ಕೊರೋನಾ ಸೋಂಕಿತರ ಸೇವೆಗೆ ರೊಬೋಟಿಕ್ ಯಂತ್ರ; ಹುಬ್ಬಳ್ಳಿ ವಿದ್ಯಾರ್ಥಿಗಳಿಂದ ಆವಿಷ್ಕಾರ

ಕೆಎಲ್ಇ ಇಂಜಿನಿಯರಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಕಿರಣ್, ಸಂತೋಷ, ಮದನ್, ಅಭಿಲಾಷ್, ಕಾರ್ತಿಕ, ಅಭಿಷೇಕ, ವಿನಾಯಕ್‌ ತಂಡ ರೊಬೋಟಿಕ್ ಯಂತ್ರ ತಯಾರಿಸಿದ್ದಾರೆ

ರೊಬೋಟಿಕ್ ಯಂತ್ರ

ರೊಬೋಟಿಕ್ ಯಂತ್ರ

  • Share this:
ಹುಬ್ಬಳ್ಳಿ(ಅಕ್ಟೋಬರ್​. 08): ಕೋವಿಡ್ ಸೋಂಕಿತರ ಚಿಕಿತ್ಸೆಗೆ ವೈದ್ಯರು ಮತ್ತು ಆಸ್ಪತ್ರೆಗಳ ಅರೆ ವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಕೋವಿಡ್ 19 ಸೋಂಕಿತರ ಸೇವೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಂಕಲ್ಪ ಮಾಡಿದ್ದ ಹುಬ್ಬಳ್ಳಿಯ ಕೆಎಲ್ಇ ಟೆಕ್ನಾಲಜಿಕಲ್ ವಿಶ್ವವಿದ್ಯಾಲಯ ಹಾಗೂ ಕೆಎಲ್ಇ ಇನ್ಸ್​​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ವಿಶೇಷ ಯಂತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್‌ನ ಡಾ.ವಿ.ಎಸ್.ವಿ. ಪ್ರಸಾದ ಅವರ ಪ್ರಾಯೋಜಕತ್ವದಲ್ಲಿ ಸ್ವಯಂ ಚಾಲಿತ ರೊಬೋಟಿಕ್ ವಾಹನವನ್ನು ಅಭಿವೃದ್ಧಿ ಪಡಿಸಿದ್ದಾರೆ. ನೂತನ ರೊಬೋಟಿಕ್ ವಾಹನಕ್ಕೆ ಪ್ರಧಾಯ ಎಂದು ನಾಮಕರಣ ಮಾಡಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಪ್ರಧಾಯ ರೊಬೋಟಿಕ್ ವಾಹನವನ್ನು ಕಿಮ್ಸ್ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ.‌ ಕಿಮ್ಸ್ ತಜ್ಞ ವೈದ್ಯ ಡಾ.ಎಸ್.ವೈ. ಮುಲ್ಕಿ ಪಾಟೀಲ ಅವರ ವಿನೂತನ ಆಲೋಚನೆಗಳು ಮತ್ತು ಪ್ರೇರಣೆಯಿಂದ ಈ ಯೋಜನೆಯನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳು‌ ಕೈಗೆತ್ತಿಕೊಂಡಿದ್ದರು.

ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಅವರು ಸ್ವಯಂಚಾಲಿತ ಮಾರ್ಗದರ್ಶಿ ವಾಹನ ಅಭಿವೃದ್ಧಿ‌ಕುರಿತು ಮಾರ್ಗದರ್ಶನ ನೀಡಿದ್ದರು. ‌ರೊಬೋಟಿಕ್ ಯಂತ್ರ ಅಭಿವೃದ್ಧಿ ಪಡಿಸಿದರೆ ಕೋವಿಡ್ ವಾರ್ಡ್​​ ಗಳಲ್ಲಿ ರೋಗಿಗಳಿಗೆ ಆಹಾರ, ಔಷಧ ವಿತರಣೆಗೆ ಸಹಕಾರಿಯಾಗುತ್ತದೆ ಎಂಬ ಸಲಹೆ ನೀಡಿದ್ದರು.

ಆಗ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ್ ಅವರು ಈ ಹೊಸ ವಿಚಾರದಿಂದ ಸ್ಫೂರ್ತಿಗೊಂಡು ತಮ್ಮ ಪ್ರೋತ್ಸಾಹ ನೀಡಿದ್ದರು. ಕೈಗಾರಿಕೆ ಜಂಟಿ ನಿರ್ದೇಶಕರಾಗಿದ್ದ ಮೋಹನ್ ಭರಮಕ್ಕನವರ ಅವರಿಗೆ ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲು ಸೂಚಿಸಿದ್ದರು. ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಆಸಕ್ತಿ ಕಂಡು ಹುಬ್ಬಳ್ಳಿಯ ಸ್ವರ್ಣಾ ಗ್ರೂಪಿನ ಡಾ.ವಿ.ಎಸ್.ವಿ. ಪ್ರಸಾದ್ ಪ್ರಾಯೋಜಕತ್ವ ನೀಡಲು ಮುಂದೆ ಬಂದಿದ್ದರು.‌

ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಪ್ರಯತ್ನದಿಂದ ರೊಬೋಟಿಕ್ ಯಂತ್ರ ರೂಪು ತಳೆದಿದೆ. ಕೆಎಲ್ಇ ಇಂಜಿನಿಯರಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಕಿರಣ್, ಸಂತೋಷ, ಮದನ್, ಅಭಿಲಾಷ್, ಕಾರ್ತಿಕ, ಅಭಿಷೇಕ, ವಿನಾಯಕ್‌ ತಂಡ ರೊಬೋಟಿಕ್ ಯಂತ್ರ ತಯಾರಿಸಿದ್ದಾರೆ. ಆಸಕ್ತ ವಿದ್ಯಾರ್ಥಿಗಳ ತಂಡಕ್ಕೆ ಪ್ರಾಧ್ಯಾಪಕರಾದ ಡಾ. ರವಿ ಗುತ್ತಲ ಮತ್ತು ಡಾ.ಎಸ್.ಸಿ. ಸಜ್ಜನ ಮಾರ್ಗದರ್ಶನ ನೀಡಿದ್ದಾರೆ.

ಇದನ್ನೂ ಓದಿ : ಮಹದಾಯಿ ವಿಚಾರದಲ್ಲಿ ಗೋವಾದಿಂದ ಮತ್ತೆ ಕ್ಯಾತೆ ; ಕರ್ನಾಟಕದಿಂದ ಅಕ್ರಮ ಎಂದು ಗೋವಾ ಸಿಎಂ ಆರೋಪ

ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವೈದ್ಯರು ಮತ್ತು ಅಧಿಕಾರಿಗಳ ಪ್ರಯತ್ನದ ಫಲವಾಗಿ ಪ್ರಧಾಯ ರೊಬೋಟಿಕ್ ಯಂತ್ರ ಸಿದ್ಧಗೊಂಡಿದೆ. ಕಿಮ್ಸ್‌ನಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಕೊರೋನಾ ಸೋಂಕಿತರ ಸೇವೆಗೆ ಸಮರ್ಪಣೆ ಗೊಂಡಿದೆ.

ಯಂತ್ರ ಹಸ್ತಾಂತರ ಸಮಾರಂಭದಲ್ಲಿ ಹಾಜರಿದ್ದ ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ವೈದ್ಯಕೀಯ ಅಧೀಕ್ಷಕ ಡಾ. ಅರುಣ್​​ಕುಮಾರ್ ಸೇರಿದಂತೆ ಹಲವು‌ ಗಣ್ಯರು ರೊಬೋಟಿಕ್ ಯಂತ್ರದ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
Published by:G Hareeshkumar
First published: