HOME » NEWS » District » HUBLI CORPORATION GETS LIFE SAVING INSTRUMENTS AND MOBILE VETERINARY HOSPITAL SNVS

ಹುಬ್ಬಳ್ಳಿಗೆ ಪ್ರಕೃತಿ ವಿಕೋಪ ನಿರ್ವಹಣೆಯ ಜೀವರಕ್ಷಕ ಸಾಮಗ್ರಿಗಳು, ಸಂಚಾರಿ ಪಶು ಚಿಕಿತ್ಸಾಲಯ

ಸಚಿವ ಜಗದೀಶ್ ಶೆಟ್ಟರ್ ಅವರು ಪ್ರಕೃತಿ ವಿಕೋಪ ಘಟನೆಗಳಲ್ಲಿ ಕಾರ್ಯಾಚರಣ ನಡೆಸಲು ಅಗತ್ಯವಿರುವ ಜೀವ ರಕ್ಷಕ ಸಾಮಗ್ರಿಗಳನ್ನು ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಹಸ್ತಾಂತರಿಸಿದರು. ಹಾಗೆಯೇ, ಸಂಚಾರಿ ಪಶು ಚಿಕಿತ್ಸಾಲಯಕ್ಕೂ ಚಾಲನೆ ನೀಡಿದರು.

news18-kannada
Updated:September 8, 2020, 11:30 AM IST
ಹುಬ್ಬಳ್ಳಿಗೆ ಪ್ರಕೃತಿ ವಿಕೋಪ ನಿರ್ವಹಣೆಯ ಜೀವರಕ್ಷಕ ಸಾಮಗ್ರಿಗಳು, ಸಂಚಾರಿ ಪಶು ಚಿಕಿತ್ಸಾಲಯ
ಪ್ರಕೃತಿ ವಿಕೋಪ ನಿರ್ವಹಣೆಗೆ ಜೀವ ರಕ್ಷಕ ಸಾಮಗ್ರಿಗಳು
  • Share this:
ಹುಬ್ಬಳ್ಳಿ(ಸೆ. 08): ಪ್ರಕೃತಿಯ ವಿಕೋಪ ಎದುರಿಸಲು ಧಾರವಾಡ‌ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ದವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ನಗರದ ಸರ್ಕ್ಯೂಟ್ ಹೌಸ್​ನಲ್ಲಿಂದು ಪ್ರಕೃತಿ ವಿಕೋಪ ನಿರ್ವಹಣೆಯ ಜೀವ ರಕ್ಷಕ ಸಾಮಗ್ರಿಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಮಾತನಾಡಿದ ಅವರು, ಜನರೇಟರ್ ಮತ್ತು ಕಾಂಕ್ರೀಟ್ ಕತ್ತರಿಸುವ ಯಂತ್ರಗಳು ಆಪಾತ್ಕಾಲದಲ್ಲಿ ಸಹಾಯಕ್ಕೆ ಬರುತ್ತವೆ ಎಂದರು.

ಸಂಚಾರಿ ಪಶು ಚಿಕಿತ್ಸಾಲಯಕ್ಕೆ ಚಾಲನೆ:

ಇದೇ ಸಂದರ್ಭದಲ್ಲಿ ಸಚಿವರು ಸಂಚಾರಿ ಪಶು ಚಿಕಿತ್ಸಾಲಯಕ್ಕೆ ಚಾಲನೆ ನೀಡಿದರು. ತುರ್ತು ಸಂದರ್ಭದಲ್ಲಿ ಜಾನುವಾರುಗಳ ಸ್ಥಳಗಳಿಗೆ ತೆರಳಿ ಚಿಕಿತ್ಸೆ ನೀಡಲಾಗುತ್ತದೆ.‌ ಸಂಚಾರಿ ಚಿಕಿತ್ಸಾಲಯದಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಾದ ಉಪಕರಣಗಳನ್ನು ಅಳವಡಿಸಲಾಗಿದೆ. ಪಶುತಜ್ಞರು ವಾಹನದ ಜೊತೆಗೆ ಇರುತ್ತಾರೆ. ರೈತರು ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಬಹುದು ಎಂದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಪಿಂಚಣಿ ಬಂದಿಲ್ಲ, ಬದುಕಲು ಆಗುತ್ತಿಲ್ಲ, ದಯಾಮರಣ ನೀಡಿ: ನಿವೃತ್ತ ಶಿಕ್ಷಕರಿಂದ ರಾಷ್ಟ್ರಪತಿಗೆ ಮನವಿ

ಧಾರವಾಡ ಜಿಲ್ಲೆಯಲ್ಲಿ 13021 ಕೋವಿಡ್  ಪ್ರಕರಣಗಳು: 10,228 ಜನ ಗುಣಮುಖ

ಧಾರವಾಡ ಜಿಲ್ಲೆಯಲ್ಲಿ ಇಂದು 29 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13021ಕ್ಕೆ ಏರಿದೆ. ಇದುವರೆಗೆ 10,228 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2413 ಪ್ರಕರಣಗಳು ಸಕ್ರಿಯವಾಗಿವೆ.  68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 356 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ನಿನ್ನೆ ಪ್ರಕರಣಗಳು ಪತ್ತೆಯಾದ ಸ್ಥಳಗಳು:ಧಾರವಾಡ ತಾಲೂಕು: ಹೆಬ್ಬಳ್ಳಿ ಗ್ರಾಮ, ಮನಕಿಲ್ಲಾ ಕುಂಬಾರ ಓಣಿ, ಎಮ್ ಆರ್ ನಗರ, ಯಾಲಕ್ಕಿ ಶೆಟ್ಟರ್ ಕಾಲೋನಿ, ಸಾರಸ್ವತಪುರ, ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ, ಟ್ರೈನಿಂಗ್ ಕಾಲೇಜು ರಸ್ತೆ.

ಇದನ್ನೂ ಓದಿ: ಗುಣಮುಖರಾದವರಿಗೆ ಮತ್ತೆ ಕೊರೋನಾ ಸೋಂಕು; ಕ್ಲಿನಿಕಲ್ ಸ್ಟಡಿ‌ ನಡೆಸಲು ಸಚಿವ ಕೆ. ಸುಧಾಕರ್ ಸೂಚನೆ

ಹುಬ್ಬಳ್ಳಿ ತಾಲೂಕು: ಗೋಕುಲ ರಸ್ತೆಯ ಮಂಜುನಾಥ ನಗರ, ನವನಗರ, ಸಿದ್ದೇಶ್ವರ ಪಾರ್ಕ್, ಮಂಟೂರ, ಹೆಬಸೂರ, ಗೋಕುಲ ರಸ್ತೆಯ ತೋಳನಕೇರಿ ಸರಸ್ವತಿಪುರ ಹತ್ತಿರ, ವಿದ್ಯಾನಗರ, ಸಾಯಿ ನಗರ, ಶ್ರೀನಿಧಿ ಕಾಲೋನಿ, ಶಿರಡಿ ನಗರ.

ಕಲಘಟಗಿ ತಾಲೂಕಿನ ಶೀಗಿಗಟ್ಟಿ, ಕುಂದಗೋಳ ತಾಲೂಕಿನ ನೀಲಗುಂದ, ಅಲ್ಲಾಪುರ ಹನುಮಂತ ಗುಡಿ ಹತ್ತಿರ, ಬಾಲಿ ತೋಟದ ಓಣಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಗಸನಹಳ್ಳಿ, ಹಿರೇಕೆರೂರ, ಕೊಪ್ಪಳ ಜಿಲ್ಲೆಯ ಗಂಗಾವತಿಯ ಇಲಾಹಿ ಕಾಲೋನಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.
Published by: Vijayasarthy SN
First published: September 8, 2020, 11:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories