನೆ
ಸತ್ತಿರುವ ನವಿಲು
  • Share this:
ಚಿತ್ರದುರ್ಗ(ಜುಲೈ.09): ನವಿಲುಗಳ ಅಂದ ಚಂದದ ವೈಯಾರಕ್ಕೆ ಬೆರಗಾಗದವರೇ ಇಲ್ಲ. ಅದರಲ್ಲೂ, ಆ ನವಿಲುಗಳು ಗರಿ ಬಿಚ್ಚಿ ಕುಣಿಯುವುದಕ್ಕೆ ಶುರು ಮಾಡಿದ್ರೆ ಆ ಸೊಬಗನ್ನ ಕಣ್ತುಂಬಿಕೊಳ್ಳುವುದಕ್ಕೆ ಎರಡು ಕಣ್ಣುಗಳು ಸಾಲವು. ಅಂತಹ ವಿಶೇಷ ಮೈಮಾಟದ ಆ ನಾಟ್ಯ ಮಯೂರಿ ದೇಶದ ರಾಷ್ಟೀಯ ಪಕ್ಷಿಯಾಗಿ ಗೌರವದ ಸ್ಥಾನ ಗಳಿಸಿದೆ. ಇಡೀ ಭಾರತವೇ ಗೌರವಿಸುವ ಆ ನವಿಲುಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಕೋಟೆನಾಡು ಚಿತ್ರದುರ್ಗ ಅಂದ ತಕ್ಷಣ ನೆನಪಿಗೆ ಬರುವುದು ಕಲ್ಲಿನ ಕೋಟೆ, ಜೋಗಿ‌ಮಟ್ಟಿ, ಚಂದ್ರವಳ್ಳಿ ತೋಟ, ಹೀಗೆ ಹಲವು ಪ್ರವಾಸಿ ತಾಣಗಳು.ಇಲ್ಲಿಗೆ ಬಂದವರು ಜೋಗಿ ಮಟ್ಟಿಗೆ ಹೋಗಬೇಕು, ಪ್ರಕೃತಿ ಸೊಬಗನ್ನ ನೋಡಿ ಆನಂದಿಸಬೇಕು ಅನ್ನುವವರೇ ಹೆಚ್ಚು. ಕಾರಣ ಆ ನಟ್ಟ ನಡು ಅರಣ್ಯದ ಮಧ್ಯೆ ಸಾಗುತ್ತಿದ್ದಂತೆ ಗರಿ ಬಿಚ್ಚಿ ರಮ್ಯವಾಗಿ ನರ್ತಿಸುವ ಸ್ವಚ್ಚಂದ ನವಿಲುಗಳ ಸ್ವಾಗತ. ಪ್ರಕೃತಿಯನ್ನ ಆರಾಧಿಸಲು ಬಂದವರ ಮನಸಿಗೆ  ಮುದನೀಡುವ ಇವುಗಳ ವೈಯಾರವೂ ಹೌದು. ಆದರೇ ಇವುಗಳನ್ನ ಗೌವರವಿಸಿ ಆರಾಧಿಸುವವರ ನಡುವೆ ಯಾರೋ ದುಷ್ಕರ್ಮಿಗಳು ಅವುಗಳಿಗೆ ವಿಷ ಆಹಾರ ಹಾಕಿ ಕೊಂದುಬಿಟ್ಟಿದ್ದಾರೆ.

ಚಿತ್ರದುರ್ಗದ ಜೋಗಿ ಮಟ್ಟಿ ಅರಣ್ಯ ಪ್ರದೇಶದ ಕಂದಾಯ ಜಮೀನುಗಳ ಬಳಿ ಆಹಾರ ಹುಡುಕಿ ಬಂದಿದ್ದ ಏಳು ಹೆಣ್ಣು ನವಿಲುಗಳು ಮನುಷ್ಯನ ಕ್ರೂರತೆಗೆ ಬಲಿಯಾಗಿವೆ. ಜೋಗಿಮಟ್ಟಿ  ಅರಣ್ಯ ಪ್ರದೇಶದಲ್ಲಿ ನಿತ್ಯವೂ ಸಾವಿರಾರು ನವಿಲುಗಳು ಆಹಾರ ಹರಸಿ ಸಂಚಾರ ಮಾಡುತ್ತವೆ. ಇದನ್ನ ಕಂಡು ಸಹಿಸದ ಯಾರೋ ಕ್ರೂರಿಗಳು ವಿಷ ಆಹಾರ ಹಾಕಿ ಕೊಂದಿದ್ದಾರೆ. ಆಹಾರ ಹರಸಿ ಬಂದ  ನವಿಲುಗಳು ನಮ್ಮ ರಾಷ್ಟ್ರೀಯ ಪಕ್ಷಿ ಎಂಬ ಕನಿಷ್ಠ ಗೌವರವವೂ ಇಲ್ಲದೆ ಈ ಕೃತ್ಯ ಎಸಗಿದ್ದಾರೆ‌.

ಸತ್ತು ಬಿದ್ದ ನವಿಲುಗಳನ್ನ ನೋಡಿದ ಪ್ರಾಣಿ ಪಕ್ಷಿ ಪ್ರಿಯರು ಕ್ರೂರಿಗಳ ವಿರುದ್ದ ಆಕ್ರಶ ವ್ಯಕ್ತಪಡಿಸಿದ್ದಾರೆ. ಆಲ್ಲದೇ ಈ  ಜಾಗದಲ್ಲಿ ಅನೈತಿಕ ಚಟುವಟಿಕೆಯಾದ ಕುಡುಕರ ಅಡ್ಡೆಯಾಗಿದೆ. ಇದಕ್ಕೆ ಕಡಿವಾಣ ಹಾಕುವುದರ ಜೊತೆಗೆ ಇಂತಹ ಕ್ರೂರ ಮನಸ್ಸುಗಳನ್ನು ಹುಡುಕಿ‌ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇ‌ನ್ನೂ ಈ  ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ  ವಲಯಾರಣ್ಯಾಧಿಕಾರಿ ಸಂದೀಪ್ ನಾಯಕ್ ಸ್ಥಳಕ್ಕೆ ಸಿಬ್ಬಂದಿಗಳ ಜೊತೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ  ನವಿಲುಗಳ ಮೃತದೇಹಗಳನ್ನ ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿಕೊಟ್ಟಿದ್ದಾರೆ.  ನವಿಲುಗಳ ಸಾವಿನ ಜಾಡು ಹಿಡಿದಿರುವ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದ ಸುತ್ತ ಪರೀಶೀಲನೆ ಮುಂದಾಗಿದ್ದಾರೆ. ಅಲ್ಲದೇ ಈ ಪ್ರದೇಶದ ಅಕ್ಕಪಕ್ಕದಲ್ಲಿ  ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಿದ ಔಷಧಯುಕ್ತ ಕಾಳುಗಳನ್ನ ತಿಂದು ಸಾವನ್ನಪ್ಪದ್ದಾವಾ ಎಂಬುದರ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ :  ಸೇಡಂ ಶಾಸಕ, ಕುಟುಂಬ ಸದಸ್ಯರಿಗೆ ಕೊರೋನಾ; ಪಿಎ ಮೂಲಕ ವಕ್ಕರಿಸಿದ ಮಹಾಮಾರಿ ಸೋಂಕು

ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿದ್ದಾರಾ ಎಂಬದು ಖಚಿತವಾದರೆ ತಪ್ಪಿತಸ್ಥರನ್ನು ಹುಡುಕಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಉಪ ವಲಯಾರಣ್ಯಾಧಿಕಾರಿ ರಾಘವೇಂದ್ರ ಹೇಳಿದ್ದಾರೆ.

ಒಟ್ಟಾರೆ ಜೋಗಿ ಮಟ್ಟಿ ಅರಣ್ಯದಲ್ಲಿ ಜನರ ಮನಸ್ಸಿಗೆ ಉಲ್ಲಾಸ ನೀಡುತ್ತಿದ್ದ ನವಿಲುಗಳು ಇಂದು ಮಾನವನ ಕ್ರೌರ್ಯಕ್ಕೆ ಬಲಿಯಾಗಿ ಪ್ರಾಣ ಬಿಟ್ಟಿವೆ. ಮಾಮವೀಯತೆ ಮರೆತು ಮಗ್ದ ಪಕ್ಷಿಗಳಿಗೆ ವಿಷ ಹಾಕಿರುವ ಕ್ರೂರಿಗಳಿಗೆ ಅರಣ್ಯ ಇಲಾಖೆ ಕಾನೂನಿನ ಮೂಲಕ ಶಿಕ್ಷೆ ಕೊಡಿಸಬೇಕು ಅನ್ನೋದು ಪಕ್ಷಿ ಪ್ರಿಯರ ಆಗ್ರಹವಾಗಿದೆ.
Published by: G Hareeshkumar
First published: July 9, 2020, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading