ಹುಬ್ಬಳ್ಳಿ; ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಲು ವಿಳಂಬ ಮಾಡಿದ ಇಬ್ಬರು ಅಧಿಕಾರಿಗಳನ್ನು ಕೂಡಿಹಾಕಿದ ರೈತರು

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ರೈತರಿಂದ ಯಾವುದೇ ಉತ್ಪನ್ನಗಳನ್ನು ಖರೀದಿಗೂ ಸಹ ಅಧಿಕಾರಿಗಳು ಇದೇ ರೀತಿ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಬೇಕು, ಸೂಕ್ತ ಕ್ರಮ ಜರುಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಅಧಿಕಾರಿಗಳನ್ನು ಕೂಡಿ ಹಾಕಿರುವ ಗ್ರಾಮಸ್ಥರು.

ಅಧಿಕಾರಿಗಳನ್ನು ಕೂಡಿ ಹಾಕಿರುವ ಗ್ರಾಮಸ್ಥರು.

  • Share this:
ಹುಬ್ಬಳ್ಳಿ; ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸುವ ಕೇಂದ್ರದಲ್ಲಿ ಅಧಿಕಾರಿಗಳಿಬ್ಬರನ್ನು ರೈತರು ಕೂಡಿ ಹಾಕಿದ್ದ ಘಟನೆ ಹುಬ್ಬಳ್ಳಿ ತಾರಿಹಾಳದಲ್ಲಿ ನಡೆದಿದೆ. ತಾರಿಹಾಳದಲ್ಲಿನ ಸರ್ಕಾರದ ಹತ್ತಿ ಖರೀದಿ ಕೇಂದ್ರಕ್ಕೆ ಎಂದಿನಂತೆ ರೈತರು ಹತ್ತಿಯನ್ನು ತಂದಿದ್ದರು. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹತ್ತಿ ಪೂರೈಸಲು ಕಾಯುತ್ತಿದ್ದರು. ಆದರೆ ಸಂಜೆಯಾಗುತ್ತಿದ್ದಂತೆ ಅಧಿಕಾರಿಗಳು ಸಮಯವಾಗಿದೆ ನಾಳೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ನಾವೆಲ್ಲಾ ದೂರದಿಂದ ಬಂದಿದ್ದು ದಯಮಾಡಿ ತೆಗೆದುಕೊಳ್ಳಿ ಎಂದು ರೈತರು ಮನವಿ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು ಒಪ್ಪಿಲ್ಲ. ನಾಳೆ ಬನ್ನಿ ಎಂದು ಗದರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಕಚೇರಿಯಲ್ಲಿದ್ದ ಇಬ್ಬರು ಅಧಿಕಾರಿಗಳನ್ನು ಒಳಗಡೆಯೇ ಕೂಡಿ ಹಾಕಿದ್ದಾರೆ. ಅಧಿಕಾರಿಗಳಾದ ಪ್ರದೀಪ ಮತ್ತು ಪ್ರಕಾಶ್‌ರನ್ನು ಕಚೇರಿಯ ಒಳಗಡೆ ಕಳಿಸಿ ಬೀಗ ಹಾಕಿದ್ದಾರೆ.

ಹುಬ್ಬಳ್ಳಿಯ ಸುತ್ತ ಮುತ್ತಲಿನ ಭಾಗದ ರೈತರು ಇಪ್ಪತ್ತಕ್ಕೂ ಹೆಚ್ಚು ಟ್ರಾಕ್ಟರ್‌‌ಗಳಲ್ಲಿ ತುಂಬಿ ತಂದಿದ್ದ ಹತ್ತಿಯನ್ನು ಖರೀದಿಸುವಂತೆ ಪಟ್ಟು ಹಿಡಿದಿದ್ದಾರೆ. ಹತ್ತಿ ಖರೀದಿಸಲು ಒಪ್ಪಿದ ನಂತರವೇ ಅಧಿಕಾರಿಗಳನ್ನು ಹೊರಗೆ ಬಿಡಲಾಗಿದೆ.

ಇದನ್ನೂ ಓದಿ : ರೈತರ ಸಂಕಷ್ಟ ನೋಡಲಾಗುತ್ತಿಲ್ಲ; ಹೋರಾಟದಲ್ಲಿ ಆತ್ಮಹತ್ಯೆಗೆ ಶರಣಾದ ಸಿಖ್ ಗುರು

ಅಲ್ಲದೆ, ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ರೈತರಿಂದ ಯಾವುದೇ ಉತ್ಪನ್ನಗಳನ್ನು ಖರೀದಿಗೂ ಸಹ ಅಧಿಕಾರಿಗಳು ಇದೇ ರೀತಿ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಬೇಕು, ಸೂಕ್ತ ಕ್ರಮ ಜರುಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
Published by:MAshok Kumar
First published: