ವೈದ್ಯರ ಕುಟುಂಬಕ್ಕೆ ಕೊರೋನಾ ಸೋಂಕು: ಧಾರವಾಡದಲ್ಲಿ ಒಂದೇ ದಿನ 15 ಪಾಸಿಟಿವ್

ಕಿಮ್ಸ್ ವೈದ್ಯನ ಮಕ್ಕಳನ್ನೂ ಬಿಡದೇ ಕೊರೊನಾ ಸೋಂಕು ತಗುಲಿದೆ. ನಿನ್ನೆ ನಗರದ ಕೆಂಪಗೇರಿ ನಿವಾಸಿ ಪಿ-8286 ಕಿಮ್ಸ್ ವೈದ್ಯನಿಗೆ ದೃಢಪಟ್ಟಿತ್ತು. ವೈದ್ಯನ 25 ವರ್ಷದ ಮಗ ಪಿ-8751 ಮತ್ತು 15 ವರ್ಷದ ಮಗ ಪಿ-8752ನಿಗೂ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಧಾರವಾಡ: ವೈದ್ಯನಿಗೆ ಹಾಗೂ ವೈದ್ಯನ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ ಘಟನೆ ಧಾರವಾಡ ‌ಜಿಲ್ಲೆಯಲ್ಲಿ ನಡೆದಿದೆ. ಇಂದು ಧಾರವಾಡದಲ್ಲಿ ಮತ್ತೆ ಒಂದೇ ದಿನ 15 ಜನರಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ಧಾರವಾಡ ಜನರ ನಿದ್ದೆಗೆಡಿಸಿದೆ. ಧಾರವಾಡ ಜಿಲ್ಲೆಯ ಸೋಂಕಿತರ ಸಂಖ್ಯೆ 198 ಕ್ಕೆ ಏರಿದೆ.

ಕಿಮ್ಸ್ ವೈದ್ಯನ ಮಕ್ಕಳನ್ನೂ ಬಿಡದೇ ಕೊರೊನಾ ಸೋಂಕು ತಗುಲಿದೆ. ನಿನ್ನೆ ನಗರದ ಕೆಂಪಗೇರಿ ನಿವಾಸಿ ಪಿ-8286 ಕಿಮ್ಸ್ ವೈದ್ಯನಿಗೆ ದೃಢಪಟ್ಟಿತ್ತು. ವೈದ್ಯನ 25 ವರ್ಷದ ಮಗ ಪಿ-8751 ಮತ್ತು 15 ವರ್ಷದ ಮಗ ಪಿ-8752ನಿಗೂ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ವೈದ್ಯನಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಕೊರೊನಾ ವಾರಿಯರ್ಸ್‌ ರಲ್ಲಿ ಭಯ ಮೂಡಿದೆ.

ಉಳಿದಂತೆ ಹುಬ್ಬಳ್ಳಿ ಉಣಕಲ್ಲನ ಪಿ-7384ರ ಸಂಪರ್ಕದಿಂದ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿ ನೂರಾನಿ ಪ್ಲಾಟ್‌ನ ಪಿ-7036ರಿಂದ ಇಬ್ಬರಿಗೆ ಸೋಂಕು ಹರಡಿದ್ದು, ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಪಿ-6839 ರಿಂದ ಒಬ್ಬರಿಗೆ, ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದ ಪಿ-6254ರ ಸಂಪರ್ಕದಿಂದ ಯುವತಿಗೆ, ಮೊರಬದ ಪಿ-7948ರಿಂದ ಒಬ್ಬನಿಗೆ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿ: ಭ್ರಷ್ಟರ ಸಿಂಹಸ್ವಪ್ನ ಕರ್ನಾಟಕದ ‘ಖೇಮ್ಕಾ’ ಕೆ ಮಥಾಯ್ ಈಗ ವಕೀಲರಾಗಿ ಎರಡನೇ ಇನ್ನಿಂಗ್ಸ್ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರಿಗೆ, ಬಹರೇನ್‌ದಿಂದ ಬಂದಿರೋ ಓರ್ವನಿಗೆ, ಕಂಟೈನ್ಮೆಂಟ್ ಝೋನ್‌ಗೆ ಭೇಟಿ ನೀಡಿದ ಯುವಕನಿಗೂ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಿಗೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವರದಿ: ಮಂಜುನಾಥ ಯಡಳ್ಳಿ
First published: