ಹುತಾತ್ಮ‌ ಯೋಧರ ಕುಟುಂಬಕ್ಕೆ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ವಿತರಣೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹುತಾತ್ಮ ಸೈನಿಕರ ಕುಟುಂಬಕ್ಕೆ ನಿವೇಶನ ಪತ್ರವನ್ನು ನೀಡಿದರು.

ಹುತಾತ್ಮ ಸೈನಿಕರ ಕುಟುಂಬಕ್ಕೆ ನಿವೇಶನ ನೀಡಿದ ಸಚಿವ ಜಗದೀಶ್‌ ಶೆಟ್ಟರ್‌.

ಹುತಾತ್ಮ ಸೈನಿಕರ ಕುಟುಂಬಕ್ಕೆ ನಿವೇಶನ ನೀಡಿದ ಸಚಿವ ಜಗದೀಶ್‌ ಶೆಟ್ಟರ್‌.

  • Share this:
ಧಾರವಾಡ; ಜಿಲ್ಲೆಯ ಹುತಾತ್ಮ ಯೋಧರಾದ ಹಸನ್ ಸಾಬ್ ಖುದಾಬಂದ್ ಹಾಗೂ ಬಸಪ್ಪ ಭಜಂತ್ರಿ ಅವರ ಕುಟುಂಬಕ್ಕೆ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಧಾರವಾಡ ಲಕ್ಕಮ್ಮನಹಳ್ಳಿಯಲ್ಲಿ ಉಚಿತವಾಗಿ ನಿವೇಶನಗಳನ್ನು ನೀಡಲಾಯಿತು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹುತಾತ್ಮ ಸೈನಿಕರ ಕುಟುಂಬಕ್ಕೆ ನಿವೇಶನ ಪತ್ರವನ್ನು ನೀಡಿದರು. ಈ ವೇಳೆ ಸೈನಿಕ ಹಸನ್ ಸಾಬ್ ಖುದಾಬಂದ್ ತಾಯಿ ಜನತ್ ಬಿ ಖುದಾಬಂದ್, ಸಿ.ಆರ್.ಪಿ.ಎಫ್ ಯೋಧ ಬಸಪ್ಪ ಭಜಂತ್ರಿ ಪತ್ನಿ ರೇಣುಕಾ ಭಜಂತ್ರಿ ನಿವೇಶನ ಪತ್ರಗಳನ್ನು ಪಡೆದುಕೊಂಡರು.

ಇದನ್ನೂ ಓದಿ : M Vasudeva Maiya Suicide: ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ, ಮಾಜಿ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ

ಈ ಸಂದರ್ಭದಲ್ಲಿ ಸಚಿವ ಶೆಟ್ಟರ್ ಜೊತೆಗೆ, ಹುಡಾ ಅಧ್ಯಕ್ಷ‌ ನಾಗೇಶ್ ಕಲಬುರ್ಗಿ, ಶಾಸಕರುಗಳಾದ ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ್, ಶ್ರೀನಿವಾಸ ಮಾನೆ, ಪ್ರದೀಪ್ ‌ಶೆಟ್ಟರ್, ಸಿ.ಎಂ.ನಿಂಬಣ್ಣನವರ, ಹುಡಾ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ‌ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸೇರಿದಂತೆ ಹುಡಾ ಸದಸ್ಯರು ‌ಉಪಸ್ಥಿತರಿದ್ದರು.
Published by:MAshok Kumar
First published: