Cotton Robbery: ಹತ್ತಿಗೆ ಭಾರಿ ಡಿಮ್ಯಾಂಡ್ ರಾತ್ರೋರಾತ್ರಿ ದರೋಡೆ; Yadagiri ಜಿಲ್ಲೆಯಲ್ಲಿ ಅನ್ನದಾತರ ಕಣ್ಣೀರು..!

ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ,ವಡಗೇರಾ, ಗುರುಮಠಕಲ್, ಸೈದಾಪುರ, ಮೊದಲಾದ ಭಾಗದಲ್ಲಿ ಅನ್ನದಾತರು ಹತ್ತಿ ಬೆಳೆದಿದ್ದು, ಈಗ ಒಳ್ಳೆಯ ಬೆಲೆ ಬಂದ ಹಿನ್ನೆಲೆ  ಹತ್ತಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಕಳ್ಳರು ಈಗ ರಾತ್ರೋ ರಾತ್ರಿ ಹತ್ತಿ ಜಮೀನಿಗೆ ನುಗ್ಗಿ ಕಳ್ಳತನ ಮಾಡಿ ಹಣ ಸಂಪಾದಿಸುವ ಕೃತ್ಯಕ್ಕೆ ಇಳಿದಿದೆ.

ಯಾದಗಿರಿ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಹತ್ತಿ ಬೆಳೆ.

ಯಾದಗಿರಿ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಹತ್ತಿ ಬೆಳೆ.

  • Share this:
ಯಾದಗಿರಿ: (Yadagiri) ಇಷ್ಟು ದಿನ ಮನೆಗೆ ಇಲ್ಲವೇ ಅಂಗಡಿಗೆ ನುಗ್ಗಿ ಚಿನ್ನಾಭರಣ ಇಲ್ಲವೇ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರ ಗ್ಯಾಂಗ್ ಈಗ ಹತ್ತಿಗೆ ಬಂಗಾರದಂತಹ ಬೆಲೆ ಡಿಮ್ಯಾಂಡ್ (Heavy Demand To Cotton) ಆದ ಹಿನ್ನೆಲೆ, ಸಿದಾ ರಾತ್ರೋರಾತ್ರಿ ಅನ್ನದಾತರ ಜಮೀನಿಗೆ ನುಗ್ಗಿ ಹತ್ತಿಗೆ ಕನ್ನ (Cotton Crop Robbery) ಹಾಕುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಹತ್ತಿ ಕಳ್ಳತನ  ಪ್ರಕರಣಗಳು ಹೆಚ್ಚಾಗಿದ್ದು ಅನ್ನದಾತರು ಈಗ ಕಳ್ಳರ ಕಾಟಕ್ಕೆ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಹತ್ತಿ ಬಿಡಿಸಿ ಹತ್ತಿ ದೋಚಿಕೊಂಡು ಹೋಗುವ ಜೊತೆ ಜಮೀನಿನಲ್ಲಿ ಹತ್ತಿ ಬಿಡಿಸಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ ಬೆಲೆ ಬಾಳುವ ಹತ್ತಿ ಖದೀಮರ ಗ್ಯಾಂಗ್ ಕನ್ನ ಹಾಕುತ್ತಿದೆ.

ಮಾರುಕಟ್ಟೆಯಲ್ಲಿ ಹತ್ತಿಗೆ ಪ್ರತಿ ಕ್ವಿಂಟಾಲ್ ಗೆ ಈ ವರ್ಷ 7 ರಿಂದ 8 ಸಾವಿರ ರೂ ವರಗೆ ಹೆಚ್ಚಿನ ದರವಿದೆ. ಮೊದಲನೇ ಬಾರಿ ಹತ್ತಿಗೆ ಉತ್ತಮ ಬೆಲೆ ದರ ಸಿಕ್ಕಿದೆ. ಹತ್ತಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಆದ ಹಿನ್ನೆಲೆ ಕಳ್ಳರ ಗ್ಯಾಂಗ್ ಈಗ ರಾತ್ರೋ ರಾತ್ರಿ ಜಮೀನಿಗೆ ನುಗ್ಗಿ ಹತ್ತಿ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಕಾಟನ್ ಕಳ್ಳತನ ಹೆಚ್ಚಾಗಿದೆ. ವಡಗೇರಾ ತಾಲೂಕಿನ ಬಬಲಾದ ಗ್ರಾಮದ ರೈತ ಖಾಸೀಂ ಅಲಿ ಅವರ 10 ಕ್ವಿಂಟಾಲ್ ಹತ್ತಿ ಕಳ್ಳತನ ಮಾಡಲಾಗಿದೆ. ಅದೇ ರೀತಿ ಕಿಲ್ಲನಕೇರಾದ ರೈತ ಮಲ್ಲಪ್ಪ ಅವರು ತಮ್ಮ ಜಮೀನಿನಲ್ಲಿ ಹತ್ತಿ ಬಿಡಿಸಿರಲಿಲ್ಲ. ಆದರೆ, ಗಿಡದಲ್ಲಿ ಇದ್ದ ಹತ್ತಿಯನ್ನು ‌ಖದೀಮರ ಗ್ಯಾಂಗ್ ರಾತ್ರಿ ಹೊಲಕ್ಕೆ ನುಗ್ಗಿ ಹತ್ತಿ ಬಿಡಿಸಿ 5 ಕ್ವಿಂಟಾಲ್ ವರೆಗೆ ದೋಚಿಕೊಂಡು ಪರಾರಿಯಾಗಿದ್ದಾರೆ. ಇದೇ ರೀತಿಯ ಜಿಲ್ಲೆಯ ಬಹುತೇಕ ಕಡೆ ಹತ್ತಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ, ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವ ಕೆಲಸ ಯಾವ ರೈತರು ಮಾಡಿಲ್ಲ. ಕೊರ್ಟ್ ಕಚೇರಿ ಯಾಕೆ ನಮಗೆ ಎಂದು ದೂರು ನೀಡಲು ಹಿಂದೇಟು ಹಾಕಿದ್ದಾರೆ.

ಜಮೀನಿಗೆ ನುಗ್ಗಿ ಹತ್ತಿ ಕಳ್ಳತನ

ಯಾದಗಿರಿ ಜಿಲ್ಲಾದ್ಯಂತ ಈಗ ಹತ್ತಿ ಭರ್ಜರಿ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ಅನ್ನದಾತರ ಜಮೀನಿಗೆ ನುಗ್ಗಿ ಹತ್ತಿ ಕಳ್ಳಾಟ ನಡೆಸಿದ್ದು ಇದರಿಂದ ರೈತರು ನಿದ್ದೆ ಮಾಡದಂತಾಗಿದೆ. ಈ ಬಗ್ಗೆ ಬಬಲಾದ ಗ್ರಾಮದ ರೈತ ಖಾಸೀಂ ಅಲಿ ಮಾತನಾಡಿ, ಸರ್ ನಾವು ಬಡವರು ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಇದ್ದಷ್ಟರಲ್ಲಿಯೇ ಜೀವನ ನಡೆಸುತ್ತಿದ್ದೆವು ಈ ಬಾರಿ ಹತ್ತಿ ಇಳುವರಿ ಚನ್ನಾಗಿ ಬಂದಿತ್ತು. ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಇದೆ. ನಾವು ಹತ್ತಿ ಬಿಡಿಸಿ ಹೊಲದಲ್ಲಿ 10 ಕ್ವಿಂಟಾಲ್ ಹತ್ತಿ ಸಂಗ್ರಹಿಸಿ ಇಡಲಾಗಿತ್ತು. ಆದರೆ, ಕಳ್ಳರು ರಾತ್ರೋ ರಾತ್ರಿ ಹತ್ತಿ ಜಮೀನಿಗೆ ನುಗ್ಗಿ ಹತ್ತಿ ದೋಚಿಕೊಂಡು ಹೋಗಿದ್ದಾರೆ. ಹತ್ತಿ ಮಾರಾಟ ಮಾಡಿ ಸಾಲ ಕಟ್ಟ ಬೇಕಾಗಿತ್ತು. ಆದರೆ, ಈಗ ನಾವು ಹೇಗೆ ಬದುಕಬೇಕೆಂದು ನೋವು ತೊಡಿಕೊಂಡರು.

ಇದನ್ನು ಓದಿ: 6 ಪಥದ 340 ಕಿ.ಮೀ ಉದ್ದದ Purvanchal Expressway ಉದ್ಘಾಟಿಸಲಿರುವ ಪ್ರಧಾನಿ; ಏನಿದರ ವಿಶೇಷತೆ?

ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ,ವಡಗೇರಾ, ಗುರುಮಠಕಲ್, ಸೈದಾಪುರ, ಮೊದಲಾದ ಭಾಗದಲ್ಲಿ ಅನ್ನದಾತರು ಹತ್ತಿ ಬೆಳೆದಿದ್ದು, ಈಗ ಒಳ್ಳೆಯ ಬೆಲೆ ಬಂದ ಹಿನ್ನೆಲೆ  ಹತ್ತಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಕಳ್ಳರು ಈಗ ರಾತ್ರೋ ರಾತ್ರಿ ಹತ್ತಿ ಜಮೀನಿಗೆ ನುಗ್ಗಿ ಕಳ್ಳತನ ಮಾಡಿ ಹಣ ಸಂಪಾದಿಸುವ ಕೃತ್ಯಕ್ಕೆ ಇಳಿದಿದೆ. ಇದರಿಂದ ಸಾಲ ಶೂಲ ಮಾಡಿ ಬೆಳೆ ಬೆಳೆದ ರೈತ ಈಗ ಕಂಗಲಾಗಿದ್ದಾನೆ.ಬೆಳೆ ಕಳ್ಳರ ಪಾಲಾಗಿರುವದಕ್ಕೆ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಪೊಲೀಸರು ಈ ಬಗ್ಗೆ  ಪ್ರಕರಣ ದಾಖಲಿಸಿಕೊಂಡು ಖದೀಮರಿಗೆ ಬಂಧಿಸಿ ಅನ್ನದಾತರ ಕಾಳಜಿ ತೊರಬೇಕಾಗಿದೆ.
Published by:HR Ramesh
First published: