ಹುಬ್ಬಳ್ಳಿ- ಧಾರವಾಡದಲ್ಲಿ ಕೊರೋನಾ ವ್ಯಾಕ್ಸಿನ್ ಹಂಚಿಕೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಕಲ ಸಿದ್ಧತೆ

ಗ್ರಾಮೀಣ ಭಾಗಕ್ಕಿಂದ ನಗರದಲ್ಲಿ ವ್ಯಾಕ್ಸಿನ್ ನೀಡುವುದೇ ದೊಡ್ಡ ಸವಾಲು ಅಂತಿದ್ದಾರೆ ವೈದ್ಯರು. ನ್ಯೂಸ್​18 ಜೊತೆ ಮಾತನಾಡಿರುವ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡೆಪ್ಪನವರ್ ಕೊವಿಡ್ ವ್ಯಾಕ್ಸಿನ್ ಸಂಗ್ರಹ ಮತ್ತು ಲಸಿಕೆ ನೀಡಲು ಮಾಡಿರುವ ಸಿದ್ಧತೆಗಳ ಕುರಿತು ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಹುಬ್ಬಳ್ಳಿ (ಜನವರಿ 05); ಹುಬ್ಬಳ್ಳಿ- ಧಾರವಾಡದಲ್ಲಿ ಕೊರೋನಾ ವ್ಯಾಕ್ಸಿನ್ ಹಂಚಿಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ‌. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಲಸಿಕೆ‌ ಸಂಗ್ರಹಕ್ಕೆ ಐ‌ಎಲ್‌ಆರ್  ಡೀಪ್ ಫ್ರೀಜರ್‌ಗಳು ಸಜ್ಜಾಗಿವೆ. ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಪೋಲಿಯೋ,  ಬಿಸಿಜಿ, ಎಪಿಟೈಟಿಸ್ ಬಿ, ಬರ್ತ್ ಡೋಸ್, ಪ್ಯಾಂಟಾ, ರೋಟಾ ವೈರಸ್, ಡಿಪಿಟಿ, ಮತ್ತು ಟಿಡಿ ಲಿಸಿಕೆಗಳನ್ನು ಫ್ರೀಜರ್‌ಗಳಲ್ಲಿ ಸಂಗ್ರಹಿಸಿ ಇಡಲಾಗಿದೆ. ಅದೇ ವ್ಯವಸ್ಥೆಯನ್ನು ಕೊರೊನಾ ವ್ಯಾಕ್ಸಿನ್ ಸಂಗ್ರಹಕ್ಕೆ‌ ಬಳಕೆ ಮಾಡಲು ತಯಾರಿ ನಡೆದಿದೆ. ಧಾರವಾಡ ಜಿಲ್ಲೆಯಲ್ಲಿ 40 ಲಕ್ಷ ಡೋಜ್ ಸಂಗ್ರಹ ಸಾಮರ್ಥ್ಯವಿದೆ‌. ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಈಗಾಗಲೇ 20 ಸಾವಿರ ಡೋಜ್ ಸಂಗ್ರಹಕ್ಕೆ ಐಎಲ್ಆರ್ ವ್ಯವಸ್ಥೆಯಿದೆ. ಎಸ್.ಡಿಎಂ ಆಸ್ಪತ್ರೆ ಮತ್ತು ರೈಲ್ವೆ ಆಸ್ಪತ್ರೆಯಲ್ಲೂ ವ್ಯಾಕ್ಸಿನ್ ಸಂಗ್ರಹಕ್ಕೆ ಅವಕಾಶವಿದೆ.

ಧಾರವಾಡ ಜಿಲ್ಲೆಯಲ್ಲಿ ವ್ಯಾಕ್ಸಿನ್ ಸಂಗ್ರಹಕ್ಕಿಂತ ವಿತರಣೆಯದ್ದೇ ದೊಡ್ಡ ಸವಾಲು. 21 ದಿನಗಳಲ್ಲಿ ಎರಡನೇ ಡೋಜ್ ಕೊಡುವುದು ದೊಡ್ಡ ಸವಾಲಾಗಿದೆ. ಆದ್ದರಿಂದ ಎಲ್ಲಾ ಜನರಿಗೆ ವ್ಯಾಕ್ಸಿನ್ ಕೊಟ್ಟು ಮುಗಿಸಲು ಯುದ್ಧೋಪಾದಿ ತಯಾರಿ ನಡೆದಿದೆ‌.  ಧಾರವಾಡ ಜಿಲ್ಲಾಡಳಿತ ಇದಕ್ಕೆ ಬೇಕಾದ ಸಕಲ ರೀತಿಯ ಪ್ಲ್ಯಾನ್‌ಗಳನ್ನು ಮಾಡುತ್ತಿದೆ.

ಗ್ರಾಮೀಣ ಭಾಗಕ್ಕಿಂದ ನಗರದಲ್ಲಿ ವ್ಯಾಕ್ಸಿನ್ ನೀಡುವುದೇ ದೊಡ್ಡ ಸವಾಲು ಅಂತಿದ್ದಾರೆ ವೈದ್ಯರು. ನ್ಯೂಸ್​18 ಜೊತೆ ಮಾತನಾಡಿರುವ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡೆಪ್ಪನವರ್ ಕೊವಿಡ್ ವ್ಯಾಕ್ಸಿನ್ ಸಂಗ್ರಹ ಮತ್ತು ಲಸಿಕೆ ನೀಡಲು ಮಾಡಿರುವ ಸಿದ್ಧತೆಗಳ ಕುರಿತು ವಿವರಿಸಿದ್ದಾರೆ.

ಇದನ್ನೂ ಓದಿ : ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ್ ಪೈಪ್​ಲೈನ್​ ಅನ್ನು ಇಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಜಿಲ್ಲೆಯಾದ್ಯಂತ ಶಾಲಾ- ಕಾಲೇಜುಗಳು ಫುಲ್ ಭರ್ತಿ:‘

ಹುಬ್ಬಳ್ಳಿ- ಧಾರವಾಡ ಸೇರಿದಂತೆ ಜಿಲ್ಲೆಯಾದ್ಯಂತ ಶಾಲಾ- ಕಾಲೇಜುಗಳು ವಿದ್ಯಾರ್ಥಿಗಳಿಂದ ಭರ್ತಿಯಾಗಿವೆ. ಕ್ಲಾಸ್ ರೂಮ್‌ಗಳು ಸಂಪೂರ್ಣ ತುಂಬಿ ತುಳುಕುತ್ತಿವೆ. ದ್ವಿತೀಯ ಪಿಯುಸಿ, ಪದವಿ ಹಾಗೂ ಎಸ್‌ಎಸ್‌ಎಲ್‌ಸಿ ಕ್ಲಾಸ್ ರೂಮ್‌ಗಳು ಫುಲ್ ಆಗಿರುವುದು ಕಂಡುಬರುತ್ತಿದೆ. ಹುಬ್ಬಳ್ಳಿಯ ಮಹಿಳಾ‌ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದ್ದು ಒಂದು ಬೆಂಚ್‌ನಲ್ಲಿ ಇಬ್ಬರನ್ನು ಕೂಡಿಸಿ ಪಾಠ ಮಾಡಲಾಗುತ್ತಿದೆ.

ಕ್ಲಾಸ್ ರೂಮ್ ಗಳು ವಿಶಾಲವಾಗಿದ್ದು ಹೆಚ್ಚಿಗೆ ವಿದ್ಯಾರ್ಥಿಗಳನ್ನು ಕೂಡಿಸಿದ್ದೇವೆ ಎಂದ ಶಿಕ್ಷಕರು ಹೇಳುತ್ತಿದ್ದಾರೆ. ವಿದ್ಯಾರ್ಥಿನಿಯರು ಮಾಸ್ಕ್ ಧರಿಸಿ ತರಗತಿಗೆ ಹಾಜರಾಗಿದ್ದಾರೆ. ಕಾಲೇಜಿನ ಆವರಣದಲ್ಲಿ ಸ್ಯಾನಿಟೈಜರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಕೊವಿಡ್ ನಿಯಮ ಪಾಲಿಸಿ ತರಗತಿಗಳನ್ನು ನಡೆಸುವುದಾಗಿ ಶಿಕ್ಷಕ ವೃಂಧ ಹೇಳಿದ್ರೆ, ಸದ್ಯಕ್ಕೆ ಕ್ಲಾಸ್‌ಗಳು ಸಹಜ ಸ್ಥಿತಿಯಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ ಎಂದು ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
Published by:MAshok Kumar
First published: