ಹುಬ್ಬಳ್ಳಿಯಲ್ಲಿ ರಸ್ತೆಗಿಳಿದ ಪೊಲೀಸ್ ಕಮೀಷನರ್; ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರಿಗೆ ಬಿಸಿ

ಕೆಲವು ಕಡೆ ಜನರು ಅನಗತ್ಯವಾಗಿ ಓಡಾಡಿದ್ದು ಕಂಡುಬಂತು. ಹೀಗಾಗಿ ಜನರಿಗೆ ಬುದ್ಧಿ ವಾದ ಹೇಳಲು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಜಂಟಿಯಾಗಿ ಹುಬ್ಬಳ್ಳಿ ನಗರದಲ್ಲಿ‌ ಗಸ್ತು ಸಂಚಾರ ಮಾಡಿದರು.

news18-kannada
Updated:July 6, 2020, 7:19 AM IST
ಹುಬ್ಬಳ್ಳಿಯಲ್ಲಿ ರಸ್ತೆಗಿಳಿದ ಪೊಲೀಸ್ ಕಮೀಷನರ್; ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರಿಗೆ ಬಿಸಿ
ರಸ್ತೆಗಿಳಿದಿರುವ ಹುಬ್ಬಳ್ಳಿ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಕಮೀಷನರ್‌.
  • Share this:
 ಹುಬ್ಬಳ್ಳಿ; ಲಾಕ್‌ಡೌನ್ ನಿಮಿತ್ತ ಭಾನುವಾರ ಅವಳಿ ನಗರದಲ್ಲಿನ ಅಂಗಡಿ ಮುಂಗಟ್ಟುಗಳು‌ ಮುಚ್ಚಿದ್ದು ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಸಾರಿಗೆ ಸಂಸ್ಥೆಯ ಬಸ್‌ಗಳು, ಆಟೋ, ಕ್ಯಾಬ್‌ಗಳು ರಸ್ತೆಗಿಳಿಯಲಿಲ್ಲ. ಮಾರುಕಟ್ಟೆಗಳು ಬಣಗುಡುತ್ತಿದ್ದವು. ಔಷಧ,‌ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಕೊಡಲಾಗಿತ್ತು. ಈ ನಡುವೆ ಪ್ರಮುಖ‌ ವೃತ್ತಗಳಲ್ಲಿ ಪೊಲೀಸ್ ಕಣ್ಗಾವಲು ಇರಿಸಲಾಗಿತ್ತು. ಸರ್ಕಾರದ ಆದೇಶವನ್ನು ಜನ ಚಾಚೂ ತಪ್ಪದೆ ಪಾಲಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕೆಲವು ಕಡೆ ಜನರು ಅನಗತ್ಯವಾಗಿ ಓಡಾಡಿದ್ದು ಕಂಡುಬಂತು. ಹೀಗಾಗಿ ಜನರಿಗೆ ಬುದ್ಧಿ ವಾದ ಹೇಳಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಜಂಟಿಯಾಗಿ ಹುಬ್ಬಳ್ಳಿ ನಗರದಲ್ಲಿ‌ ಗಸ್ತು ಸಂಚಾರ ಮಾಡಿದರು. ಅಲ್ಲದೆ, ಈ ಮೂಲಕ ಲಾಕ್‌ಡೌನ್, ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ರಾಜ್ಯಕ್ಕೆ ಕೈಕೊಟ್ಟ ಮುಂಗಾರು, ಹಲವೆಡೆ ಬರದ ಛಾಯೆ; ಈವರೆಗೆ ಎಲ್ಲಿಲ್ಲಿ ಎಷ್ಟೆಷ್ಟು ಮಳೆ? ಇಲ್ಲಿದೆ ವರದಿ

ನವನಗರ, ವಿದ್ಯಾನಗರ, ಹೊಸೂರು‌ ವೃತ್ತ, ಚನ್ನಮ್ಮ ಸರ್ಕಲ್, ಕೆ.ಸಿ. ಸರ್ಕಲ್, ಕೇಶ್ವಾಪುರ, ಶಬರಿನಗರ, ಕುಸುಗಲ್ ರಸ್ತೆ, ರಮೇಶ್ ಭವನ ಸರ್ಕಲ್, ಸ್ಟೇಷನ್ ರೋಡ್, ದುರ್ಗದ ಬೈಲ್, ಡಾಕಪ್ಪನ ಸರ್ಕಲ್, ಹಳೇ ಹುಬ್ಬಳ್ಳಿ , ಇಂಡಿ ಪಂಪ್, ಗೋಕಲ ರಸ್ತೆಯಲ್ಲಿ ಸಂಚರಿಸಿ ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಜನರಿಗೆ ತಿಳುವಳಿಕೆಯೊಂದಿಗೆ ಎಚ್ಚರಿಕೆ ನೀಡಿದರು. ಪರಿಶೀಲನೆ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಮತ್ತು ಕಾರ್ ಗಳನ್ನು ಪೊಲೀಸ್ ಆಯುಕ್ತರ ಸೂಚನೆ ಮೆರೆಗೆ ವಶಕ್ಕೆ ಪಡೆದು ಕರ್ಫ್ಯೂ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸಲು ಸೂಚಿಸಿದರು.
Published by: MAshok Kumar
First published: July 6, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading