HOME » NEWS » District » HUCCHA VENKAT VIDEOS BIGG BOSS KANNADA CONTESTANT HUCCHA VENKAT ATTACKED ON MANDYA JUICE SHOP OWNER SCT

ಶ್ರೀರಂಗಪಟ್ಟಣದಲ್ಲಿ ಹುಚ್ಚ ವೆಂಕಟ್ ರಂಪಾಟ; ಕಾಟ ತಾಳಲಾರದೆ ಹಿಗ್ಗಾಮುಗ್ಗ ಥಳಿಸಿದ ಜನ!

Huccha Venkat: ಶ್ರೀರಂಗಪಟ್ಟಣದ ದಾಸರಗುಪ್ಪೆ ಬಳಿ ಕಬ್ಬಿನ ಹಾಲು ಕುಡಿದ ಹುಚ್ಚ ವೆಂಕಟ್ ಜ್ಯೂಸ್​ ದುಡ್ಡು ಕೊಡಲು ನಿರಾಕರಿಸಿದ್ದಾರೆ. ಕೊನೆಗೆ, ಜ್ಯೂಸ್​ ಅಂಗಡಿಯವನ ಮೇಲೆ ಹಲ್ಲೆ ನಡೆಸಿ, ಹೊಡೆದಾಟ ಮಾಡಿದ್ದಾರೆ.

Sushma Chakre | news18-kannada
Updated:June 9, 2020, 5:26 PM IST
ಶ್ರೀರಂಗಪಟ್ಟಣದಲ್ಲಿ ಹುಚ್ಚ ವೆಂಕಟ್ ರಂಪಾಟ; ಕಾಟ ತಾಳಲಾರದೆ ಹಿಗ್ಗಾಮುಗ್ಗ ಥಳಿಸಿದ ಜನ!
ಹುಚ್ಚ ವೆಂಕಟ್
  • Share this:
ಶ್ರೀರಂಗಪಟ್ಟಣ (ಜೂ. 9): ಹುಚ್ಚ ವೆಂಕಟ್ ವಿವಾದಗಳನ್ನು ಹುಡುಕಿಕೊಂಡು ಹೋಗುತ್ತಾರೋ ಅಥವಾ ವಿವಾದಗಳೇ ಅವರನ್ನು ಹುಡುಕಿಕೊಂಡು ಬರುತ್ತದೋ ಗೊತ್ತಿಲ್ಲ. ಆದರೆ, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಹುಚ್ಚ ವೆಂಕಟ್ ಈ ಬಾರಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ರಂಪಾಟ ಮಾಡಿ, ಜನರಿಂದ ಪೆಟ್ಟು ತಿಂದಿದ್ದಾರೆ.

ಈ ಹಿಂದೆ ಮೈಸೂರು, ಮಡಿಕೇರಿಯಲ್ಲಿ ಗಲಾಟೆ ಮಾಡಿ, ರಾದ್ಧಾಂತ ಮಾಡಿದ್ದ ಹುಚ್ಚ ವೆಂಕಟ್ ಕಳೆದ ಮೂರ್ನಾಲ್ಕು ದಿನಗಳಿಂದ ಶ್ರೀರಂಗಪಟ್ಟಣದಲ್ಲಿದ್ದಾರೆ. ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಅಲೆದಾಡುತ್ತಿದ್ದ ವೆಂಕಟ್​ನನ್ನು ಜನರು ಗುರುತಿಸಿದ್ದರು. ಕಾವೇರಿ ಸಂಗಮದ ಬಳಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹಣವಿಲ್ಲ. ಪೆಟ್ರೋಲ್ ಹಾಕಿಸಿಕೊಡದಿದ್ದರೆ ಇಲ್ಲಿಂದ ಹೋಗುವುದಿಲ್ಲ ಎಂದು ರಸ್ತೆಯಲ್ಲೇ ಕುಳಿತು ರಾದ್ಧಾಂತ ಮಾಡಿದ್ದ ಹುಚ್ಚ ವೆಂಕಟ್​ ಕಾರಿಗೆ ಸ್ಥಳೀಯರೇ ಪೆಟ್ರೋಲ್ ಹಾಕಿಸಿಕೊಟ್ಟಿದ್ದರು. ನಿನ್ನೆ ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿ ಇಬ್ಬರ ಮೇಲೆ ಹುಚ್ಚ ವೆಂಕಟ್ ಹಲ್ಲೆ ನಡೆಸಿದ್ದರು.

ಇದನ್ನೂ ಓದಿ: ಚಿರು ಹಾಲು- ತುಪ್ಪ ಕಾರ್ಯದಲ್ಲಿ ಗಂಡನನ್ನು ನೆನೆದು ಮತ್ತೆ ಕಣ್ಣೀರಿಟ್ಟ ಮೇಘನಾ

ಇಂದು ಶ್ರೀರಂಗಪಟ್ಟಣದ ದಾಸರಗುಪ್ಪೆ ಬಳಿ ಕಬ್ಬಿನ ಹಾಲು ಕುಡಿದ ಹುಚ್ಚ ವೆಂಕಟ್ ಜ್ಯೂಸ್​ ದುಡ್ಡು ಕೊಡಲು ನಿರಾಕರಿಸಿದ್ದಾರೆ. ಕೊನೆಗೆ, ಜ್ಯೂಸ್​ ಅಂಗಡಿಯವನ ಮೇಲೆ ಹಲ್ಲೆ ನಡೆಸಿ, ಹೊಡೆದಾಟ ಮಾಡಿದ್ದಾರೆ. ಇದನ್ನು ನೋಡಿದ ಅಲ್ಲಿನ ಜನರು ವೆಂಕಟ್​ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಮೂಲಕ ಹುಚ್ಚ ವೆಂಕಟ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
First published: June 9, 2020, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories