ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ; ಮೈದುಂಬಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ ಒಡಲು

ಕೃಷ್ಣಾ ನದಿಯು ಉಕ್ಕಿ ಹರಿಯುತ್ತಿರುವ ಪರಿಣಾಮ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಸಮೀಪದ ಸೇತುವೆಯು ಮುಳುಗಡೆ ‌ಭೀತಿ ಎದುರಿಸುತ್ತಿದೆ. ಕೊಳ್ಳುರಿನ ಸೇತುವೆ ಯಾದಗಿರಿ- ರಾಯಚೂರಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.

news18-kannada
Updated:August 7, 2020, 2:41 PM IST
ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ; ಮೈದುಂಬಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ ಒಡಲು
ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಗೆ ಬಿಟ್ಟಿರುವುದು.
  • Share this:
ಯಾದಗಿರಿ: ಮಹಾರಾಷ್ಟ್ರದ ಮಹಾಮಳೆಗೆ ಮತ್ತೆ ಕೃಷ್ಣಾ ನದಿ ತೀರದ ಜನರು ಈಗ ಕಣ್ಣೀರು ಹಾಕುವಂತಾಗಿದೆ‌. ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಈಗ ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಸಮೀಪವಿರುವ ಬಸವಸಾಗರ ಜಲಾಶಯದಿಂದ ಮತ್ತೆ ಈಗ ಕೃಷ್ಣಾ ನದಿಗೆ 180420 ಕ್ಯೂಸೆಕ್ ನೀರು ಹರಿ ಬಿಡಲಾಗಿದೆ.

ಜಲಾಶಯಕ್ಕೆ 1 ಲಕ್ಷ 60 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದೆ. 33.31 ಟಿಎಂಸಿ ಸಾಮರ್ಥ್ಯ ದ ಜಲಾಶಯದಲ್ಲಿ 27.09 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ 17 ಗೇಟ್ ಗಳನ್ನು ತೆರೆದು ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದೆ. ಕೃಷ್ಣಾ ನದಿಯು ಮೈದುಂಬಿ ಉಕ್ಕಿ ಹರಿಯುತ್ತಿದೆ. ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಛಾಯಾ ಭಗವತಿ ದೇಗುಲ ಮುಳುಗಡೆ ಭೀತಿ...!

ದಕ್ಷಿಣ ಕಾಶಿ ಎಂದೇ ಖ್ಯಾತಿಯಾದ ನಾರಾಯಣಪುರದ ಕೃಷ್ಣಾ ನದಿ ತೀರದಲ್ಲಿರುವ ಛಾಯಾಭಗವತಿ ದೇಗುಲವು ಪ್ರವಾಹ ಭೀತಿ ಎದುರಿಸುತ್ತಿದೆ‌. ದೇಗುಲದ ಮೆಟ್ಟಿಲುಗಳಿಗೆ ಅಂಟಿಕೊಂಡು ನೀರು ಹರಿಯುತ್ತಿವೆ. ಮತ್ತೆನಾದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ದೇಗುಲಕ್ಕೂ ಪ್ರವಾಹದ ಬಿಸಿ ತಟ್ಟಲಿದೆ. ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ಕೃಷ್ಣಾ ಪ್ರವಾಹದಲ್ಲಿ ಛಾಯಾಭಗವತಿ ದೇವಸ್ಥಾನ ಜಲಾವೃತವಾಗಿತ್ತು.

ಕೊಳ್ಳುರು ಸೇತುವೆ ಮುಳುಗಡೆ ಸಾಧ್ಯತೆ..!

ಕೃಷ್ಣಾ ನದಿಯು ಉಕ್ಕಿ ಹರಿಯುತ್ತಿರುವ ಪರಿಣಾಮ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಸಮೀಪದ ಸೇತುವೆಯು ಮುಳುಗಡೆ ‌ಭೀತಿ ಎದುರಿಸುತ್ತಿದೆ. ಕೊಳ್ಳುರಿನ ಸೇತುವೆ ಯಾದಗಿರಿ- ರಾಯಚೂರಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.

ಇದನ್ನು ಓದಿ: Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ; ಚಾರ್ಮಾಡಿ ಘಾಟ್, ಶೃಂಗೇರಿ- ಮಂಗಳೂರು ಹೆದ್ದಾರಿ​ ಬಂದ್

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಹಾಪುರ ತಹಸೀಲ್ದಾರ ಜಗನ್ನಾಥ ರೆಡ್ಡಿ ಮಾತನಾಡಿ, ಕೃಷ್ಣಾ ನದಿಯಿಂದ ಹೆಚ್ಚು ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಕೊಳ್ಳುರು ಸೇತುವೆ ಮೇಲೆ  ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಜನರು ನದಿ ತೀರಕ್ಕೆ ತೆರಳದೆ ಎಚ್ಚರ ವಹಿಸಬೇಕೆಂದು ತಿಳಿಸಿದ್ದಾರೆ. ಮಹಾರಾಷ್ಟ್ರದ ಮಹಾಮಳೆಗೆ ಕೃಷ್ಣಾ ನದಿಯು ಅಪಾಯ ಮಟ್ಟ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದ ಜನ ಮತ್ತೆ ಕಣ್ಣೀರು ಹಾಕುವಂತಾಗಿದೆ.
Published by: HR Ramesh
First published: August 7, 2020, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading